• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರಿ ಮಳೆಗೆ ಗೋಡೆ ಕುಸಿದು 2 ತಿಂಗಳ ಕಂದಮ್ಮ ಸೇರಿ 9 ಮಂದಿ ಸಾವು

|

ಹೈದರಾಬಾದ್, ಅಕ್ಟೋಬರ್ 14: ಧಾರಾಕಾರ ಮಳೆಗೆ ಕಾಂಪೌಂಡ್ ಗೋಡೆ ಕುಸಿದು 10 ಮನೆಗಳ ಮೇಲೆ ಬಿದ್ದ ಕಾರಣ 2 ತಿಂಗಳ ಮಗು ಸರಿ 9 ಮಂದಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಗೋಡೆಯ ಅವಶೇಷಗಳಡಿ ಶವಗಳು ಸಿಲುಕಿವೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದ ಆಸುಪಾಸಿನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಕರ್ನಾಟಕಕ್ಕೆ ರೆಡ್ ಅಲರ್ಟ್: ಕರಾವಳಿ, ಮಲೆನಾಡಲ್ಲೂ ಮಳೆ

ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸಾಕಷ್ಟು ಪ್ರದೇಶಗಳಲ್ಲಿ ನೀರು ನಿಂತು ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ. ತೆಲಂಗಾಣದ 14 ಜಿಲ್ಲೆಗಳಿಗೆ ಮಳೆಯಿಂದ ಹಾನಿಯುಂಟಾಗಿದೆ.

ಹೈದರಾಬಾದ್ ಲೋಕಸಭಾ ಎಂಪಿ ಅಸಾದುದ್ದೀನ್ ಓವೈಸಿ ಕಾಂಪೌಂಡ್ ಗೋಡೆ ಕುಸಿದಿರುವ ಕುರಿತು ಟ್ವೀಟ್ ಮಾಡಿದ್ದಾರೆ.ಹೆಚ್ಚು ಮಳೆ ಇರುವ ಕಾರಣ ಯಾರೂ ಮನೆಯಿಂದ ಹೊರಹೋಗಬೇಡಿ ಎಂದು ಸೂಚನೆ ನೀಡಲಾಗಿದೆ.

ಉತ್ತರ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿರುವ ಕಾರಣ ಅ.14 ಮತ್ತು 15 ರಂದು ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಗುಡುಗು ಸಹಿತ ಭಾರಿ ಮಳೆ ಸುರಿಯಲಿದೆ.

English summary
Nine people, including a two-month-old, have died in Hyderabad after a compound wall collapsed and fell on ten houses due to heavy rain late last night. The bodies are trapped in the debris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X