ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೇ ನಿನ್ನ ಬಾಯ್‌ಫ್ರೆಂಡ್ ಆಗ್ತೀನಿ ನನ್ನ ಜೊತೆ ಮಲಗು ಎಂದ ವಿಕೃತ ತಂದೆ

|
Google Oneindia Kannada News

ಹೈದರಾಬಾದ್, ಜುಲೈ 3: ನಾನೇ ನಿನ್ನ ಬಾಯ್‌ಫ್ರೆಂಡ್ ಆಗ್ತೀನಿ ನನ್ನ ಜೊತೆಗೆ ಮಲಗು ಎಂದು ಕ್ರೂರಿ ತಂದೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಪ್ರಾಂಶುಪಾಲರ ಲಿಪ್‌ಸ್ಟಿಕ್‌ ಕಾಟಕ್ಕೆ ಬೇಸತ್ತು ಠಾಣೆ ಮೆಟ್ಟಿಲೇರಿದ ಉಪನ್ಯಾಸಕಿಪ್ರಾಂಶುಪಾಲರ ಲಿಪ್‌ಸ್ಟಿಕ್‌ ಕಾಟಕ್ಕೆ ಬೇಸತ್ತು ಠಾಣೆ ಮೆಟ್ಟಿಲೇರಿದ ಉಪನ್ಯಾಸಕಿ

ಆತ ಬೆಳಗ್ಗೆ ಏಳುವಾಗ 16 ವರ್ಷದ ಮಗಳು ಫೋನಿನಲ್ಲಿ ಯಾರದ್ದೋ ಜೊತೆ ಮಾತನಾಡುತ್ತಿದ್ದುದನ್ನು ನೋಡಿ, ನಾನೇ ನಿನ್ನ ಬಾಯ್‌ಫ್ರೆಂಡ್ ಆಗ್ತೀನಿ , ನನ್ನ ಜೊತೆ ಮಲಗು ಎಂದು ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ಆಕೆ ಕೂಗಿಕೊಂಡಾಗ ತಾಯಿಗೆ ಎಚ್ಚರವಾಗಿದ್ದು ಬಂದು ಅನಾಹುತವನ್ನು ತಪ್ಪಿಸಿದ್ದಾರೆ.

Father molests daughter while talking to boy friend

ಇದೀಗ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅವರು ಬಿಹಾರ ಮೂಲದವರಾಗಿದ್ದು, ಕೂಲಿಕೆಲಸ ಮಾಡಿಕೊಂಡಿದ್ದಾರೆ. ಆಕೆಯ ಕೆಳಗೆ ದೂಡಿದ್ದಷ್ಟೇ ಅಲ್ಲದೆ ಆಕೆಯ ಬಟ್ಟೆಯನ್ನು ತೆಗೆಯಲು ಮುಂದಾಗಿದ್ದ.

ಕೆಲವರು ಈ ರೀತಿ ನಡೆದುಕೊಳ್ಳುವುದರಿಂದ ತಂದೆ ಎನ್ನುವ ಸ್ಥಾನಕ್ಕೆ ಬೆಲೆ ಇಲ್ಲದಂತಾಗಿದೆ. ಕ್ರಮೇಣವಾಗಿ ಹೆಣ್ಣುಮಕ್ಕಳು ತಂದೆ ಜೊತೆ ಕೂರಲೂ ಭಯ ಪಡುವಂತಹ ಸ್ಥಿತಿಯನ್ನು ಕೆಲವರು ಸಮಾಜದಲ್ಲಿ ಹುಟ್ಟುಹಾಕುತ್ತಿದ್ದಾರೆ.

ಇಂತಹ ತಂದೆಗೆ ಮಕ್ಕಳಾದರೂ ಯಾಕೆ ಬೇಕು, ಹೆಗಲಮೇಲೆ ಕೂರಿಸಿಕೊಂಡು ಊರೂರು ಸುತ್ತಿಸುವ, ಕೇಳಿದ್ದೆಲ್ಲಾ ಕೊಡಿಸುವ, ಒಂದು ದಿನವೂ ಬೈಯದ, ಹೊಡೆಯದ ಅಪ್ಪಂದರ ಹೆಸರಿಗೆ ಕಳಂಕ ತರುತ್ತಿದ್ದಾರೆ ಇಂತಹ ಪಿಶಾಚಿಗಳು.

English summary
Father molests daughter while talking to boy friend,he pulled up his daughter and tried to remove her clothes saying he would fulfil her desires.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X