ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಪ್ರದೇಶದಲ್ಲಿ ಮೊದಲ ಕೊರೊನಾ ಕೇಸ್‌ ದೃಢ: ಆರೋಗ್ಯ ಇಲಾಖೆ

|
Google Oneindia Kannada News

ಹೈದರಾಬಾದ್, ಮಾರ್ಚ್ 12: ಕರ್ನಾಟಕ, ಕೇರಳ, ತೆಲಂಗಾಣ, ಮಹಾರಾಷ್ಟ್ರ ಬಳಿಕ ಈಗ ದಕ್ಷಿಣ ಭಾರತದ ಇನ್ನೊಂದು ರಾಜ್ಯದಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಟಲಿಯಿಂದ ನೆಲ್ಲೂರಿಗೆ ಬಂದಿದ್ದ ವ್ಯಕ್ತಿಗೆ ಕೊರೊನಾ ಪಾಸಿಟೀವ್ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

ಮಾರ್ಚ್‌ 6 ರಂದು ನೆಲ್ಲೂರಿಗೆ ಬಂದಿದ್ದ ವ್ಯಕ್ತಿಯಲ್ಲಿ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಹುಶಃ ಸೋಂಕು ತಗುಲಿರಬಹುದು ಎಂಬ ಅನುಮಾನ ಕಾಡುತ್ತಿತ್ತು. ಇಂದು ಅಧಿಕೃತವಾಗಿ ವೈದ್ಯರು ಕೊರೊನಾ ಪಾಸಿಟೀವ್ ಎಂದು ಘೋಷಿಸಿದ್ದಾರೆ.

ಫ್ರಾನ್ಸ್‌ನಿಂದ ಬಂದ ಮಹಿಳೆಗೆ ಕೊರೊನಾ ಶಂಕೆ, ಬೌರಿಂಗ್ ಆಸ್ಪತ್ರೆಗೆ ದಾಖಲುಫ್ರಾನ್ಸ್‌ನಿಂದ ಬಂದ ಮಹಿಳೆಗೆ ಕೊರೊನಾ ಶಂಕೆ, ಬೌರಿಂಗ್ ಆಸ್ಪತ್ರೆಗೆ ದಾಖಲು

ಸದ್ಯಕ್ಕೆ ಸೋಂಕಿತ ವ್ಯಕ್ತಿ ಸಹಜ ಸ್ಥಿತಿಯಲ್ಲಿದ್ದಾನೆ. ಆತನ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ರೋಗ ಲಕ್ಷಣಗಳಲ್ಲಿ ಚೇತರಿಕೆ ಕಂಡುಬರುತ್ತಿದ್ದು, 14 ದಿನದವರೆಗೂ ಆತನ ಮೇಲೆ ನಿಗಾವಹಿಸಲಾಗುತ್ತೆ. ನಂತರ ಕೊನೆ ದಿನ ಮತ್ತೊಮ್ಮೆ ಪರೀಕ್ಷಿಸಿ ದಿಸ್ಚಾರ್ಜ್ ಮಾಡಲಾಗುತ್ತೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

First Coronavirus Case Reported In Andhra Pradesh

ಇನ್ನು ಆ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಅವರ ಮೇಲೂ ನಿಗಾ ಇಡಲಾಗಿದೆ ಎಂದು ಹೇಳಿದ್ದಾರೆ. ಇಟಲಿಯಿಂದ ದೆಹಲಿಗೆ ಬಂದಿದ್ದ ವ್ಯಕ್ತಿ, ಬಳಿಕ ದೆಹಲಿಯಿಂದ ಚೆನ್ನೈಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದರು. ಆಮೇಲೆ ಚೆನ್ನೈನಿಂದ ನೆಲ್ಲೂರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

ಸದ್ಯ, ಇಟಲಿಯಿಂದ ಬರುವ ಜನರ ಮೇಲೆ ಹೆಚ್ಚು ನಿಗಾ ವಹಿಸಲಾಗುತ್ತಿದೆ. ಚೀನಾದಲ್ಲಿ ಕೊರೊನಾ ವೈರಸ್ ನಿಯಂತ್ರಣ ಕಾಣುತ್ತಿದೆ. ಆದರೆ ಇಟಲಿಯಲ್ಲಿ ಕೊರೊನಾ ಹರಡುವಿಕೆ ಹೆಚ್ಚಾಗತ್ತಲೇ ಇದೆ. ಇದುವರೆಗೂ ಇಟಲಿಯಲ್ಲಿ 827 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

English summary
First coronavirus case reported in Andhra Pradesh. Statement just out from the state health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X