ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ತೆಲಂಗಾಣದ ಕೊವಿಡ್-19 ಆಸ್ಪತ್ರೆಯಲ್ಲೇ ಪ್ರವಾಹ ಪರಿಸ್ಥಿತಿ!

|
Google Oneindia Kannada News

ಹೈದ್ರಾಬಾದ್, ಜುಲೈ.16: ಕೊರೊನಾವೈರಸ್ ಸೋಂಕಿನ ಹರಡುವಿಕೆ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವುದರಲ್ಲೇ ಸರ್ಕಾರಗಳು ಹೈರಾಣಾಗುತ್ತಿವೆ. ಇದರ ನಡುವೆ ಮಳೆ ನೀಡಿದ ಆಘಾತ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ.

Recommended Video

3 ತಿಂಗಳ ಬಳಿಕ ತಾಯ್ನಾಡಿಗೆ ಬಂದಿಳಿದ ಕರ್ನಾಟಕದ ವಿದ್ಯಾರ್ಥಿಗಳು | Oneindia Kannada

ತೆಲಂಗಾಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ರಾಜಧಾನಿ ಹೈದ್ರಾಬಾದ್ ನಲ್ಲಿ ಇರುವ ಓಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಭಾರಿ ಅನಾಹುತವೇ ಸೃಷ್ಟಿಯಾಗಿದೆ. ಹಳೆಯ ಕಟ್ಟಡದ ಆಸ್ಪತ್ರೆಯು ಸಂಪೂರ್ಣವಾಗಿ ಸೋರಿದ್ದು, ನಿಂತ ನೀರಿನ ನಡುವೆಯೇ ರೋಗಿಗಳು ಮಲಗಿರುವ ದೃಶ್ಯ ಸಖತ್ ವೈರಲ್ ಆಗುತ್ತಿದೆ.

Heavy Rains In Hyderabad: Coronavirus Patients Flooded In Osmania General Hospital

 ಹೈದ್ರಾಬಾದಿನ ಸಂಸ್ಥೆಗೆ ಫೆವಿಪಿರಾವಿರ್ ಉತ್ಪಾದನೆಗೆ ಅನುಮತಿ ಹೈದ್ರಾಬಾದಿನ ಸಂಸ್ಥೆಗೆ ಫೆವಿಪಿರಾವಿರ್ ಉತ್ಪಾದನೆಗೆ ಅನುಮತಿ

ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಎಷ್ಟರ ಮಟ್ಟಿಗಿದೆ ಎನ್ನುವುದಕ್ಕಿಂತ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ತೆಲಂಗಾಣದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಟೀಕಿಸಿದ್ದಾರೆ. ಆಸ್ಪತ್ರೆಯಲ್ಲಿ ಸೃಷ್ಟಿಯಾಗಿರುವ ಅವಾಂತರದ ಚಿತ್ರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.

ಸಿಎಂ ಚಂದ್ರಶೇಖರ್ ರಾವ್ ಆಡಳಿತಕ್ಕೆ ಕೈಗನ್ನಡಿ:

ತೆಲಂಗಾಣದಲ್ಲಿ ಸರ್ಕಾರಿ ಆಸ್ಪತ್ರೆಗಳ ನಿರ್ವಹಣೆ ಮತ್ತು ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಸರ್ಕಾರವು ಮಾಡಿಕೊಂಡಿರುವ ಸಿದ್ಧತೆ ಹೀಗಿದೆ. ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಆಡಳಿತ ವೈಖರಿಗೆ ಇದಕ್ಕಿಂತ ಮತ್ತೊಂದು ಸಾಕ್ಷ್ಯ ಬೇಕೇ ಎಂದು ತೆಲಂಗಾಣ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಟ್ವಿಟರ್ ನಲ್ಲಿ ಆಸ್ಪತ್ರೆಯಲ್ಲಿ ನಿಂತ ನೀರಿನ ನಡುವೆ ರೋಗಿಗಳು ಮಲಗಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ.

English summary
Heavy Rains In Hyderabad: Coronavirus Patients Flooded In Osmania General Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X