ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಮುಖಂಡ ರಾಜಾ ಸಿಂಗ್‌ಗೆ ನಿಷೇಧ ಹೇರಿದ ಫೇಸ್ಬುಕ್

|
Google Oneindia Kannada News

ಹೈದರಾಬಾದ್, ಸೆ. 3: ಬಿಜೆಪಿ ಮುಖಂಡ, ಹೈದರಾಬಾಗಿನ ಘೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಅವರು ಫೇಸ್ಬುಕ್, ಇನ್ಸ್ಟಾಗ್ರಾಂ ಬಳಸದಂತೆ ನಿಷೇಧ ಹೇರಲಾಗಿದೆ. ಬಿಜೆಪಿಯರಿಗೆ ಫೇಸ್ಬುಕ್ ನ ದ್ವೇಷ ಭಾಷಣ ನಿಯಮ ಜಾರಿಯಾಗುವುದಿಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ ಇದೇ ಮೊದಲ ಬಾರಿಗೆ ರಾಜಕಾರಣಿಯೊಬ್ಬರನ್ನು ನಿಷೇಧಿಸಿದೆ.

Recommended Video

Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

ದ್ವೇಷ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಪೋಸ್ಟ್ ಹಾಕುವ ಮೂಲಕ ಫೇಸ್‌ಬುಕ್‌ ನೀತಿ, ನಿಯಮ ಉಲ್ಲಂಘಿಸಿದ್ದರಿಂದ ರಾಜಾ ಸಿಂಗ್ ರನ್ನು ನಿಷೇಧಿಸಲಾಗಿದೆ ಎಂದು ಫೇಸ್ಬುಕ್ ವಕ್ತಾರರು ಹೇಳಿದ್ದಾರೆ. ದ್ವೇಷ ಹರಡುವುದು, ದ್ವೇಷ ಭಾಷಣಗಳ ವಿರುದ್ಧ ಫೇಸ್ಬುಕ್ ಕಠಿಣ ಕ್ರಮಗಳನ್ನು ಜರುಗಿಸುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.

Facebook bans BJP politician Raja Singh

ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಂಸದೀಯ ಸಮಿತಿಯ ಮುಂದೆ ಫೇಸ್ಬುಕ್ ಅಧಿಕಾರಿಗಳು ಬುಧವಾರದಂದು ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದರು. ರಾಜಕೀಯ ಪಕ್ಷಪಾತದ ಆರೋಪ ಕೂಡಾ ಫೇಸ್ಬುಕ್ ಮೇಲೆ ಕೇಳಿ ಬಂದಿದ್ದು, ಈ ಬಗ್ಗೆ ಸಂಸ್ಥೆ ಸ್ಪಷ್ಟನೆ ನೀಡಿದೆ.

Facebook bans BJP politician Raja Singh

ನನ್ನ ಹೆಸರಿನಲ್ಲಿ ಅನೇಕ ಎಫ್‌ಬಿ ಪುಟಗಳು ಬಳಕೆಯಲ್ಲಿವೆ ಎಂದು ತಿಳಿದು ಬಂದಿದೆ. ನಾನು ಯಾವುದೇ ಅಧಿಕೃತ ಪುಟವನ್ನು ಹೊಂದಿಲ್ಲ ಹೀಗಾಗಿ, ಯಾವುದೇ ಪೋಸ್ಟ್‌ಗಳಿಗೆ ನಾನು ಜವಾಬ್ದಾರನಾಗಿರುವುದಿಲ್ಲ ಎಂದು ರಾಜಾಸಿಂಗ್ ಇತ್ತೀಚೆಗೆ ಪ್ರತಿಕ್ರಿಯಿಸಿದ್ದರು.

English summary
Under pressure for weeks over its handling of hate speech, Facebook on Thursday banned BJP politician T Raja Singh from its platform and Instagram for violating its policy around content promoting violence and hate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X