• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾತಕಿ ಅಬು ಸಲೇಂಗೆ 7 ವರ್ಷ ಕಠಿಣ ಶಿಕ್ಷೆ

By Mahesh
|

ಹೈದರಾಬಾದ್, ನ, 28: ನಕಲಿ ಪಾಸ್ ಫೋರ್ಟ್ ಬಳಕೆ ಆರೋಪದಡಿಯಲ್ಲಿ ಭೂಗತ ಪಾತಕಿ ಅಬು ಸಲೇಂಗೆ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಗುರುವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿ ಎಂ.ವಿ.ರಮಣನಾಯ್ಡು ಅವರು ತಮ್ಮ ತೀರ್ಪಿನಲ್ಲಿ ಅಪರಾಧಿಯು ಹಲವು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿರುವುದು ಸಾಬೀತಾಗಿದೆ ಎಂದಿದ್ದಾರೆ.

2001ರಲ್ಲಿ ಕೆಲ ಸರ್ಕಾರಿ ಅಧಿಕಾರಿಗಳ ಸಹಾಯದೊಂದಿಗೆ ನಕಲಿ ಜನ್ಮ ದಿನಾಂಕ, ನಕಲಿ ವಿಳಾಸ ಹಾಗೂ ತಂದೆ ಹೆಸರನ್ನು ಬದಲಿಸಿ ಅಬು ಸಲೇಂ ಪಾಸ್ ಫೋರ್ಟ್ ಪಡೆದಿದ್ದ. ನಂತರ ಆತ ದುಬೈಗೆ ಪರಾರಿಯಾಗಿ ಭಾರತದಲ್ಲೂ ತನ್ನ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದ.

ನಂತರ 2009 ರಲ್ಲಿ ಆತ ಸಿಕ್ಕಿಬಿದ್ದ ನಂತರ ಘಟನೆಗೆ ಸಂಬಂಧಿಸಿದಂತೆ ಒಟ್ಟು 10 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಕಳೆದ ನ.18 ರಂದು ಅಬು ಸಲೇಂ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿ ಗುರುವಾರ(ನ.28) ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ.

ಇಂದಿನ ತೀರ್ಪಿನ ಅನ್ವಯ ಪೋರ್ಜರಿ, ವಂಚನೆ ಮತ್ತಿತರ ಅಪರಾಧಗಳಿಗೆ ಐಪಿಸಿ ಕಾಯ್ದೆಯಡಿ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಬು ಸಲೀಂ ವಿರುದ್ಧ ಈಗಾಗಲೇ ಹಲವು ಗಂಭೀರ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಇಂದು ಅದರಲ್ಲಿ ಒಂದಾದ ನಕಲಿ ಪಾಸ್ ಫೋರ್ಟ್ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತ್ರ ತೀರ್ಪು ಹೊರ ಬಿದ್ದಿದೆ. ಈ ಪ್ರಕರಣದಲ್ಲಿ ಇನ್ನೂ ಐವರು ತಲೆ ಮರೆಸಿಕೊಂಡಿದ್ದಾರೆ.

ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಸಲೇಂ 2002ರಲ್ಲಿ ಪ್ರೇಯಸಿ ಮೋನಿಕಾ ಬೇಡಿ ಜತೆ ಲಿಸ್ಬನ್‌ನಲ್ಲಿ ಸೆರೆಸಿಕ್ಕಿದ್ದ. ಮೂರು ವರ್ಷಗಳ ನಂತರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಭಾರತಕ್ಕೆ ಪೋರ್ಚುಗಲ್ ದೇಶದಿಂದ ಹಸ್ತಾಂತರಗೊಂಡಿದ್ದ.

ಹಸ್ತಾಂತರದ ವೇಳೆ ಭಾರತ, ಅಬು ಸಲೇಂಗೆ ಮರಣದಂಡನೆ ಅಥವಾ 25 ವರ್ಷಕ್ಕಿಂತ ಹೆಚ್ಚಿನ ಸೆರೆವಾಸ ಶಿಕ್ಷೆ ವಿಧಿಸುವುದಿಲ್ಲ ಎಂದು ಪೋರ್ಚುಗಲ್ ಗೆ ಭರವಸೆ ನೀಡಲಾಗಿತ್ತು. ಆದರೆ, ನಂತರ ಇಂಥ ಶಿಕ್ಷೆ ವ್ಯಾಪ್ತಿಯಲ್ಲಿ ಬರುವ ಆರೋಪಗಳನ್ನು ಆತನ ವಿರುದ್ಧ ಹೊರಿಸಲಾಗಿದೆ. ಭಾರತದಲ್ಲಿ ತನ್ನ ಮೇಲಿನ ಆರೋಪಗಳ ವಿಚಾರಣೆ ರದ್ದುಗೊಳಿಸುವಂತೆ ಅಬು ಸಲೇಂ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hyderabad: A special CBI court on Thursday sentenced extradited gangster Abu Salem for seven-year imprisonment in a 2001 fake passport case. Salem obtained three passports--one for his wife, another for his girlfriend and starlet Monica Bedi, apart for himself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more