ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೇಟರ್ ಹೈದರಾಬಾದ್ ಚುನಾವಣೆ: ಅಮಿತ್ ಶಾ, ನಡ್ಡಾಗೆ ಸಿಕ್ಕ ಸ್ಪಷ್ಟ ಮುನ್ಸೂಚನೆ

|
Google Oneindia Kannada News

ಹೈದರಾಬಾದ್, ಡಿ 1: ಸ್ಥಳೀಯ ಸಂಸ್ಥೆ ಚುನಾವಣೆಗೆ ಆಯಾಯ ರಾಜ್ಯದ ಪ್ರಮುಖ ಮುಖಂಡರೇ ಪ್ರಚಾರಕ್ಕೆ ಬರುವುದು ಕಮ್ಮಿ, ಅಂತದರಲ್ಲಿ ರಾಷ್ಟ್ರ ಮಟ್ಟದ ನಾಯಕರು, ಸಚಿವರು ಪ್ರಚಾರಕ್ಕೆ ಬರುವುದೆಂದರೆ?

ಹೌದು, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಗೆ ಬಿಜೆಪಿ ಭರ್ಜರಿಯಾಗಿ ಪ್ರಚಾರಕ್ಕೆ ಇಳಿದಿತ್ತು. ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂತಾದವರು ಪ್ರಚಾರದ ಕಣದಲ್ಲಿದ್ದರು.

ಹೈದರಾಬಾದನ್ನು ನಿಜಾಮ್ ಸಂಸ್ಕೃತಿ ಮುಕ್ತಗೊಳಿಸಿ: ಅಮಿತ್ ಶಾಹೈದರಾಬಾದನ್ನು ನಿಜಾಮ್ ಸಂಸ್ಕೃತಿ ಮುಕ್ತಗೊಳಿಸಿ: ಅಮಿತ್ ಶಾ

ಕಳೆದ ಮುನ್ಸಿಪಲ್ ಚುನಾವಣೆಯಲ್ಲಿ ಬೋರ್ಡಿಗೇ ಇಲ್ಲದ ಬಿಜೆಪಿ ಈ ಬಾರಿ ಅಬ್ಬರದ ಪ್ರಚಾರಕ್ಕೆ ಇಳಿದಿತ್ತು ಯಾಕೆ ಎಂದರೆ, ಕಾರಣ ಸ್ಪಷ್ಟ. ಒಂದು ಮುಂದಿನ ತೆಲಂಗಾಣ ಅಸೆಂಬ್ಲಿ ಚುನಾವಣೆಯ ಪೂರ್ವತಯಾರಿ, ಇನ್ನೊಂದು, ಇಲ್ಲಿ ಪಕ್ಷದ ಬೇರನ್ನು ವಿಸ್ತರಿಸಬಹುದು ಎನ್ನುವ ಮುನ್ಸೂಚನೆ ಬಿಜೆಪಿಗೆ ಸಿಕ್ಕಿದ್ದು.

 ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ ಹೈದ್ರಾಬಾದ್ ಹೆಸರು ಬದಲಾವಣೆ, ಯೋಗಿಗೆ ಓವೈಸಿ ಎಚ್ಚರಿಕೆ

150 ಸದಸ್ಯ ಬಲದ ಹೈದರಾಬಾದ್ ಪಾಲಿಕೆಯ ಚುನಾವಣೆ ಸದ್ಯ (ಡಿ 1) ಚಾಲ್ತಿಯಲ್ಲಿದೆ. ಕಳೆದ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) 99 ಮತ್ತು ಓವೈಸಿಯ ಎಐಎಂಐಎಂ 44 ಮತ್ತು ಬಿಜೆಪಿ ನಾಲ್ಕು ಸ್ಥಾನವನ್ನು ಗೆದ್ದಿತ್ತು. ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆ, ಬಿಜೆಪಿಗೆ ಸಿಕ್ಕ ಮುನ್ಸೂಚನೆ ಎನು? ಮುಂದೆ ಓದಿ

ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಕಾರುಬಾರು

ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಕಾರುಬಾರು

ಹೈದರಾಬಾದ್ ಓಲ್ಡ್ ಸಿಟಿಯಲ್ಲಿ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಕಾರುಬಾರೇ ಜೋರು. ಇದಕ್ಕೆ ಬ್ರೇಕ್ ಹಾಕುವುದಕ್ಕೆ ಇಡೀ ಹೈದರಾಬಾದ್ ಮತ್ತು ಸಿಕಂದರಾಬಾದ್ ನಲ್ಲಿ ಬಿಜೆಪಿ, ಸಾರ್ವಜನಿಕರ ಮುಂದಿಟ್ಟಿದ್ದು, ಲೋಕಲ್ ಸಮಸ್ಯೆಗಿಂತ ಹೆಚ್ಚಾಗಿ, ಹಿಂದುತ್ವದ ಪ್ರಯೋಗ. ಓವೈಸಿ ಹೇಗೆ ಮುಸ್ಲಿಮರನ್ನೇ ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೋ ಅದಕ್ಕೆ ಕೌಂಟರ್ ಆಗಿ ಬಿಜೆಪಿ ಇಲ್ಲಿ ಹಿಂದುತ್ವದ ಅಸ್ತ್ರವನ್ನು ಪ್ರಯೋಗಿಸಿತು. (ಚಿತ್ರ:ಪಿಟಿಐ)

ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ

ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ

ಇನ್ನೊಂದು ಕಡೆ ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರವನ್ನಾಗಿ ಮಾಡುವುದಾಗಿ ಹೇಳಿದರು. ತೆಲಂಗಾಣದ ಸಿಎಂ ಕೆಸಿಆರ್ ಗಿಂತ ಬಿಜೆಪಿಯ ಟಾರ್ಗೆಟ್ ಓವೈಸಿ ಎನ್ನುವುದು ಅತ್ಯಂತ ಸ್ಪಷ್ಟವಾಗಿತ್ತು. ಕೆಲವೊಂದು ವಿವಾದಕಾರಿ ಹೇಳಿಕೆಯನ್ನೂ ತೇಜಸ್ವಿ ಸೂರ್ಯ ನೀಡಿದರು. (ಚಿತ್ರ:ಪಿಟಿಐ)

ಲೋಕಲ್ ಸಮಸ್ಯೆಯ ಜೊತೆಗೆ ರಾಷ್ಟ್ರೀಯತೆ

ಲೋಕಲ್ ಸಮಸ್ಯೆಯ ಜೊತೆಗೆ ರಾಷ್ಟ್ರೀಯತೆ

ಲೋಕಲ್ ಸಮಸ್ಯೆಯ ಜೊತೆಗೆ ರಾಷ್ಟ್ರೀಯತೆ, ಭಾರತ ಮತ್ತು ಪಾಕಿಸ್ತಾನ, ಹಿಂದುತ್ವಕ್ಕೆ ಹೆಚ್ಚಿನ ಒತ್ತು ನೀಡಿ ಪ್ರಚಾರ ಮಾಡಿದ ಬಿಜೆಪಿಗೆ, ಈ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮೇಯರ್ ಆಗುವ ಕನಸು ಇಲ್ಲದಿದ್ದರೂ, ತಮ್ಮ ಬೇಸ್ ಅನ್ನು ವೃದ್ದಿಸಿಕೊಳ್ಳುವ ಲೆಕ್ಕಾಚಾರವನ್ನು ಹೊಂದಿದೆ. ಅದಕ್ಕೆ ಇಲ್ಲಿ ಪೂರಕವಾದ ವಾತಾವರಣವೂ ಇದೆ ಎನ್ನುವ ಮಾತು ಕೇಳಿಬರುತ್ತಿದೆ. (ಚಿತ್ರ:ಪಿಟಿಐ)

Recommended Video

ಗದಗದಲ್ಲಿ ಪ್ರವಾಹ ಪೀಡಿತಿರ ಅಳಲಿಗೆ ಸ್ಪಂದಿಸದ ಸರ್ಕಾರ | Oneindia Kannada
ಯೋಗಿ ಆದಿತ್ಯನಾಥ್ ನಡೆಸಿದ ರೋಡ್ ಶೋ

ಯೋಗಿ ಆದಿತ್ಯನಾಥ್ ನಡೆಸಿದ ರೋಡ್ ಶೋ

ಹೈದರಾಬಾದ್ ಮುನ್ಸಿಪಲ್ ಚುನಾವಣೆಯ ಹೊಸ್ತಿಲಲ್ಲಿ, ಕೋವಿಡ್ ಲಸಿಕೆ ಘಟಕ, ಹೈದರಾಬಾದ್ ನಗರದಲ್ಲಿರುವ ಭಾರತ್ ಬಯೋಟೆಕ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದರು. ಇನ್ನು, ಅಮಿತ್ ಶಾ ರೋಡ್ ಶೋಗೆ ಜನಪ್ರವಾಹವೇ ಹರಿದುಬಂತು. ಹಳೇ ಸಿಟಿಯಲ್ಲಿ ಯೋಗಿ ಆದಿತ್ಯನಾಥ್ ನಡೆಸಿದ ರೋಡ್ ಶೋಗೂ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಒಟ್ಟಿನಲ್ಲಿ, ಬಿಜೆಪಿಯ ರಣತಂತ್ರ ಟಿಆರ್ ಎಸ್ ಮತ್ತು ಓವೈಸಿಗಂತೂ ನಿದ್ದೆಯಿಲ್ಲದ ರಾತ್ರಿಯಾಗುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. (ಚಿತ್ರ:ಪಿಟಿಐ)

English summary
Greater Hyderabad Municipal Corporation Polls: Why This Election Is Important To BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X