ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಕ್ಸಿಟ್ ಪೋಲ್: ತೆಲಂಗಾಣದಲ್ಲಿ ಚಂದ್ರಶೇಖರ್ ರಾವ್ ಕಿಂಗ್

|
Google Oneindia Kannada News

ಹೈದರಾಬಾದ್, ಡಿಸೆಂಬರ್ 7: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ ಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಟೈಮ್ಸ್ ನೌ-ಸಿಎನ್ ಎಕ್ಸ್ ಮತದಾನಸಮೀಕ್ಷೆ ಹೇಳಿದೆ.

ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ : ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ?ಐದು ರಾಜ್ಯಗಳ ಎಕ್ಸಿಟ್ ಪೋಲ್ ಫಲಿತಾಂಶ : ರಾಜಸ್ಥಾನದಲ್ಲಿ ಬಿಜೆಪಿಗೆ ಮುಖಭಂಗ?

ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ ಸರಳ ಬಹುಮತ ಪಡೆದುಕೊಳ್ಳಲಿದೆ.

ಚಂದ್ರಶೇಖರ್ ರಾವ್ ಅವರು ಅವಧಿಗೂ ಮುನ್ನವೇ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಮುಂದಾಗಿದ್ದಾರೆ. ಹೆಚ್ಚು ಪ್ರಾಬಲ್ಯ ಹೊಂದಿರುವ ಟಿಆರ್ ಎಸ್ ಅನ್ನು ಮಣಿಸಲು ಕಾಂಗ್ರೆಸ್ ಮತ್ತು ಟಿಡಿಪಿ ಹಾಗೂ ಇತರೆ ಪಕ್ಷಗಳು ಕೈಜೋಡಿಸಿವೆ. ಬಿಜೆಪಿ ಕೂಡ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಟೈಮ್ಸ್‌ ನೌ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಬಿಜೆಪಿ ದೊಡ್ಡ ಪಕ್ಷ ಟೈಮ್ಸ್‌ ನೌ ಸಮೀಕ್ಷೆ: ಛತ್ತೀಸ್‌ಘಡ್‌ನಲ್ಲಿ ಬಿಜೆಪಿ ದೊಡ್ಡ ಪಕ್ಷ

ಟಿಡಿಪಿ-ಬಿಜೆಪಿ ಪಕ್ಷಗಳು ಜತೆಯಾಗಿ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು.

ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದ ಏಕೈಕ ರಾಜ್ಯವಾಗಿರುವ ತೆಲಂಗಾಣದ ಚುನಾವಣಾ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ರಾಜಸ್ಥಾನ ಚುನಾವಣೆ 2018 : ಕಾಂಗ್ರೆಸ್‌ ದೊಡ್ಡ ಪಕ್ಷವಾಗಲಿದೆ! ರಾಜಸ್ಥಾನ ಚುನಾವಣೆ 2018 : ಕಾಂಗ್ರೆಸ್‌ ದೊಡ್ಡ ಪಕ್ಷವಾಗಲಿದೆ!

2014ರಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಸಮಿತಿ 119 ವಿಧಾನಸಭಾ ಕ್ಷೇತ್ರಗಳ ಪೈಕಿ 63 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಹುಮತ ಪಡೆದಿತ್ತು.

ಟೈಮ್ಸ್ ನೌ-ಸಿಎನ್ ಎಕ್ಸ್ ಸಮೀಕ್ಷೆ

ಟೈಮ್ಸ್ ನೌ-ಸಿಎನ್ ಎಕ್ಸ್ ಸಮೀಕ್ಷೆ

ಟಿಆರ್ ಎಸ್ 66 ಸೀಟುಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಕಳೆದ ಚುನಾವಣೆಗಿಂತಲೂ ಮೂರು ಸೀಟುಗಳನ್ನು ಹೆಚ್ಚುವರಿಯಾಗಿ ಅದು ಪಡೆದುಕೊಳ್ಳಲಿದೆ.

ಕಾಂಗ್ರೆಸ್ 37, ಬಿಜೆಪಿ 7 ಮತ್ತು ಇತರೆ ಪಕ್ಷಗಳು 9 ಸ್ಥಾನಗಳನ್ನು ಪಡೆದುಕೊಳ್ಳಲಿವೆ ಎಂದು ಟೈಮ್ಸ್ ನೌ ಸಮೀಕ್ಷೆ ಹೇಳಿದೆ.

