• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದ್ ಚುನಾವಣೆ: ಅತಿ ಹೆಚ್ಚು ಸ್ಥಾನ ಗಳಿಸಿದ ಟಿಆರ್‌ಎಸ್

|
Google Oneindia Kannada News

ಹೈದರಾಬಾದ್, ಡಿ.4: ದೇಶದ ಗಮನ ಸೆಳೆದ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್) ಅತಿ ಹೆಚ್ಚು ಸ್ಥಾನ ಗಳಿಸಿದೆ. ಆದರೆ, ಮ್ಯಾಜಿಕ್ ನಂಬರ್ 76 ದಾಟುವಲ್ಲಿ ವಿಫಲವಾಗಿದೆ. ಕಳೆದ ಬಾರಿಗಿಂತ ಉತ್ತಮ ಸಾಧನೆ ತೋರಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಎರಡನೇ ಸ್ಥಾನ ಹಾಗೂ ಎಐಎಂಐಎಂ ಮೂರನೇ ಸ್ಥಾನ ಪಡೆದುಕೊಂಡಿದ್ದರೆ, ಕಾಂಗ್ರೆಸ್ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಅಧಿಕೃತ ಫಲಿತಾಂಶ ಇನ್ನೂ ಪ್ರಕಟವಾಗಬೇಕಿದೆ.

ಚುನಾವಣಾ ಆಯೋಗದ ಅಧಿಕೃತ ಮಾಹಿತಿಯಂತೆ 150ರ ಪೈಕಿ 144 ವಾರ್ಡುಗಳ ಫಲಿತಾಂಶ ಪ್ರಕಟವಾಗಿದೆ.

ಸಮಯ 9:40 ರಂತೆ ಬಲಾಬಲ ಹೀಗಿದೆ

ಟಿಆರ್‌ಎಸ್: 55
ಬಿಜೆಪಿ: 46
ಎಐಎಂಐಎಂ: 42
ಕಾಂಗ್ರೆಸ್: 2

GHMC Elections Result 2020: ಯಾವ ವಾರ್ಡ್‌ನಲ್ಲಿ ಯಾರಿಗೆ ಗೆಲುವು?GHMC Elections Result 2020: ಯಾವ ವಾರ್ಡ್‌ನಲ್ಲಿ ಯಾರಿಗೆ ಗೆಲುವು?

GHMC Results 2020 ವಲಯವಾರು ಫಲಿತಾಂಶ
ವಲಯ ಒಟ್ಟು ವಾರ್ಡ್ ಫಲಿತಾಂಶ ಟಿಆರ್‌ಎಸ್ ಬಿಜೆಪಿ ಎಐಎಂಐಎಂ ಕಾಂಗ್ರೆಸ್ ಒಟ್ಟು
ಚಾರ್ಮಿನಾರ್ 36 36 0 7 29 - 36
ಖೈರತಾಬಾದ್ 27 27 5 9 13 -- 27
ಕೂಕಟ್ಪಲ್ಲಿ 22 22 20 2 -- 0 22
ಎಲ್ ಬಿ ನಗರ್ 23 23 6 15 0 2 23
ಸಿಕಂದರಾಬಾದ್ 27 26 11 14 1 -- 26(Neredmet: HC issue)
ಸಿರಿಲಿಂಗಂಪಲ್ಲಿ 15 15 13 1 1 -- 15
ಒಟ್ಟು 150 149 55 48 44 2 149

2016ರಲ್ಲಿ ಫಲಿತಾಂಶ: ಟಿಆರ್‌ಎಸ್ 99(43%) ಎಂಐಎಂ 44(15.85%), ಕಾಂಗ್ರೆಸ್ 1(10.40%), ಟಿಡಿಪಿ 2 (13.11%) ಬಿಜೆಪಿ 4 (10.34%) ಡಿ.1ರಂದು ಶೇ 46.55ರಷ್ಟು ಮತದಾನ ದಾಖಲಾಗಿತ್ತು. ಹಾಲಿ ಪಾಲಿಕೆ ಅವಧಿ ಫೆಬ್ರವರಿ 10, 2021ರಂದು ಕೊನೆಗೊಳ್ಳಲಿದೆ. ಸಾಮಾನ್ಯ ವರ್ಗದ ಮಹಿಳೆಗೆ ಈ ಬಾರಿ ಮೇಯರ್ ಸ್ಥಾನ ಮೀಸಲಾಗಿದೆ. 1200ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ಡಿ.4ರಂದು ನಿರ್ಧಾರವಾಗಿದೆ.

English summary
GHMC election result 2020: TRS set to retain the Hyderabad civic body with 55 out of 150.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X