ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.5ರಂದು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

By Prasad
|
Google Oneindia Kannada News

ಹೈದರಾಬಾದ್, ಅ. 3 : ಪ್ರತಿನಿತ್ಯ ಪಾರಾಯಣ ಮಾಡುವುದರಿಂದ ಪರಮಗತಿ ಪ್ರಾಪ್ತವಾಗುತ್ತದೆ ಎಂದು ನಂಬಲಾಗಿರುವ ವಿಷ್ಣುಸಹಸ್ರನಾಮ ಪಾರಾಯಣವನ್ನು ಅಕ್ಟೋಬರ್ 5, ಶನಿವಾರದಂದು ಭಾರತ ಸೇರಿದಂತೆ 18 ರಾಷ್ಟ್ರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಭಾರತದಲ್ಲಿ ಹೈದರಾಬಾದ್‌ನ ವಿವಿಧ ಪ್ರದೇಶಗಳಲ್ಲಿ ಇದನ್ನು ಆಯೋಜಿಸಲಾಗಿದೆ. ಆದರೆ, ಬೆಂಗಳೂರಿನಲ್ಲೇಕೋ ಇದರ ಸದ್ದು ಕೇಳಿಬರುತ್ತಿಲ್ಲ.

ಮಹಾಭಾರತದಲ್ಲಿ ಉಲ್ಲೇಖವಾಗಿರುವ ವಿಷ್ಣುಸಹಸ್ರನಾಮ ಪಾರಾಯಣವನ್ನು 2008ರಲ್ಲಿ ಗ್ಲೋಬಲ್ ಶ್ರೀ ವಿಷ್ಣು ಸಹಸ್ರನಾಮ ಫೆಡರೇಷನ್ ಜಾಗತಿಕವಾಗಿ ಆರಂಭಿಸಿತು. 6ನೇ ಬಾರಿಗೆ ಇನ್ನೂ ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಯಾ ರಾಷ್ಟ್ರಗಳಲ್ಲಿ ಅ.5ರಂದು ಪಾರಾಯಣ ಮಾಡಲಿದ್ದಾರೆ.

Global Sri Vishnu Sahasranama parayana on 5th October

ಪುರಾಣದಲ್ಲಿ : ಮಹಾಭಾರತದ ಅನುಶಾಸನ ಪರ್ವದಲ್ಲಿ 149ನೆಯ ಅಧ್ಯಾಯದಲ್ಲಿ ವಿಷ್ಣುಸಹಸ್ರನಾಮದ ಉಲ್ಲೇಖವಿದೆ. ಮಹಾಭಾರತ ಯುದ್ಧ ಸಮಾಪ್ತಿಗೊಂಡ ಮೇಲೆ ಶರಶೈಯ್ಯೆಯಲ್ಲಿ ಮಲಗಿದ ಭೀಷ್ಮ ಪಿತಾಮಹರನ್ನು ಕಾಣಲು ಯುಧಿಷ್ಠಿರನು ಬರುತ್ತಾನೆ. ಪರಮ ಈಶ್ವರನು ಯಾರು, ಯಾರಿಗೆ ಶರಣು ಹೋಗುವುದರಿಂದ, ಯಾರ ಗುಣಗಾನ ಮಾಡುವುದರಿಂದ ನಮಗೆ ಪರಮಗತಿ ಪ್ರಾಪ್ತವಾಗುವುದು? ಎಂದು ಕೇಳಿದಾಗ, ಉತ್ತರರೂಪಿಯಾಗಿ ಭೀಷ್ಮರು ವಿಷ್ಣುಸಹಸ್ರನಾಮವನ್ನು ಧರ್ಮರಾಜನಿಗೆ ಬೋಧಿಸುತ್ತಾರೆ. ಆಗ ಲೋಕಗುರುವಾದ ಶ್ರೀಕೃಷ್ಣ ಎದುರುಗೆ ಉಪಸ್ಥಿತನಿದ್ದ.

