ನಾನೇ ನಿನ್ನ ಬಾಯ್ಫ್ರೆಂಡ್ ಆಗ್ತೀನಿ ನನ್ನ ಜೊತೆ ಮಲಗು ಎಂದ ವಿಕೃತ ತಂದೆ
ಹೈದರಾಬಾದ್, ಜುಲೈ 3: ನಾನೇ ನಿನ್ನ ಬಾಯ್ಫ್ರೆಂಡ್ ಆಗ್ತೀನಿ ನನ್ನ ಜೊತೆಗೆ ಮಲಗು ಎಂದು ಕ್ರೂರಿ ತಂದೆಯನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಪ್ರಾಂಶುಪಾಲರ ಲಿಪ್ಸ್ಟಿಕ್ ಕಾಟಕ್ಕೆ ಬೇಸತ್ತು ಠಾಣೆ ಮೆಟ್ಟಿಲೇರಿದ ಉಪನ್ಯಾಸಕಿ
ಆತ ಬೆಳಗ್ಗೆ ಏಳುವಾಗ 16 ವರ್ಷದ ಮಗಳು ಫೋನಿನಲ್ಲಿ ಯಾರದ್ದೋ ಜೊತೆ ಮಾತನಾಡುತ್ತಿದ್ದುದನ್ನು ನೋಡಿ, ನಾನೇ ನಿನ್ನ ಬಾಯ್ಫ್ರೆಂಡ್ ಆಗ್ತೀನಿ , ನನ್ನ ಜೊತೆ ಮಲಗು ಎಂದು ಅನುಚಿತವಾಗಿ ವರ್ತಿಸಿದ್ದಾನೆ. ಬಳಿಕ ಆಕೆ ಕೂಗಿಕೊಂಡಾಗ ತಾಯಿಗೆ ಎಚ್ಚರವಾಗಿದ್ದು ಬಂದು ಅನಾಹುತವನ್ನು ತಪ್ಪಿಸಿದ್ದಾರೆ.
ಇದೀಗ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅವರು ಬಿಹಾರ ಮೂಲದವರಾಗಿದ್ದು, ಕೂಲಿಕೆಲಸ ಮಾಡಿಕೊಂಡಿದ್ದಾರೆ. ಆಕೆಯ ಕೆಳಗೆ ದೂಡಿದ್ದಷ್ಟೇ ಅಲ್ಲದೆ ಆಕೆಯ ಬಟ್ಟೆಯನ್ನು ತೆಗೆಯಲು ಮುಂದಾಗಿದ್ದ.
ಕೆಲವರು ಈ ರೀತಿ ನಡೆದುಕೊಳ್ಳುವುದರಿಂದ ತಂದೆ ಎನ್ನುವ ಸ್ಥಾನಕ್ಕೆ ಬೆಲೆ ಇಲ್ಲದಂತಾಗಿದೆ. ಕ್ರಮೇಣವಾಗಿ ಹೆಣ್ಣುಮಕ್ಕಳು ತಂದೆ ಜೊತೆ ಕೂರಲೂ ಭಯ ಪಡುವಂತಹ ಸ್ಥಿತಿಯನ್ನು ಕೆಲವರು ಸಮಾಜದಲ್ಲಿ ಹುಟ್ಟುಹಾಕುತ್ತಿದ್ದಾರೆ.
ಇಂತಹ ತಂದೆಗೆ ಮಕ್ಕಳಾದರೂ ಯಾಕೆ ಬೇಕು, ಹೆಗಲಮೇಲೆ ಕೂರಿಸಿಕೊಂಡು ಊರೂರು ಸುತ್ತಿಸುವ, ಕೇಳಿದ್ದೆಲ್ಲಾ ಕೊಡಿಸುವ, ಒಂದು ದಿನವೂ ಬೈಯದ, ಹೊಡೆಯದ ಅಪ್ಪಂದರ ಹೆಸರಿಗೆ ಕಳಂಕ ತರುತ್ತಿದ್ದಾರೆ ಇಂತಹ ಪಿಶಾಚಿಗಳು.