ಮಧ್ಯಪ್ರದೇಶ ಎಕ್ಸಿಟ್ ಪೋಲ್ : ಬಿಜೆಪಿ- ಕಾಂಗ್ರೆಸ್ ಸಮಬಲ ಫೈಟ್ ಮಧ್ಯಪ್ರದೇಶ ಎಕ್ಸಿಟ್ ಪೋಲ್ : ಬಿಜೆಪಿ- ಕಾಂಗ್ರೆಸ್ ಸಮಬಲ ಫೈಟ್

ಜನ್ ಕಿ ಬಾತ್ ಸಮೀಕ್ಷೆ

ಜನ್ ಕಿ ಬಾತ್ ಸಮೀಕ್ಷೆ

ಜನ್ ಕಿ ಬಾತ್ ಸಂಸ್ಥೆ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಟಿಆರ್ ಎಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ, ಇದರ ಸಮೀಕ್ಷೆಯಲ್ಲಿ ಅಂದಾಜು ಅಂತರ ಹಿರಿದಾಗಿದೆ.

ಟಿಆರ್ ಎಸ್ 50 ರಿಂದ 65 ಸೀಟುಗಳನ್ನು ಗೆಲ್ಲಬಹುದು. ಕಾಂಗ್ರೆಸ್ ಮೈತ್ರಿಕೂಟ 38 ರಿಂದ 42 ಮತ್ತು ಬಿಜೆಪಿ 4 ರಿಂದ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂದು ಸಮೀಕ್ಷೆ ತಿಳಿಸಿದೆ.

ಇಂಡಿಯಾ ಟುಡೆ-ಆಕ್ಸಿಸ್

ಇಂಡಿಯಾ ಟುಡೆ-ಆಕ್ಸಿಸ್

ಇಂಡಿಯಾ ಟುಡೆ-ಆಕ್ಸಿಸ್ ಸಹಭಾಗಿತ್ವದ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಟಿಆರ್ ಎಸ್ ಭಾರಿ ಬಹುಮತ ಪಡೆದುಕೊಳ್ಳಲಿದೆ.

ಟಿಆರ್ ಎಸ್ 79-91 ಕಾಂಗ್ರೆಸ್ ಮತ್ತು ಟಿಡಿಪಿ ಮೈತ್ರಿಕೂಟ 21-33 ಬಿಜೆಪಿ 1-3 ಮತ್ತು ಇತರೆ 4-7 ಸೀಟುಗಳನ್ನು ಪಡೆದುಕೊಳ್ಳಲಿವೆ.

ಟಿಆರ್ ಎಸ್ ಶೇ 46, ಕಾಂಗ್ರೆಸ್ ಶೇ 37 ಬಿಜೆಪಿ ಶೇ 7, ಎಐಎಂಐಎಂ ಶೇ 3 ಮತ್ತು ಇತರೆ ಪಕ್ಷಗಳು ಶೇ 7ರಷ್ಟು ಮತಗಳನ್ನು ಪಡೆದುಕೊಳ್ಳಲಿವೆ.

ಸಿಎನ್ ಎಕ್ಸ್-ಆಕ್ಸಿಸ್

ಸಿಎನ್ ಎಕ್ಸ್-ಆಕ್ಸಿಸ್

ಸಿಎನ್ ಎಕ್ಸ್-ಆಕ್ಸಿಸ್ ಸಂಸ್ಥೆಗಳು ನಡೆಸಿದ ಸಮೀಕ್ಷೆ ಪ್ರಕಾರ ಚಂದ್ರಶೇಖರ್ ರಾವ್ ಭರ್ಜರಿ ಬಹುಮತ ಪಡೆದುಕೊಳ್ಳಲಿದ್ದಾರೆ.

ಟಿಆರ್ ಎಸ್ 76, ಕಾಂಗ್ರೆಸ್ 32, ಬಿಜೆಪಿ 4 ಮತ್ತು ಇತರೆ ಪಕ್ಷಗಳು 7 ಕ್ಷೇತ್ರಗಳಲ್ಲಿ ಜಯಗಳಿಸಲಿವೆ ಎಂದು ಸಮೀಕ್ಷೆ ಹೇಳಿದೆ.

ಆಕ್ಸಿಸ್ ಸಮೀಕ್ಷೆ

ಆಕ್ಸಿಸ್ ಸಮೀಕ್ಷೆ

ಆಕ್ಸಿಸ್ ಸಮೀಕ್ಷೆ ಪ್ರಕಾರ ತೆಲಂಗಾಣ ರಾಷ್ಟ್ರೀಯ ಸಮಿತಿ 85 ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ಮೈತ್ರಿಕೂಟ 27 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ ಕೇವಲ 2 ಕಡೆ ಗೆಲ್ಲಿದೆ. ಇತರೆ ಪಕ್ಷಗಳು ಒಟ್ಟು 5 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿವೆ.

