ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GHMC EXIT POll: ''ಭಾಗ್ಯನಗರ'' ಬಿರ್ಯಾನಿ ಮತ್ತೆ TRS ಪಾಲು

|
Google Oneindia Kannada News

ದೇಶದ ಗಮನ ಸೆಳೆದ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗಾಗಿ ಡಿಸೆಂಬರ್ 1ರಂದು ಮತದಾನವಾಗಿತ್ತು. ಡಿಸೆಂಬರ್ 4ರಂದು ಫಲಿತಾಂಶಾ ಹೊರ ಬರಲಿದೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಗೆ ಸವಾಲು ಹಾಕಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾರಿ ಪ್ರಚಾರದೊಂದಿಗೆ ಕಣಕ್ಕಿಳಿದಿತ್ತು. ಆದರೆ, ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರ ಬಂದಿದ್ದು, ಹೈದರಾಬಾದ್ ಮೇಲೆ ಮತ್ತೆ ಟಿಆರ್ ಎಸ್ ತನ್ನ ಬಾವುಟ ಹಾರಿಸಲಿದೆ.

2016ರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) ಪಕ್ಷ 150ರಲ್ಲಿ 99 ಸ್ಥಾನಗಳಿಸಿ ಆಡಳಿತ ವಹಿಸಿಕೊಂಡಿತ್ತು. ಗ್ರೇಟರ್ ಹೈದರಾಬಾದ್ ಮುನ್ಸಿಪಾಲ್ ಕಾರ್ಪೊರೇಷನ್ (GHMC) ವ್ಯಾಪ್ತಿಯಲ್ಲಿ 20 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಆಡಳಿತಾರೂಢ ಟಿಆರ್ ಎಸ್ ಅಲ್ಲದೆ, ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಕೂಡಾ ಪಾಲಿಕೆಯಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಲು ಸೆಣಸಾಟ ನಡೆಸಿದ್ದವು. ಡಿ.1ರಂದು ಶೇ 46ರಷ್ಟು ಮತದಾನ ದಾಖಲಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ.

GHMC ಚುನಾವಣೆ 2020(150 ಸ್ಥಾನ): ವಿವಿಧ ಎಕ್ಸಿಟ್ ಪೋಲ್ ಸರಾಸರಿ
AARAA ಸಂಸ್ಥೆ ಸಮೀಕ್ಷೆ:

GHMC Elections 2020: Exit Poll Results

ಪಕ್ಷ-ಸ್ಥಾನ-ಶೇಕಡಾವಾರು ಮತ ಗಳಿಕೆ

ಟಿಆರ್ ಎಸ್: 78; 40.08%
ಬಿಜೆಪಿ:28; 31.21%
ಎಐಎಂಐಎಂ: 41; 13.43%
ಕಾಂಗ್ರೆಸ್: 03: 8.58%
ಇತರೆ:00: 7.70%

****
Peoples Pulse ಸಂಸ್ಥೆ (ಮಾರ್ಜಿನ್ ± 3%)
ಟಿಆರ್ ಎಸ್: 68 ರಿಂದ 78
ಬಿಜೆಪಿ: 25 ರಿಂದ 35
ಎಐಎಂಐಎಂ: 38 ರಿಂದ 42
ಕಾಂಗ್ರೆಸ್: 01 ರಿಂದ 05
ಇತರೆ: 00
****
TRS ಆಂತರಿಕ ಸಮೀಕ್ಷೆ
ಟಿಆರ್ ಎಸ್: 82 ರಿಂದ 96
ಬಿಜೆಪಿ: 12 ರಿಂದ 20
ಎಐಎಂಐಎಂ: 32 ರಿಂದ 38
ಕಾಂಗ್ರೆಸ್: 03 ರಿಂದ 05
ಇತರೆ: 00
**
ಜನ್ ಕಿ ಬಾತ್ ಸಂಸ್ಥೆ
ಟಿಆರ್ ಎಸ್: 74; 37.4%
ಬಿಜೆಪಿ: 31; 33.6%
ಎಐಎಂಐಎಂ: 40; 21%
ಕಾಂಗ್ರೆಸ್: 00: 4.2%
ಇತರೆ: 05: 3.8%
***
HMR ರಿಸರ್ಚ್ ಪ್ರೈ ಲಿಮಿಟೆಡ್
ಟಿಆರ್ ಎಸ್: 65 ರಿಂದ 70
ಬಿಜೆಪಿ: 27 ರಿಂದ 31
ಎಐಎಂಐಎಂ: 35 ರಿಂದ 40
ಕಾಂಗ್ರೆಸ್: 03 ರಿಂದ 06
ಇತರೆ: 00 ರಿಂದ 3

***
ಬಿಜೆಪಿ ಸವ್ಯಸಾಚಿ ಪೋಲ್ ಸ್ಟರ್ ಅಂದಾಜು"

ಟಿಆರ್ ಎಸ್: 50 ರಿಂದ 60
ಬಿಜೆಪಿ: 42 ರಿಂದ 50
ಎಐಎಂಐಎಂ: 35 ರಿಂದ 43
ಕಾಂಗ್ರೆಸ್/ಇತರೆ: 06 ರಿಂದ 13

ಒಟ್ಟಾರೆ, ತೆಲಂಗಾಣ ರಾಷ್ಟ್ರೀಯ ಸಮಿತಿ ಕಳೆದ ಬಾರಿಯಂತೆ 99 ಸ್ಥಾನ ಗಳಿಸಲು ಸಾಧ್ಯವೇ ಇಲ್ಲ, 70ಪ್ಲಸ್ ಗಳಿಸುವ ಸಾಧ್ಯತೆ ಹೆಚ್ಚಿದೆ. ಬಿಜೆಪಿ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಪಡೆಯಲಿದ್ದು, 18 ರಿಂದ 20 ವಾರ್ಡ್ ತನ್ನ ವಶಕ್ಕೆ ಪಡೆದುಕೊಳ್ಳಲಿದೆ. ಎಂಐಎಂ ಕಳೆದ ಬಾರಿ ಪ್ರದರ್ಶನವನ್ನೇ ಮತ್ತೆ ತೋರಲಿದೆ. ಕಾಂಗ್ರೆಸ್ ಪ್ರದರ್ಶನದಲ್ಲಿ ಯಾವುದೇ ಏಳಿಗೆ ಇಲ್ಲ ಎಂದು ಸಮೀಕ್ಷೆಗಳು ಹೇಳಿವೆ.

2016ರಲ್ಲಿ ಟಿಆರ್ ಎಸ್ 99(43%), ಎಂಐಎಂ 44(15.85%), ಕಾಂಗ್ರೆಸ್ 1(10.40%), ಟಿಡಿಪಿ 2 (13.11%) ಹಾಗೂ ಬಿಜೆಪಿ 4 (10.34%) ಫಲಿತಾಂಶ ಬಂದಿತ್ತು.

English summary
The Greater Hyderabad Municipal Corporation (GHMC) election for 150 seat held on December 1 and result will be out on December 4. Here is exit poll results which indict TRS edge over BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X