ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಮ್ಮಪ್ಪನ ದರ್ಶನಕ್ಕೆ ಹೋಗುವ ಭಕ್ತಾದಿಗಳಿಗೆ ಸಿಹಿಸುದ್ದಿ

|
Google Oneindia Kannada News

ತಿರುಮಲ, ನವೆಂಬರ್ 27: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇಗುಲದಲ್ಲಿ ಇನ್ನುಮುಂದೆ ಹಿರಿಯ ನಾಗರಿಕರಿಗೆ ಉಚಿತ ದರ್ಶನ ಅವಕಾಶ ಕಲ್ಪಿಸಲಾಗುತ್ತಿದೆ.

ಎರಡು ಹಂತಗಳಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಬೆಳಗ್ಗೆ 10 ಗಂಟೆಗೆ ಹಾಗೂ ಮಧ್ಯಾಹ್ನ 3 ಗಂಟೆಗೆ ಎರಡು ಬಾರಿ ಅವಕಾಶವಿದೆ.

4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ4 ಜಿಲ್ಲೆಗಳಿಂದ ತಿರುಪತಿ ಕೆಎಸ್ಆರ್‌ಟಿಸಿ ಪ್ಯಾಕೇಜ್‌ ಪ್ರವಾಸ ಆರಂಭ

ಮೆಟ್ಟಿಲುಗಳನ್ನು ಹತ್ತುವ ಅಗತ್ಯವಿರುವುದಿಲ್ಲ, ಬ್ರಿಡ್ಜ್ ಸಮೀಪದಲ್ಲಿರುವ ಎಸ್‌1 ಕೌಂಟರ್‌ಗೆ ಗುರುತಿನ ಚೀಟಿ ನೀಡಬೇಕು. ಅಲ್ಲಿಂದ ಅವರ ವಿಶೇಷ ದರ್ಶನಕ್ಕೆ ಅವಕಾಶ ಮಾಡಿಕೊಡಲಿದ್ದಾರೆ.

Good News For Devotees Of Tirupathi Thimmappa

ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ನೀವು ಕುಳಿತಿರುವ ಜಾಗಕ್ಕೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಾಂಬಾರ್, ಮೊಸರು, ಹಾಲು ಉಚಿತವಾಗಿ ಹಿರಿಯ ನಾಗರಿಕರಿಗೆ ನೀಡಲಾಗುತ್ತದೆ.

ಎರಡು ಲಡ್ಡುಗಳಿಗೆ 20ರೂ ನೀಡಬೇಕಾಗುತ್ತದೆ, ಹೆಚ್ಚಿನ ಲಡ್ಡುಗಳು ಬೇಕಿದ್ದರೆ 25 ರೂ ನೀಡಬೇಕು. ಹಾಗೆಯೇ ಪಾರ್ಕಿಂಗ್ ಏರಿಯಾದವರೆಗೆ ಅಥವಾ ಪಾರ್ಕಿಂಗ್ ಪ್ರದೇಶದಿಂದ ದೇವಸ್ಥಾನಕ್ಕೆ ಬರುವವರಿಗೆ ಬ್ಯಾಟರಿ ಕಾರು ವ್ಯವಸ್ಥೆ ಮಾಡಲಾಗುತ್ತದೆ. ದರ್ಶನವಾದ ಬಳಿಕ ಕೇವಲ 30 ನಿಮಿಷಗಳಲ್ಲಿ ಅಲ್ಲಿಂದ ಹೊರಗಡೆ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Free Darshan Of Lord Venkateshwara For Senior Citizens In Tirupati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X