• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೌದು, ನಾನು ಕಚೇರಿಯ ಪೀಠೋಪಕರಣಗಳನ್ನು ಮನೆಗೆ ತಂದಿದ್ದೇನೆ: ಮಾಜಿ ಸ್ಪೀಕರ್

|

ಹೈದರಾಬಾದ್, ಆಗಸ್ಟ್ 23: ''ಹೌದು, ನಾನು ಕಚೇರಿಯ ಪೀಠೋಪಕರಣಗಳನ್ನು ಮನೆಗೆ ತಂದಿದ್ದೇನೆ'' ಎಂದು ಆಂಧ್ರಪ್ರದೇಶದ ವಿಧಾನಸಭಾ ಮಾಜಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ರಾವ್ ಒಪ್ಪಿಕೊಂಡಿದ್ದಾರೆ.

ತೆಲುಗು ದೇಶಂ ಪಕ್ಷದ ಹಿರಿಯ ನಾಯಕರಾಗಿದ್ದ ಶಿವಪ್ರಸಾದ್ ಅವರು ಸ್ಪೀಕರ್ ಆಗಿದ್ದ ಸಂದರ್ಭದಲ್ಲಿ ಕಚೇರಿಯ ಪೀಠೋಪಕರಣಗಳನ್ನು ಮನೆಗೆ ಸ್ವಂತ ಬಳಕೆಗಾಗಿ ತೆಗೆದುಕೊಂಡು ಹೋಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.

ಆಂಧ್ರ ರಾಜಧಾನಿ ಅಮರಾವತಿ ಬದಲಿಗೆ ಬೇರೆಡೆ ಸ್ಥಳ ಹುಡುಕಲಿದ್ದಾರಾ ಜಗನ್?

ಈ ಕುರಿತು ಪ್ರಶ್ನಿಸಿದಾಗ ಹೌದು ನಾನು ಕಚೇರಿಯ ಪೀಠೋಪಕರಣಗಳನ್ನು ಸ್ವಂತ ಬಳಕೆಗಾಗಿ ತೆಗೆದುಕೊಂಡು ಹೋಗಿದ್ದೇನೆ ಎಂದು ಹೇಳಿದ್ದಾರೆ.

ಆದರೆ ಅವರ ಮಾತುಗಳಲ್ಲಿ ಎಲ್ಲಿಯೂ ಪಶ್ಚಾತಾಪವಾಗಲಿ ಏನೂ ಕಾಣಲಿಲ್ಲ, ಆಂಧ್ರಪ್ರದೇಶ ವಿಧಾನಸಭೆ ಕಾರ್ಯದರ್ಶಿ ಅವರು, ಶಿವಪ್ರಸಾದ್ ಅವರು ಎಲ್ಲಾ ಪೀಠೋಪಕರಣಗಳನ್ನು ವಾಪಸ್ ನೀಡಬೇಕು.

ಅಥವಾ ಅದಕ್ಕಾಗುವ ಬೆಲೆಯನ್ನು ತೆರಬೇಕು, ಎರಡರಲ್ಲೊಂದು ನಿರ್ಧಾರ ತೆಗೆದುಕೊಳ್ಳಲೇಬೇಕು ಎಂದು ಹೇಳಿದೆ.ಈ ಕುರಿತು ಜಗನ್‌ಮೋಹನ್ ರೆಡ್ಡಿ ಖಾರವಾಗಿಯೇ ನುಡಿದಿದ್ದಾರೆ, ಮೊದಲು ಪೀಠೋಪಕರಣಗಳು ಕಾಣೆಯಾಗಿರುವುದು ಗೋಚರಿಸಿತು, ಬಳಿಕ ಅದು ಹೈದರಾಬಾದ್‌ನಿಂದ ವಿಜಯವಾಡಕ್ಕೆ ಶಿಫ್ಟ್ ಆಗಿದೆ ಎನ್ನುವ ಮಾಹಿತಿ ದೊರೆಯಿತು.ಬಳಿಕ ಅದರಲ್ಲಿ ಕೊಡೆಲಾ ಅವರ ಕೈವಾಡವಿದೆ ಎನ್ನುವುದು ಅರಿವಿಗೆ ಬಂದಿತು.

2014ರಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಪ್ರತ್ಯೇಕಗೊಂಡಾಗ ಸರ್ಕಾರಿ ಪೀಠೋಕಕರಣಗಳನ್ನು ಕೂಡ ಎರಡು ಭಾಗಗಳನ್ನಾಗಿ ಮಾಡಲಾಯಿತು. ಆಂಧ್ರಪ್ರದೇಶ ಪಾಲಿಗೆ ಬಂದಿದ್ದ ಪೀಠೋಪಕರಣಗಳನ್ನು ವಿಜಯವಾಡಕ್ಕೆ ಶಿಫ್ಟ್ ಮಾಡಲಾಯಿತು.

ಆದರೆ ಸ್ಪೀಕರ್ ಕಚೇರಿಯಲ್ಲಿದ್ದ ಪೀಠೋಪಕರಣಗಳು ಮಾತ್ರ ನೇರವಾಗಿ ಕೊಡೆಲಾ ಅವರ ಮನೆಗೆ ಹೋಯಿತು. ಹೊಸ ಸ್ಪೀಕರ್ ಕಚೇರಿಗೆ ಹೊಸ ಪೀಠೋಪಕರಣಗಳನ್ನು ಒದಗಿಸಲಾಗಿತ್ತು. ತೆಲುಗು ದೇಶಂ ಪಕ್ಷದ ಪ್ರಭಾವಿ ಮುಖಂಡರಾಗಿರುವ ಕಾರಣ ಅವರ ವಿರುದ್ಧ ಧ್ವನಿ ಎತ್ತುವ ಧೈರ್ಯವನ್ನು ಯಾರೂ ಮಾಡಲಿಲ್ಲ.

ಕೊಡೆಲಾ ಮನೆಯಲ್ಲಿ ಪ್ಲಾಸ್ಟಿಕ್ ಖುರ್ಚಿ -27, ಬಿಜಿನೆಸ್ ಅಡ್ವೈಸರಿ ಕಮಿಟಿ ಹಾಲ್ ಖುರ್ಚಿ-8, ಡೈನಿಂಗ್ ಹಾಲ್ ಖುರ್ಚಿಗಳು-8, ಎಕ್ಸಿಕ್ಯೂಟಿವ್ ಖುರ್ಚಿ-2, ಸಿಂಗಲ್ ಸಿಟರ್ ಸೋಫಾ-2, ತ್ರಿ ಸಿಟ್ಟರ್ ಸೋಫಾ-1, ಡೈನಿಂಗ್ ಟೇಬಲ್-1, ವಿಸಿಟರ್ಸ್ ಚೇರ್-5 ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ex-Speaker Says Yes I Have Brought Office Furniture To Home,former Speaker of Andhra Pradesh Kodela Siva Prasad Rao have admitted that during his tenure as Speaker he brought official furniture to his home for personal use.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more