ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಸೇನ್ ಸಾಗರ್ ಬಳಿ ಡಿಸೆಂಬರ್ ವೇಳೆಗೆ 125 ಅಡಿ ಎತ್ತರದ ಡಾ. ಅಂಬೇಡ್ಕರ್ ಪ್ರತಿಮೆ

|
Google Oneindia Kannada News

ಹೈದರಾಬಾದ್‌, ಏಪ್ರಿಲ್‌ 14: ದೇಶ ಕಂಡ ಸಂವಿಧಾನ ಶಿಲ್ಪಿ, ಮಹಾನ್ ನಾಯಕ ಭೀಮರಾವ್ ಅಂಬೇಡ್ಕರ್ ಇಂದು ಅವರ ಜನ್ಮ ದಿನವನ್ನು ಇಡೀ ದೇಶವೇ ಆಚರಿಸುತ್ತಿದೆ. ಈ ವರ್ಷದ ಡಿಸೆಂಬರ್‌ ಅಂತ್ಯದಲ್ಲಿ ಹೈದರಾಬಾದ್ ನಗರದಲ್ಲಿ ಹುಸೇನ್‌ ಸಾಗರ್‌ ಕೆರೆಯ ಪಕ್ಕದಲ್ಲಿ 125 ಅಡಿ ಎತ್ತರದ ಬೃಹತ್ ಪ್ರತಿಮೆ ಸ್ಥಾಪನೆಯಾಗಲಿದೆ.

ಭಾರತೀಯ ಸಂವಿಧಾನದ ಪಿತಾಮಹನ ಅತೀ ಎತ್ತರದ ಪ್ರತಿಮೆಯಾಗಲಿದ್ದು ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಪ್ರತಿಮೆ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರತಿಮೆ ಸ್ಥಾಪನೆಯಾಗುತ್ತಿದೆ.

ಈ ವರ್ಷವು ಮುಗಿಯುವ ಹೊತ್ತಿಗೆ ಈ ಪ್ರತಿಮೆ ಸ್ಥಾಪನೆಯಾಗಲಿದ್ದು, ಹೈದರಾಬಾದ್‌ ನಗರದಲ್ಲಿ ಡಾ. ಅಂಬೇಡ್ಕರ್‌ ಅವರು 125 ಅಡಿ ಎತ್ತರದಿಂದ ಪ್ರತಿಮೆ ನಿರ್ಮಾಣವಾಗಲಿದೆ. ಪ್ರತಿಮೆ 45 ಅಡಿ ಅಗಲ, ಒಂಬತ್ತು ಟನ್‌ ಕಂಚಿನ ಹೊದಿಕೆಯ ಲೇಪನ ಹೊಂದಿರುವ ಹಾಗೂ 155 ಟನ್ ಸ್ಟೇನ್‌ಲೆಸ್ ಸ್ಟೀಲ್ ಬಳಸಿ ಪ್ರತಿಮೆ ತಯಾರಿಸಲಾಗುತ್ತದೆ.

Established in Hyderabad 125 feet tall statue of Dr. BR Ambedkarʼs

ತೆಲಂಗಾಣ ಸರ್ಕಾರವು 150 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಂಚಿನ ಪ್ರತಿಮೆ ಕಾಮಗಾರಿಯನ್ನು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವ ಕೆ.ಟಿ.ರಾಮರಾವ್ ಹಾಗೂ ಸಮಾಜ ಕಲ್ಯಾಣ ಸಚಿವ ಕೊಪ್ಪುಲಾ ಈಶ್ವರ್ ಅವರೊಂದಿಗೆ ಪರಿಶೀಲಿಸಿದರು. ಪ್ರತಿಮೆಯ ಸುತ್ತಲಿನ 11 ಎಕರೆ ಪ್ರದೇಶವನ್ನು ಪ್ರವಾಸಿ ಆಕರ್ಷಣೆಯ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು. ತೆಲಂಗಾಣ ಜನತೆಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಸ್ಫೂರ್ತಿಯ ಸ್ಥಳವಾಗಿದೆ ಎಂದು ರಾಮರಾವ್ ಹೇಳಿದರು.

ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಕೃತಿಗಳನ್ನು ವಸ್ತುಸಂಗ್ರಹಾಲಯ, ಫೋಟೋ ಗ್ಯಾಲರಿ ಮತ್ತು ವಸ್ತುಪ್ರದರ್ಶನ ಗ್ರಂಥಾಲಯದ ಮೂಲಕ ಪ್ರದರ್ಶಿಸಲಾಗುತ್ತದೆ. ಪ್ರತಿಮೆಯ ಬಳಿ ಧ್ಯಾನ ಕೇಂದ್ರ ಮತ್ತು ಸಭಾ ಭವನವೂ ಬರಲಿದೆ. ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಎಂದು ಸಚಿವರು ತಿಳಿಸಿದರು. ಸಮಾಜ ಕಲ್ಯಾಣ ಸಚಿವರು ನಿರಂತರವಾಗಿ ಪ್ರಗತಿ ಪರಿವೀಕ್ಷಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ಪ್ರಕಾರ, ಸ್ಥಳದಲ್ಲಿ ಶೌಚಾಲಯ, ಕ್ಯಾಂಟೀನ್ ಮತ್ತು ಪಾರ್ಕಿಂಗ್‌ನಂತಹ ಎಲ್ಲಾ ಸೌಕರ್ಯಗಳಿವೆ.

ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯ ಒಂದು ದಿನ ಮುಂಚಿತವಾಗಿ ಸಚಿವರು ಕಾಮಗಾರಿಯನ್ನು ಪರಿಶೀಲಿಸಿದ್ದಾರೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಎಲ್ಲ ವರ್ಗದ ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಡಾ.ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಕೆಟಿಆರ್ ಹೇಳಿದರು. ಅಂಬೇಡ್ಕರ್ ಅವರ ಅತಿ ಎತ್ತರದ ಪ್ರತಿಮೆ ನಿರ್ಮಿಸುವುದು ಮುಖ್ಯಮಂತ್ರಿಗಳ ಬಹುದಿನಗಳ ಕನಸಾಗಿತ್ತು. ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 2016ರ ಏಪ್ರಿಲ್ 14ರಂದು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು ಎಂದು ಹೇಳಿದರು.

English summary
125-foot-tall statue will be erected next to the city's Hussein Sagar Lake in Hyderabad by the end of December this year. It is the tallest statue of the Father of the Indian Constitution in the world. The statue of BR Ambedkar is being erected for the first time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X