ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಲಯ ಅರಣ್ಯಾಧಿಕಾರಿ ಮೇಲೆ ಟಿಆರ್ ಎಸ್ ಕಾರ್ಯಕರ್ತರ ಮಾರಣಾಂತಿಕ ಹಲ್ಲೆ

|
Google Oneindia Kannada News

ಹೈದರಾಬಾದ್, ಜೂನ್ 30: ಮರ ನೆಡುವ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಅರಣ್ಯಾಧಿಕಾರಿ ಮೇಲೆ ಭಾನುವಾರ ಬೆಳಗ್ಗೆ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡ, ಆತನ ಬೆಂಬಲಿಗರು ಹಾಗೂ ಸ್ಥಳೀಯ ಹಳ್ಳಿಗರು ಹಲ್ಲೆ ನಡೆಸಿದ್ದಾರೆ. ಆಕೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ದಾಳಿಯ ನಂತರ ಅಧಿಕಾರಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅರಣ್ಯ ವಲಯ ಅಧಿಕಾರಿ ಅನಿತಾ ಅವರ ಮೇಲೆ ಹಲ್ಲೆ ನಡೆಸಲಾಗಿದ್ದು, ಅವರು ಅಸಹಾಯಕರಾಗಿ ಕಂಡುಬರುತ್ತಾರೆ. ಸಿಟ್ಟಾಗಿರುವ ಗುಂಪು ದೊಡ್ಡ ಮರದ ತುಂಡುಗಳನ್ನು ಹಿಡಿದು, ಆಕೆಯನ್ನು ಸುತ್ತುವರಿದಿರುವುದು ಕಂಡುಬರುತ್ತದೆ. ಅನಿತಾ ನಿಂತಿರುವ ಟ್ರ್ಯಾಕ್ಟರ್ ಅನ್ನು ಸುತ್ತುವರಿದು, ಹಲ್ಲೆ ನಡೆಸಲಾಗಿದೆ.

ದಲಿತ ಯುವಕನ ಬಟ್ಟೆ ಬಿಚ್ಚಿ ಹಲ್ಲೆ, ವಿಡಿಯೋ ಮಾಡಿದ್ದ ಇಬ್ಬರ ಬಂಧನದಲಿತ ಯುವಕನ ಬಟ್ಟೆ ಬಿಚ್ಚಿ ಹಲ್ಲೆ, ವಿಡಿಯೋ ಮಾಡಿದ್ದ ಇಬ್ಬರ ಬಂಧನ

ಅನಿತಾ ಅವರ ಮೇಲೆ ಹಲ್ಲೆ ನಡೆಸಿರುವವರ ಪೈಕಿ ಸ್ಥಳೀಯ ಜಿಲ್ಲಾಪರಿಷತ್ ಉಪಾಧ್ಯಕ್ಷ ಕೊನೇರು ಕೃಷ್ಣ, ಮತ್ತೊಬ್ಬ ಜನಪ್ರತಿನಿಧಿಯ ಸೋದರ ಕೊನೇರು ಕೋನಪ್ಪ ಇದ್ದರು ಎನ್ನಲಾಗಿದೆ. ಇತರ ಪೊಲೀಸ್ ಅಧಿಕಾರಿಗಳು ಆಕೆಗೆ ರಕ್ಷಣೆ ನೀಡಲು ಯತ್ನಿಸಿದರೂ ಅವರನ್ನೆಲ್ಲ ತಳ್ಳುತ್ತಾ ದಾಳಿ ನಡೆಸಿದ್ದಾರೆ.

Assault

ಕೊಮರಂ ಭೀಮ್ ಅಸೀಫಾಬಾದ್ ಜಿಲ್ಲೆಯಲ್ಲಿ ಅನಿತಾ ಮತ್ತು ಅವರ ತಂಡದ ಮೇಲೆ ದಾಳಿ ನಡೆದಿದೆ. ಕಾಡು ಬೆಳೆಸುವ ಉದ್ದೇಶದಿಂದ ಸರಕಾರದ ಜಾಗದಲ್ಲಿ ಗಿಡ ನೆಡಲು ಅರಣ್ಯ ಇಲಾಕೆ ಮುಂದಾಗಿತ್ತು. ಆದರೆ ಸ್ಥಳೀಯರು ಆ ಜಾಗದಲ್ಲಿ ಕಾನೂನುಬಾಹಿರವಾಗಿ ಕೃಷಿ ಮಾಡುತ್ತಿದ್ದರು. ಆ ಸ್ಥಳವನ್ನು ಸರಕಾರ ಮತ್ತೆ ವಶಪಡಿಸಿಕೊಳ್ಳಲು ಅವಕಾಶ ನೀಡಬಾರದೆಂದು ಹೀಗೆ ಮಾಡಿದ್ದಾರೆ.

ಚರ್ಚೆಯ ವೇಳೆ ಪತ್ರಕರ್ತನನ್ನು ನೆಲಕ್ಕೆ ಕೆಡವಿ ಬಡಿದ ಇಮ್ರಾನ್ ಪಕ್ಷದ ನಾಯಕಚರ್ಚೆಯ ವೇಳೆ ಪತ್ರಕರ್ತನನ್ನು ನೆಲಕ್ಕೆ ಕೆಡವಿ ಬಡಿದ ಇಮ್ರಾನ್ ಪಕ್ಷದ ನಾಯಕ

ವಲಯ ಅರಣ್ಯಾಧಿಕಾರಿ ಅನಿತಾ ಅವರು ಮೂವತ್ತು ಪೊಲೀಸರು, ಮೂವತ್ತು ಅರಣ್ಯ ಸಿಬ್ಬಂದಿ ಜತೆಗೆ ತೆರಳಿದ್ದರು. ನಾವು ಸರಕಾರದ ಆದೇಶವನ್ನು ಮಾತ್ರ ಪಾಲಿಸುತ್ತಿದ್ದೇವೆ ಎಂದು ಹೇಳುತ್ತಿದ್ದರೂ ಅನಿತಾ ಅವರ ಮೇಲಿನ ದಾಳಿ ನಡೆಸುವುದು ನಿಲ್ಲಿಸಿಲ್ಲ.

ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು ಹದಿನಾರು ಮಂದಿಯನ್ನು ಬಂಧಿಸಲಾಗಿದೆ. ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಈ ಘಟನೆ ನಡೆಯುವ ವೇಳೆ ಏಕೆ ಗುಂಡು ಹಾರಿಸಲಿಲ್ಲ ಎಂಬ ಬಗ್ಗೆ ತನಿಖೆ ನಡೆಯಲಿದೆ.

English summary
Forest officer assaulted by TRS leader and supporters. Officer Anitha admitted to hospital now. 16 people arrested related to this case. some more people likely to arrest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X