ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GHMC Election results: ಅಂಚೆಮತದಲ್ಲಿ ಬಿಜೆಪಿಗೆ ಜಯ

|
Google Oneindia Kannada News

ಹೈದರಾಬಾದ್, ಡಿ. 4: ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳನ್ನು ಎಣಿಸಲಾಗಿದ್ದು, ಬಿಜೆಪಿ ಜಯ ದಾಖಲಿಸಿದೆ.

ಇವಿಎಂ ಬದಲಿಗೆ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗಿದ್ದು, ಹೈದರಾಬಾದ್ ನಗರದ 30 ಮತ ಎಣಿಕೆ ಕೇಂದ್ರಗಳಲ್ಲಿ 8,152 ಸಿಬ್ಬಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಿದ್ದಾರೆ. ಬೆಳಗ್ಗೆ 10 ಗಂಟೆ ಸಮಯದ ಟ್ರೆಂಡ್ ನಂತೆ ಬಿಜೆಪಿ 20 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದ್ದರೆ, ಟಿಆರ್‌ಎಸ್ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

GHMC election result 2020: BJP takes lead and win Postal Ballot

GHMC Election results: ಆರಂಭಿಕ ಮುನ್ನಡೆ ಪಡೆದ ಬಿಜೆಪಿ GHMC Election results: ಆರಂಭಿಕ ಮುನ್ನಡೆ ಪಡೆದ ಬಿಜೆಪಿ

ವಿವಿಧ ಡಿವಿಷನ್ ಗಳಲ್ಲಿ ವಿವಿಧ ಪಕ್ಷಗಳಿಗೆ ಬಂದಿರುವ ಮತಗಳ ವಿವರ:

* ಗಾಜುಲರಾಮರಂನಲ್ಲಿ ಬಿಜೆಪಿಗೆ 3, ಟಿಆರ್‌ಎಸ್ 2 ಮತ್ತು ಕಾಂಗ್ರೆಸ್‌ಗೆ 1 ಅಂಚೆ ಮತಪತ್ರಗಳು ಬಂದಿವೆ
* ಸುರಾರಂ ಡಿವಿಷನ್ ನಲ್ಲಿ, ಟಿಆರ್‌ಎಸ್ 1, ಬಿಜೆಪಿ 1, 2 ಮತಗಳು ಅಮಾನ್ಯವಾಗಿವೆ.
* ಪಟಾನ್ ಚೆರುದಲ್ಲಿ ಟಿಆರ್‌ಎಸ್ 1, ಕಾಂಗ್ರೆಸ್ 1,
* ಭಾರತಿನಗರ: ಟಿಆರ್‌ಎಸ್ 3 ಮತ್ತು ಬಿಜೆಪಿ 4
* ಚಿಂತಲ್: ಬಿಜೆಪಿ 2, ಅಮಾನ್ಯ 2 ಮತಗಳು.
* ಜೆಡಿಮೆಟ್ಲಾ: ಟಿಆರ್‌ಎಸ್ 4, ಬಿಜೆಪಿ 6, ಅಮಾನ್ಯ 1 ಮತಗಳನ್ನು ಹೊಂದಿದೆ.
* ಸುಭಾಷ್ ನಗರ: ಟಿಆರ್‌ಎಸ್ 9, ಬಿಜೆಪಿ 3, ಅಮಾನ್ಯ 2 ಮತಗಳು ದೊರೆತಿವೆ.
* ಚಂಪಪೆಟಾ: ಬಿಜೆಪಿಗೆ 5, ಟಿಆರ್‌ಎಸ್ 2, ಕಾಂಗ್ರೆಸ್ 1 ಮತ.
* ಲಿಂಗೋಜಿಗುಡ: ಬಿಜೆಪಿ 5, ಟಿಆರ್‌ಎಸ್ 2, ಟಿಜೆಎಸ್ 1 ಮತಗಳನ್ನು ಹೊಂದಿದೆ.
* ವನಸ್ಥಲಿಪುರಂ: ಬಿಜೆಪಿ 5, ಟಿಆರ್‌ಎಸ್ 2, ನೋಟಾ 1 ಬಂದಿದೆ.
* ಹಸ್ತಿನಾಪುರಂ: ಬಿಜೆಪಿಗೆ 2 ಮತಗಳಿವೆ.

ಆದರೆ, ಕೆಲವು ಸ್ಥಳಗಳಲ್ಲಿ ಮತ ಎಣಿಕೆ ಇನ್ನೂ ಪ್ರಾರಂಭವಾಗಿಲ್ಲ. ಓಲ್ಡ್ ಮಲಕ್‌ಪೇಟೆ, ಗೋಶಮಹಲ್ ಮತ್ತು ರಾಮನಗರದಲ್ಲಿ ಮತ ಎಣಿಕೆ ಪ್ರಾರಂಭವಾಗಿಲ್ಲ. ತಾಂತ್ರಿಕ ಕಾರಣ, ಟಿಆರ್‌ಎಸ್ -ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ, ಮತ ಎಣಿಕೆ ಏಜೆಂಟರುಗಳು ಬಂದಿಲ್ಲ ಎಂಬ ಕಾರಣ ಸಿಕ್ಕಿದೆ.

GHMC EXIT POll: ''ಭಾಗ್ಯನಗರ'' ಬಿರ್ಯಾನಿ ಮತ್ತೆ TRS ಪಾಲುGHMC EXIT POll: ''ಭಾಗ್ಯನಗರ'' ಬಿರ್ಯಾನಿ ಮತ್ತೆ TRS ಪಾಲು

ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಹೊರ ಬಂದಿದ್ದು, ಹೈದರಾಬಾದ್ ಚುನಾವಣೆಯನ್ನು ಮತ್ತೊಮ್ಮೆ ತೆಲಂಗಾಣ ರಾಷ್ಟ್ರ ಸಮಿತಿ ಗೆಲ್ಲಲಿದೆ ಎಂಬ ವರದಿ ಬಂದಿದೆ. 150 ಸ್ಥಾನಕ್ಕಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಡಿಸೆಂಬರ್ 1ರಂದು ಶೇ 46ರಷ್ಟು ಮತದಾನ ದಾಖಲಾಗಿತ್ತು. ಸುಮಾರು 1,122 ಅಭ್ಯರ್ಥಿಗಳ ಭವಿಷ್ಯ ಇಂದು ತಿಳಿಯಲಿದೆ. 2016ರಲ್ಲಿ ಟಿಆರ್ ಎಸ್ 99(43%), ಎಂಐಎಂ 44(15.85%), ಕಾಂಗ್ರೆಸ್ 1(10.40%), ಟಿಡಿಪಿ 2 (13.11%) ಹಾಗೂ ಬಿಜೆಪಿ 4 (10.34%) ಫಲಿತಾಂಶ ಬಂದಿತ್ತು.

English summary
The counting of votes in the high-stakes Hyderabad civic poll has begun at 8 am, BJP takes early lead and win Postal Ballot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X