ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಬಿಜೆಪಿ ಸೇರಿದ ಕಾಂಗ್ರೆಸ್ಸಿನ ಮಾಜಿ ನಾಯಕಿ ಡಿಕೆ ಅರುಣಾ

|
Google Oneindia Kannada News

ನವದೆಹಲಿ, ಮಾರ್ಚ್ 20 : ತೆಲಂಗಾಣ ಕಾಂಗ್ರೆಸ್ಸಿನ ಮಾಜಿ ನಾಯಕಿ, ಮಾಜಿ ಸಚಿವೆ ಡಿಕೆ ಅರುಣಾ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಕೇಂದ್ರ ಸಚಿವ ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹಾಗೂ ಇನ್ನಿತರ ನಾಯಕರ ಸಮ್ಮುಖದಲ್ಲಿ ಡಿಕೆ ಅರುಣಾ ಅವರು ಕೇಸರಿ ಪಡೆ ಸೇರಿಕೊಂಡರು.

ಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡು ಜಗನ್ ರೆಡ್ಡಿಯನ್ನು ದಾವೂದ್ ಇಬ್ರಾಹಿಂಗೆ ಹೋಲಿಸಿದ ಚಂದ್ರಬಾಬು ನಾಯ್ಡು

ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಸಾಧ್ಯತೆಗಳಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಅನಿವಾರ್ಯವಾಗಿದೆ. ಹೀಗಾಗಿ,ನಾನು ಬಿಜೆಪಿ ಸೇರಿದ್ದೇನೆ ಎಂದು ಡಿಕೆ ಅರುಣಾ ಹೇಳಿದರು.

https://kannada.oneindia.com/news/india/lok-sabha-elections-2019-shatrughan-sinha-may-contest-in-patna-sahib-from-congress-162712.html

ತೆಲಂಗಾಣದ ಗದ್ವಾಲ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕಿಯಾಗಿರುವ ಅರುಣಾ ಅವರು ಮಾಹಿತಿ ಮತ್ತು ಸಾರ್ವಜನಿಕ ಸೇವೆ ಇಲಾಖೆಯ ಸಚಿವೆಯಾಗಿದ್ದರು.

ಸಿಬಿಐ v/s ಮಮತಾ ವಿವಾದ: ಮೌನವೇ ಆಭರಣ ಎಂದ ಟಿಆರ್ ಎಸ್ ಸಿಬಿಐ v/s ಮಮತಾ ವಿವಾದ: ಮೌನವೇ ಆಭರಣ ಎಂದ ಟಿಆರ್ ಎಸ್

ಮುಂಬರುವ ಚುನಾವಣೆಯಲ್ಲಿ ಅರುಣಾ ಅವರಿಗೆ ಮೆಹ್ಬೂಬ್ ನಗರ ಲೋಕಸಭಾ ಸ್ಥಾನಕ್ಕಾಗಿ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲ್ಪಟ್ಟಿದ್ದ ಅರುಣಾ ಲೋಕಸಭಾ ಚುನಾವಣೆಗೆ ಮೊದಲು ಈ ಬೆಳವಣಿಗೆ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ತೆಲಂಗಾಣ ಕಾಂಗ್ರೆಸ್ಸಿನಿಂದ ಡಿಕೆ ಅರುಣಾ ಸೇರಿದಂತೆ 8 ಮಂದಿ ಶಾಸಕರು ಪಕ್ಷ ತೊರೆದಿದ್ದಾರೆ. ಬಹುತೇಕರು ತೆಲಂಗಾಣ ರಾಷ್ಟ್ರ ಸಮಿತಿ ಸೇರಿದ್ದಾರೆ. 17 ಲೋಕಸಭಾ ಸ್ಥಾನಗಳಿಗಾಗಿ ತೆಲಂಗಾಣ ರಾಜ್ಯದಲ್ಲಿ ಚುನಾವಣೆ ಏಪ್ರಿಲ್ 18ರಂದು ಚುನಾವಣೆ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಹೊರಬರಲಿದೆ.

English summary
Former Telangan minister DK Aruna joined BJP in the presence of the ruling party's president, Amit Shah here on Tuesday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X