ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಎಲ್ಲರಿಗೂ ಡಿಸೆಂಬರ್‌ ಒಳಗೆ ಕೊರೊನಾ ಲಸಿಕೆ: ಕಿಶನ್ ರೆಡ್ಡಿ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 6: ದೇಶದ ಪ್ರತಿಯೊಬ್ಬರ ನಾಗರಿಕನಿಗೂ ಡಿಸೆಂಬರ್ ವೇಳೆಗೆ ಕೊರೊನಾ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ತಿಳಿಸಿದ್ದಾರೆ.

ಕೋವಿಡ್ -19 ಲಸಿಕೆ ಕಾರ್ಯಕ್ರಮದ ಅಡಿಯಲ್ಲಿ ಈ ವರ್ಷದ ಡಿಸೆಂಬರ್ ವೇಳೆಗೆ ದೇಶದ ಎಲ್ಲರಿಗೂ ಲಸಿಕೆ ಹಾಕಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಹೇಳಿದ್ದಾರೆ.

ಸೆ 5: ಕೊವಿಡ್19ನಿಂದ ಜಾಗತಿಕವಾಗಿ ಎಷ್ಟು ಮಂದಿ ಗುಣಮುಖ?ಸೆ 5: ಕೊವಿಡ್19ನಿಂದ ಜಾಗತಿಕವಾಗಿ ಎಷ್ಟು ಮಂದಿ ಗುಣಮುಖ?

"ಈ ವರ್ಷದ ಡಿಸೆಂಬರ್ ವೇಳೆಗೆ ಲಸಿಕೆ ಹಾಕಲು ದೇಶದ ಪ್ರತಿ ವ್ಯಕ್ತಿಯನ್ನು ತಲುಪಲು ನಾವು ಬಯಸುತ್ತೇವೆ. ಕೋವಿಡ್‌ಗೆ ಲಸಿಕೆ ಕಂಡುಹಿಡಿದ ಎರಡು ದೇಶಗಳಲ್ಲಿ ಭಾರತವೂ ಒಂದು ಎಂಬುದು ಹೆಮ್ಮೆಯ ವಿಷಯವಾಗಿದೆ. ಯುಎಸ್ಎ ಹೊರತಾಗಿ, ಇದು ಭಾರತೀಯ ವಿಜ್ಞಾನಿಗಳು ಮತ್ತು ದೇಶದ ಗೌರವವನ್ನು ಹೆಚ್ಚಿಸಿದೆ" ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ.

Govt Determined To Vaccinate Everyone By December 2021

"153 ದೇಶಗಳು ನಮ್ಮ ಲಸಿಕೆಗಳನ್ನು ಕೇಳಿವೆ ಮತ್ತು ಕೆಲವು ಆಯಾ ಕಂಪನಿಗಳಿಗೆ ಮುಂಗಡ ಮೊತ್ತವನ್ನು ಪಾವತಿಸಿವೆ. ಆದರೆ ನಮ್ಮ ದೇಶದ ಜನರು ಲಸಿಕೆ ಹಾಕುವವರೆಗೂ ಸರ್ಕಾರ ಲಸಿಕೆ ರಫ್ತು ಮೇಲೆ ನಿರ್ಬಂಧವನ್ನು ಹೇರಿದೆ" ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವನ್ನು ನಡೆಸುತ್ತಿದೆ ಮತ್ತು ಇಲ್ಲಿಯವರೆಗೆ 69 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ಹಾಕಿದೆ, ಇದು ಸ್ವತಃ ಒಂದು ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈವರಗೆ ಸುಮಾರು 66.89 ಕೋಟಿ ಕೋವಿಡ್-19 ಲಸಿಕೆ ಪೂರೈಸಲಾಗಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.

ಸುಮಾರು 1.56 ಕೋಟಿ ಡೋಸ್ ಲಸಿಕೆ ಪೈಪ್ ಲೈನ್ ನಲ್ಲಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಸದ್ಯ ಸುಮಾರು 4.37 ಕೋಟಿ ಡೋಸ್ ಬಳಕೆಯಾಗದ ಕೋವಿಡ್-19 ಲಸಿಕೆ ಇರುವುದಾಗಿ ಸಚಿವಾಲಯ ತಿಳಿಸಿದೆ.

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಪೂರೈಕೆ ಹಾಗೂ ಲಭ್ಯತೆಯೊಂದಿಗೆ ಲಸಿಕಾ ಅಭಿಯಾನದ ವೇಗವನ್ನು ತೀವ್ರಗೊಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 68,46,69,521 ಜನರಿಗೆ ಲಸಿಕೆಯನ್ನು ನೀಡಲಾಗಿದೆ.

English summary
The Government of India is determined to vaccinate everyone by December this year under the COVID-19 vaccination programme, Union Minister G Kishan Reddy said here on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X