ಗುಡಿ, ಮಠ, ಮನೆಗಳಲ್ಲಿ : ನವರಾತ್ರಿ ಆರಂಭವಾದ ಮೊದಲ ಶನಿವಾರದಂದು ವಿಷ್ಣುಸಹಸ್ರನಾಮ ಪಾರಾಯಣವನ್ನು ಮಾಡಲಾಗುತ್ತದೆ. ಅಕ್ಟೋಬರ್ 4ರಿಂದ ನವರಾತ್ರಿ ಆರಂಭವಾಗುತ್ತಿದ್ದು, ಅ.5ರಂದು ಆರನೇ ವಾರ್ಷಿಕ ಜಾಗತಿಕ ವಿಷ್ಣುಸಹಸ್ರನಾಮ ಸತ್ಸಂಗವನ್ನು ಆಯೋಜಿಸಲಾಗಿದೆ. ಶನಿವಾರದಂದು ವಿವಿಧ ಗುಡಿಗಳಲ್ಲಿ, ಮಠಗಳಲ್ಲಿ, ಮನೆಗಳಲ್ಲಿ ಮತ್ತು ಎಲ್ಲಿದ್ದಲ್ಲಿ ಭಗವದ್ ಭಕ್ತರು ಈ ಸತ್ಸಂಗದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಸಂಘಟಕರಲ್ಲಿ ಒಬ್ಬರಾಗಿರುವ ಹೈದರಾಬಾದ್‌ನ ಎವಿಎಸ್ ರಾಘವನ್ ಅವರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ವಿಷ್ಣು ಸಹಸ್ರನಾಮ ಪಾರಾಯಣದಲ್ಲಿ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳು : ಭಾರತ, ಆಸ್ಟ್ರೇಲಿಯಾ, ಬರಹೇನ್, ಬೆನಿನ್, ಕೆನಡಾ, ಎಮಿರೇಟ್ಸ್, ಇಂಗ್ಲೆಂಡ್, ನೇಪಾಳ, ಜಪಾನ್, ಕೀನ್ಯಾ, ಓಮಾನ್, ಸಿಂಗಪುರ, ಸಿರಿಯಾ, ವೈವಾನ್, ತಾಂಜಾನಿಯಾ, ಥೈಲ್ಯಾಂಡ್, ಅಮೆರಿಕ, ಮತ್ತು ಜಾಂಬಿಯಾ.

ಹೈದರಾಬಾದ್ ಸ್ಥಳಗಳ ವಿವರಗಳು ಕೆಳಗಿನಂತಿವೆ

ಸ್ಥಳ : ಶ್ರೀ ಅಯ್ಯಪ್ಪ ದೇವಸ್ಥಾನ, ಶ್ರೀನಿವಾಸ ನಗರ, ಬಾಗ್ ಅಂಬರಪೇಟ್, ಹೈದರಾಬಾದ್.
ಸಮಯ : ಬೆಳಿಗ್ಗೆ 8ರಿಂದ 11.

ಸ್ಥಳ : ಶ್ರೀ ಅಹೋಬಿಲ ಮಠ, ಡಿಡಿ ಕಾಲನಿ, ಬಾಗ್ ಅಂಬರಪೇಟ್, ಹೈದರಾಬಾದ್.
ಸಮಯ : ಸಂಜೆ 5ರಿಂದ 7

ಸ್ಥಳ : ಶ್ರೀ ಕೃಷ್ಣ ಮಠ, 146, ಧನಲಕ್ಷ್ಮೀ ಕೋಆಪರೇಟಿವ್ ಸೊಸೈಟಿ, ಮಹೇಂದ್ರ ಹಿಲ್ಸ್, ಸಿಕಂದರಾಬಾದ್.
ಸಮಯ : ಸಂಜೆ 5.30ರಿಂದ 7.30

ಬೆಂಗಳೂರಿನ ಭಕ್ತರೇಕೆ ಸೈಲೆಂಟ್? : ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಯಲ್ಲಿ ಬೆಂಗಳೂರಿನ ಆಸ್ತಿಕರು ಎಂದೂ ಹಿಂದೆ ಬೀಳುವುದಿಲ್ಲ. ಇದೇ ವರ್ಷ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಸಾಮೂಹಿಕವಾಗಿ ಅಷ್ಟೋತ್ತರ ಜಪ ಮಾಡಲಾಗಿತ್ತು. ಇನ್ನು ಆಷಾಢ ಏಕಾದಶಿ ಮತ್ತು ವೈಕುಂಠ ಏಕಾದಶಿಯಂದು ಮುದ್ರೆ ಹಾಕಿಸಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿರುತ್ತಾರೆ. ಆದರೆ, ವಿಷ್ಣುಸಹಸ್ರನಾಮ ಪಾರಾಯಣದ ಸುದ್ದಿಯೇಕೋ ಬೆಂಗಳೂರಿನ ಭಕ್ತಾದಿಗಳ ಕಿವಿಗೆ ಬಿದ್ದಂತಿಲ್ಲ! [ಪಠಿಸಬೇಕಾದ ಶ್ಲೋಕಗಳ ಕೋಷ್ಟಕ]

English summary
Global SVS Federation will coordinate the Sixth Annual Global VSN Satsang on Saturday, October 5, 2013. More than 5 lakh devotees across 18 countries, including Hyderabad, India, are participating in the Global VSN Satsang. Why Bangalore devotees are silent?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X