ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುತಾತ್ಮ ಯೋಧನ ಪತ್ನಿಗೆ ಕೊಟ್ಟು ಮಾತು ಉಳಿಸಿಕೊಂಡ ತೆಲಂಗಾಣ ಸರ್ಕಾರ

|
Google Oneindia Kannada News

ಹೈದರಾಬಾದ್, ಜುಲೈ 23: ಗಾಲ್ವಾನ್ ಕಣಿವೆ ಗಡಿ ಪ್ರದೇಶದಲ್ಲಿ ನಡೆದ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪತ್ನಿಗೆ ತೆಲಂಗಾಣ ಸರ್ಕಾರ ಉದ್ಯೋಗ ನೀಡಿದೆ.

Recommended Video

ಅಭಿಮಾನಿಗಳೊಂದಿಗೆ ಖುಷಿ ವಿಚಾರ ಹಂಚಿಕೊಂಡ ಸುಮಲತಾ | Oneindia Kannada

ಕರ್ನಲ್ ಸಂತೋಷ್ ಬಾಬು ಅವರ ಪತ್ನಿಯನ್ನು ತೆಲಂಗಾಣದ ಉಪ ಜಿಲ್ಲಾಧಿಕಾರಿಯಾಗಿ (Deputy collector) ನೇಮಕ ಮಾಡಿ ಬುಧವಾರ ಸರ್ಕಾರ ಆದೇಶಿಸಿದೆ. ನೇಮಕಾತಿ ಪತ್ರ ಸಹ ಯೋಧನ ಪತ್ನಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ಚೆಕ್‌ ನೀಡಿದ ಕೆಸಿಆರ್ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಕುಟುಂಬಕ್ಕೆ 5 ಕೋಟಿ ಚೆಕ್‌ ನೀಡಿದ ಕೆಸಿಆರ್

ಈ ಕುರಿತು ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿರುವ ಸರ್ಕಾರ, 'ಇಂಡೋ-ಚೀನಾ ಗಡಿಯಲ್ಲಿ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪತ್ನಿ ಎಂ.ಎಸ್.ಸಂತೋಶಿ ಅವರನ್ನು ಜಿಲ್ಲಾ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಗೌರವಾನ್ವಿತ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬುಧವಾರ ಪ್ರಗತಿ ಭವನದಲ್ಲಿ ನೇಮಕ ಪತ್ರವನ್ನು ಎಂ.ಎಸ್.ಸಂತೋಶಿ ಅವರಿಗೆ ಹಸ್ತಾಂತರಿಸಿದರು' ಎಂದು ತಿಳಿಸಿದೆ.

Galwan Valley Martyr Colonel Santosh Babus Wife Appointed As Deputy Collector

ಸಂತೋಶಿ ಅವರನ್ನು ಹೈದರಾಬಾದ್ ಅಥವಾ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪೋಸ್ಟ್ ಮಾಡುವಂತೆ ಸಿಎಂ ಕೆಸಿಆರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಂತೋಶಿ ಅವರು ಸರಿಯಾದ ತರಬೇತಿ ಪಡೆದು ತನ್ನ ಉದ್ಯೋಗದಲ್ಲಿ ನೆಲೆಸುವವರೆಗೂ ಅವರಿಗೆ ಸೂಕ್ತ ಸಹಾಯ ಮಾಡುವಂತೆ ತಮ್ಮ ಕಾರ್ಯದರ್ಶಿ ಸ್ಮಿತಾ ಸಭರ್ವಾಲ್‌ಗೆ ತಿಳಿಸಿದ್ದಾರೆ ಎಂದು ತಿಳಿದಿದೆ.

ಜಿಲ್ಲಾಧಿಕಾರಿ ಉದ್ಯೋಗದ ಜೊತೆಗೆ ಹೈದರಾಬಾದ್‌ ನಗರದಲ್ಲಿ 711 ಚದರ ಅಡಿ ವಿಸ್ತೀರ್ಣದ ನಿವೇಶನ ನೀಡಿದೆ. ಈ ಸಂಬಂಧ ಜಿಲ್ಲಾಧಿಕಾರಿ ದಾಖಲೆ ಪತ್ರಗಳನ್ನು ಸಹ ಸಂತೋಶಿ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಸರ್ಕಾರ ಅಧಿಕೃತವಾಗಿ ತಿಳಿಸಿದೆ.

Galwan Valley Martyr Colonel Santosh Babus Wife Appointed As Deputy Collector

ಕರ್ನಲ್ ಸಂತೋಷ್ ಬಾಬು ಅವರ ಹುತಾತ್ಮರಾದ ಸಂದರ್ಭದಲ್ಲಿ ಅವರ ಮನೆಗೆ ಭೇಟಿ ನೀಡಿದ್ದು ಸಿಎಂ ಚಂದ್ರಶೇಖರ್ ರಾವ್ ಅವರು 5 ಕೋಟಿ ಪರಿಹಾರ ಘೋಷಿಸಿದ್ದರು. ಸರ್ಕಾರಿ ಉದ್ಯೋಗ ಮತ್ತು ನಿವೇಶನ ನೀಡುವುದಾಗಿ ಹೇಳಿದ್ದರು. ಅಂದು ಸಿಎಂ ಕೊಟ್ಟ ಮಾತಿನಂತೆ ಈಗ ಎಲ್ಲವೂ ಒದಗಿಸಲಾಗಿದೆ.

ಅಂದ್ಹಾಗೆ, ಜೂನ್ 15 ರಂದು ಲಡಾಖ್‌ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡೆದ ಘರ್ಷಣೆಯಲ್ಲಿ ಕರ್ನಲ್ ಸಂತೋಷ್ ಬಾಬು ಸೇರಿದಂತೆ 20 ಜನ ಯೋಧರು ಹುತಾತ್ಮರಾಗಿದ್ದರು.

English summary
Galwan Valley martyr Colonel Santosh Babu's wife Santoshi appointed as Deputy Collector in Telangana and she recived house site in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X