ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಚ್‌ಎಂಸಿ ಚುನಾವಣೆ; ಪ್ರಚಾರ ಮಾಡಿದವರು ಐಸೋಲೇಷನ್‌ಗೆ!

|
Google Oneindia Kannada News

ಹೈದರಾಬಾದ್, ಡಿಸೆಂಬರ್ 04 : ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ನಾಯಕರು, ಕಾರ್ಯಕರ್ತರು ಒಂದು ವಾರಗಳ ಕಾಲ ಐಸೋಲೇಷನ್‌ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.

ಜಿಎಚ್‌ಎಂಸಿಯ 150 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯು ಶುಕ್ರವಾರ ನಡೆಯುತ್ತಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದವರು ಐಸೋಲೇಷನ್‌ನಲ್ಲಿ ಇರುವಂತೆ ಸಲಹೆ ನೀಡಲಾಗಿದೆ.

ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ? ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ?

ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಶ್ರೀನಿವಾಸ ರಾವ್, "ಪಕ್ಷಗಳ ನಾಯಕರು, ಕಾರ್ಯಕರ್ತರು ಒಂದು ವಾರಗಳ ಕಾಲ ಐಸೋಲೇಷನ್‌ನಲ್ಲಿ ಇರಬೇಕು. ಕೋವಿಡ್ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.

GHMC Polls: ಹೈದರಾಬಾದ್ ಚುನಾವಣೆಗೆ ಯಾಕಿಷ್ಟು ಮಹತ್ವ?GHMC Polls: ಹೈದರಾಬಾದ್ ಚುನಾವಣೆಗೆ ಯಾಕಿಷ್ಟು ಮಹತ್ವ?

GHMC Election Isolation Advise For Workers Who Busy In Campaign

ಡಿಸೆಂಬರ್ 3ರಂದು ತೆಲಂಗಾಣ ರಾಜ್ಯದಲ್ಲಿ 631 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ, ಇಬ್ಬರು ಮೃತಪಟ್ಟಿದ್ದಾರೆ. ಮಾರ್ಚ್ 2ರ ಬಳಿಕ ರಾಜ್ಯದಲ್ಲಿ 272,123 ಹೊಸ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿವೆ. ರಾಜ್ಯದಲ್ಲಿ ಗುಣಮುಖಗೊಳ್ಳುವವರ ಪ್ರಮಾಣ ಶೇ 96.21ರಷ್ಟಿದೆ.

ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ! ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ!

ತೆಲಂಗಾಣ ರಾಜ್ಯದಲ್ಲಿ 8,826 ಸಕ್ರಿಯ ಪ್ರಕರಣಗಳಿವೆ. 6,817 ಜನರು ಮನೆಯಲ್ಲಿಯೇ ಐಸೋಲೇಷನ್‌ನಲ್ಲಿದ್ದಾರೆ. ಜಿಎಚ್‌ಎಂಸಿ ಚುನಾವಣೆ ಪ್ರಚಾರಕ್ಕಾಗಿ ಸಾವಿರಾರು ಜನರು ಸೇರಿದ್ದರು. ಆದ್ದರಿಂದ, ರಾಜ್ಯದಲ್ಲಿ 2ನೇ ಹಂತದ ಕೋವಿಡ್ ಅಲೆ ಆರಂಭವಾಗಲಿದೆ ಎಂಬ ಆತಂಕ ಉಂಟಾಗಿದೆ.

ಉಷ್ಣಾಂಶದಲ್ಲಿನ ಕುಸಿತ, ಸಾವಿರಾರು ಜನರು ಗುಂಪು ಗೂಡಿದ್ದು, ಹಬ್ಬಗಳು, ಮದುವೆ ಸಮಾರಂಭಗಳಿಂದಾಗಿ ರಾಜ್ಯದಲ್ಲಿ ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಚುನಾವಣೆ ಪ್ರಚಾರದಲ್ಲಿ ಇದ್ದವರಿಗೆ ಐಸೋಲೇಷನ್‌ಗೆ ಸಲಹೆ ಕೊಡಲಾಗಿದೆ.

Recommended Video

Jadeja ಅಷ್ಟು ಒಳ್ಳೆ Batting ಮಾಡಿ Bowling ಮಾಡಲಿಲ್ಲ | Oneindia Kannada

ಜಿಎಚ್‌ಎಂಸಿ ಚುನಾವಣೆಯ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಹಲವಾರು ಸಂಸದರು ಆಗಮಿಸಿದ್ದರು.

English summary
Fearing a second wave of Covid-19 cases in Telangana director of public health advises leaders, campaign workers of GHMC election to isolate for one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X