ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಲ್ಲಿಯ ಟೂರಿಸ್ಟ್‌ಗಳಿಂದ ದೂರ ಇರಿ: ಸಚಿವ ಕೆಟಿ ರಾಮರಾವ್

|
Google Oneindia Kannada News

ಹೈದರಾಬಾದ್, ನ. 24: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಉತ್ತಮ ಫಲಿತಾಂಶದಲ್ಲಿ ನೀಡುವ ಉತ್ಸಾಹದಲ್ಲಿರುವ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್‌) ಭರ್ಜರಿಯಾಗಿ ಪ್ರಚಾರ ನಡೆಸುತ್ತಿದೆ.

ಟಿಆರ್‌ಎಸ್‌ ಕಾರ್ಯಕಾರಿ ಅಧ್ಯಕ್ಷ ಹಾಗೂ ಸಚಿವ ಕೆಟಿ ರಾಮರಾವ್ ಅವರು ಲಾಲ್ ಬಹದ್ದೂರ್ ನಗರ ವಿಧಾನಸಭಾ ಕ್ಷೇತ್ರದ ಮಹೇಶ್ವರಂ ಎಂಬಲ್ಲಿ ಪ್ರಚಾರ ಕೈಗೊಂಡು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

GHMC polls: ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ ಪವರ್ ಸ್ಟಾರ್GHMC polls: ಬಿಜೆಪಿಗೆ ಬೇಷರತ್ ಬೆಂಬಲ ಘೋಷಿಸಿದ ಪವರ್ ಸ್ಟಾರ್

ಡೆಲ್ಲಿಯಿಂದ ಬಂದಿರುವ ಟೂರಿಸ್ಟ್ ಗಳು ಇಲ್ಲಿ ಹಿಂದು ಮುಸ್ಲಿಂ ನಡುವೆ ದ್ವೇಷ ವಾತಾವರಣ ಸೃಷ್ಟಿಸುತ್ತಿದ್ದಾರೆ, ಇವರಿಂದ ದೂರ ಇರಿ ಎಂದು ಮತದಾರರಿಗೆ ಎಚ್ಚರಿಕೆ ನೀಡಿದರು. ಹಳೆ ಹೈದರಾಬಾದ್ ಪ್ರಾಂತ್ಯದಲ್ಲಿ ಕನಿಷ್ಠ 12 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

 ಹೈದರಾಬಾದಿಗೆ ಉಚಿತವಾಗಿ ಕುಡಿಯುವ ನೀರು

ಹೈದರಾಬಾದಿಗೆ ಉಚಿತವಾಗಿ ಕುಡಿಯುವ ನೀರು

ಹೈದರಾಬಾದಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುವುದು, ಟ್ರಾಫಿಕ್ ಸಮಸ್ಯೆ ಸರಿಪಡಿಸುವುದು ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಯಾವ ಪಕ್ಷ ಮಾಡಲು ಸಾಧ್ಯ. ಹೈದರಾಬಾದ್ ಗುಲಾಬಿಯುಕ್ತವಾಗಲು ಬಯಸುತ್ತೀರಾ ಅಥವಾ ಗುಜರಾತ್ ಗುಲಾಮರಾಗುತ್ತಿರಾ? ಎಂದು ಮತದಾರರನ್ನು ಪ್ರಶ್ನಿಸಿದರು.

ತೆಲಂಗಾಣದಿಂದ ಸಂಗ್ರಹಿಸಿದ ತೆರಿಗೆ ಹಣದಿಂದ ಬಿಹಾರ, ಗುಜರಾತಿನಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ನಮ್ಮ ತೆರಿಗೆ ಮೊತ್ತ ಅರ್ಧದಷ್ಟು ಮಾತ್ರ ಹಿಂತಿರುಗುತ್ತಿದೆ, ನಿಮಗೆ ನಿಮ್ಮ ಹೈದರಾಬಾದ್ ಉಳಿಯಬೇಕಾದರೆ ಟಿಆರ್‌ಎಸ್‌ಗೆ ಮತ ಹಾಕಿ ಎಂದರು.

 150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಮತದಾನ

150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಮತದಾನ

150 ಸದಸ್ಯರ ಆಯ್ಕೆಗಾಗಿ ಡಿಸೆಂಬರ್ 01ರಂದು ಬೆಳಗ್ಗೆ 7 ರಿಂದ ಸಂಜೆ 6 ತನಕ ಮತದಾನದ ನಡೆಯಲಿದೆ. ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ನವೆಂಬರ್ 20 ಕೊನೆ ದಿನಾಂಕವಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

GHMC Polls: ತೆಲಂಗಾಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ತೇಜಸ್ವಿ ಸೂರ್ಯGHMC Polls: ತೆಲಂಗಾಣ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ತೇಜಸ್ವಿ ಸೂರ್ಯ

 150ರಲ್ಲಿ 99 ಸ್ಥಾನಗಳಿಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ

150ರಲ್ಲಿ 99 ಸ್ಥಾನಗಳಿಸಿದ್ದ ತೆಲಂಗಾಣ ರಾಷ್ಟ್ರ ಸಮಿತಿ

2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 74 ಲಕ್ಷ ಮತದಾರರಿದ್ದಾರೆ. ಹೀಗಾಗಿ, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಡಲಿವೆ.

 ಪ್ರತಿ ಅಭ್ಯರ್ಥಿಗೆ ಭದ್ರತಾ ಠೇವಣಿ 5 ಸಾವಿರ ರು

ಪ್ರತಿ ಅಭ್ಯರ್ಥಿಗೆ ಭದ್ರತಾ ಠೇವಣಿ 5 ಸಾವಿರ ರು

ಪ್ರತಿ ಅಭ್ಯರ್ಥಿ 5 ಲಕ್ಷ ರು ಖರ್ಚು ವೆಚ್ಚದ ಮಿತಿ ಪ್ರತಿ ಅಭ್ಯರ್ಥಿಗೆ ಭದ್ರತಾ ಠೇವಣಿ 5 ಸಾವಿರ ರು ಎಂದು ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಭದ್ರತಾ ಠೇವಣಿ 2,500 ರು ಮಾತ್ರ, ಎಲ್ಲವನ್ನು ಆನ್ ಲೈನ್ ನಲ್ಲಿ ಸ್ವೀಕರಿಸಲಾಗಿದೆ. ಪ್ರತಿ ಅಭ್ಯರ್ಥಿಗೆ ಚುನಾವಣಾ ಖರ್ಚು ವೆಚ್ಚದ ಮಿತಿ 5 ಲಕ್ಷ ರು ಎಂದು ನಿಗದಿಯಾಗಿದೆ. 48,000 ಮತಗಟ್ಟೆ ಸಿಬ್ಬಂದಿ, ಸುಮಾರು 30, 000 ಪೊಲೀಸ್ ಸಿಬ್ಬಂದಿ ಚುನಾವಣಾ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಚುನಾವಣಾ ಆಯುಕ್ತ ಪಾರ್ಥಸಾರಥಿ ಹೇಳಿದ್ದಾರೆ.

English summary
TRS working president and Telangana minister KT Rama Rao (KTR) said BJP for creating rifts between Hindus and Muslims and are Delhi tourists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X