ಸಮೀಕ್ಷೆಗಳ ಸಮೀಕ್ಷೆ

ಸಮೀಕ್ಷೆಗಳ ಸಮೀಕ್ಷೆ

ಸಮೀಕ್ಷೆಗಳಿಂದ ಬಹಿರಂಗವಾದ ಅಂದಾಜು ಸೀಟುಗಳ ಆಧಾರದಲ್ಲಿ ನಡೆದ ಸಮೀಕ್ಷೆ ಅನ್ವಯ ಟಿಆರ್ ಎಸ್ 76, ಕಾಂಗ್ರೆಸ್ 32, ಬಿಜೆಪಿ 4 ಮತ್ತು ಇತರೆ ಪಕ್ಷಗಳು 7 ಸೀಟುಗಳಲ್ಲಿ ಜಯಗಳಿಸಲಿದೆ.

ಸಿ ವೋಟರ್- ರಿಪಬ್ಲಿಕ್ ಟಿವಿ

ಸಿ ವೋಟರ್- ರಿಪಬ್ಲಿಕ್ ಟಿವಿ

ಸಿ ವೋಟರ್- ಚುನಾವಣಾ ಸಮೀಕ್ಷೆ ಸಂಸ್ಥೆ ಮತ್ತು ರಿಪಬ್ಲಿಕ್ ಟಿವಿ ನಡೆಸಿರುವ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಟಿಆರ್ ಎಸ್ 48-60, ಕಾಂಗ್ರೆಸ್ 47-59 ಬಿಜೆಪಿ 5 ಇತರೆ 1-13 ಕ್ಷೇತ್ರಗಳಲ್ಲಿ ಗೆಲುವು ಕಾಣಲಿವೆ.

ನ್ಯೂಸ್ ನೇಷನ್ ಸಮೀಕ್ಷೆ

ನ್ಯೂಸ್ ನೇಷನ್ ಸಮೀಕ್ಷೆ

ನ್ಯೂಸ್ ನೇಷನ್ ನಡೆಸಿರುವ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಯಾವ ಪಕ್ಷವೂ ಸರಳ ಬಹುಮತ ಪಡೆದುಕೊಳ್ಳುವುದಿಲ್ಲ. ಇಲ್ಲಿ ಕಾಂಗ್ರೆಸ್-ಪಿಡಿಪಿ ಮೈತ್ರಿಕೂಟ ಆಡಳಿತಾರೂಢ ಟಿಆರ್ ಎಸ್ ಗೆ ಪೈಪೋಟಿ ನೀಡಲಿದೆ.

ಟಿಆರ್ ಎಸ್ 55, ಕಾಂಗ್ರೆಸ್ 53, ಬಿಜೆಪಿ 3 ಮತ್ತು ಎಐಎಐಎಂ ಸೇರಿದಂತೆ ಇತರೆ ಪಕ್ಷಗಳು 8 ಸ್ಥಾನಗಳನ್ನು ಪಡೆದುಕೊಳ್ಳಲಿವೆ.

ನ್ಯೂಸ್ ಎಕ್ಸ್-ನೇತಾ

ನ್ಯೂಸ್ ಎಕ್ಸ್-ನೇತಾ

ನ್ಯೂಸ್ ಎಕ್ಸ್ ಸುದ್ದಿ ವಾಹಿನಿ ಮತ್ತು ನೇತಾ ಸಂಸ್ಥೆಗಳು ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ತೆಲಂಗಾಣದಲ್ಲಿ ಟಿಆರ್ ಎಸ್ ಬಹುಮತಕ್ಕೆ ಇತರೆ ಪಕ್ಷಗಳ ಸಹಾಯ ಯಾಚಿಸುವುದು ಅನಿವಾರ್ಯವಾಗಲಿದೆ.

ಟಿಆರ್ ಎಸ್ 57, ಕಾಂಗ್ರೆಸ್ 46 ಬಿಜೆಪಿ 6 ಮತ್ತು ಇತರೆ ಪಕ್ಷಗಳು 10 ಸೀಟುಗಳಲ್ಲಿ ಗೆಲುವು ಸಾಧಿಸಲಿವೆ.

English summary
Voting for Telangana Assembly elections 2018 completed. Many media's telecasting exit poll survey in collaboration with poll agencies. Here is the details of exit poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X