ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಸ್ತಿಕ್ ಗುರುತು ಇದ್ದರೆ ಮಾತ್ರ ಮತ ಲೆಕ್ಕಕ್ಕೆ: ಹೈಕೋರ್ಟ್ ಮಹತ್ವದ ಆದೇಶ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 4: ಹೈದರಾಬಾದ್ ಮಹಾನಗರ ಪಾಲಿಕೆಯ 150 ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ಆರಂಭವಾಗಿದ್ದು, ಅಂಚೆಮತಪತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಅದರ ಮಧ್ಯೆ ಮತ ಎಣಿಕೆಗೆ ಸಂಬಂಧಿಸಿದತೆ ಗೊಂದಲ ಮತ್ತು ವಿವಾದ ಸೃಷ್ಟಿಯಾಗಿದೆ.

ಪಾಲಿಕೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಿರಲಿಲ್ಲ. ಬದಲಾಗಿ ಸಾಂಪ್ರದಾಯಿಕ ಮತ ಪತ್ರಗಳನ್ನೇ ಬಳಸಲಾಗಿತ್ತು. ಮತಚಲಾವಣೆಗೆ ಮತದಾರರು ಹಾಕುವ ಸೀಲ್‌ನಲ್ಲಿ ಸ್ವಸ್ತಿಕ್ ಚಿಹ್ನೆ ಸಮಪರ್ಕವಾಗಿ ಮೂಡದೆ, ಯಾವುದೇ ಶಾಯಿಯ ಗುರುತು ಕಂಡುಬಂದರೂ ಆ ಮತಪತ್ರವನ್ನು ಪರಿಗಣಿಸುವಂತೆ ತೆಲಂಗಾಣ ರಾಜ್ಯ ಚುನಾವಣಾ ಆಯೋಗ ಗುರುವಾರ ತಡರಾತ್ರಿ ಸುತ್ತೋಲೆ ಹೊರಡಿಸಿತ್ತು.

GHMC Polls: ಹೈದರಾಬಾದ್ ಚುನಾವಣೆಗೆ ಯಾಕಿಷ್ಟು ಮಹತ್ವ?GHMC Polls: ಹೈದರಾಬಾದ್ ಚುನಾವಣೆಗೆ ಯಾಕಿಷ್ಟು ಮಹತ್ವ?

ಆದರೆ, ಚುನಾವಣಾ ಆಯೋಗದ ಈ ನಿಯಮವನ್ನು ತೆಲಂಗಾಣ ಹೈಕೋರ್ಟ್ ತಿರಸ್ಕರಿಸಿದೆ. ಮತಪತ್ರಗಳಲ್ಲಿ ಸ್ವಸ್ತಿಕ್ ಚಿಹ್ನೆಯ ಇದ್ದರೆ ಮಾತ್ರ ಅದನ್ನು ಎಣಿಕೆಗೆ ಪರಿಗಣಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಮತಪತ್ರದಲ್ಲಿ ಯಾವುದೇ ಶಾಯಿಯ ಗುರುತು ಇದ್ದರೂ ಅದನ್ನು ಎಣಿಕೆಗೆ ಪರಿಗಣಿಸುವಂತೆ ರಾಜ್ಯ ಚುನಾವಣಾ ಆಯೋಗವು ಗುರುವಾರ ತಡರಾತ್ರಿ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಬಿಜೆಪಿ ಹೈಕೋರ್ಟ್ ಮೊರೆ ಹೋಗಿತ್ತು.

 GHMC Polls: Telangana High Court Rules Only The Swastika Poll Stamp To Be Counted

ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ? ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ?

ಬಿಜೆಪಿಯ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್, ಸ್ವಸ್ತಿಕ್ ಚಿಹ್ನೆ ಸಮಪರ್ಕವಾಗಿ ಬಿದ್ದಿರುವ ಮತಪತ್ರಗಳನ್ನು ಮಾತ್ರವೇ ಎಣಿಕೆಗೆ ಪರಿಗಣಿಸಬೇಕು. ಇತರೆ ಶಾಯಿ ಗುರುತು ಇರುವ ಮತಪತ್ರಗಳ ಕುರಿತಾದ ನಿರ್ಧಾರವನ್ನು ಬಳಿಕ ತೆಗೆದುಕೊಳ್ಳಬೇಕು ಎಂದು ಹೇಳಿದೆ.

English summary
GHMC Polls: Telangana High Court on Friday strikes down the State Election Commission rule that allowed any ink mark on ballot sheet to consider as vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X