ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳನ್ನು ಇಂಗ್ಲೀಷ್ ಮೀಡಿಯಂನಲ್ಲಿ ಓದಿಸಬೇಕಾ: ಸರ್ಕಾರಿ ಶಾಲೆಗೆ ಸೇರಿಸಿ!

|
Google Oneindia Kannada News

ಹೈದ್ರಾಬಾದ್, ನವೆಂಬರ್.20: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಹೆತ್ತವರ ಆಸೆಗೆ ಸರ್ಕಾರದ ಒಂದು ನಿರ್ಧಾರದಿಂದ ರೆಕ್ಕೆ ಪುಕ್ಕ ಬಂದಿದೆ. ಲಕ್ಷ ಲಕ್ಷ ಡೊನೋಷನ್ ಕೊಡಲು ತಮ್ಮ ಕೈಯಲ್ಲಿ ಆಗುತ್ತಿಲ್ಲ. ಮುಂದೇನು ಅಂತಾ ಯೋಚಿಸುತ್ತಿದ್ದವರಿಗೆ ಸರ್ಕಾರ ಉತ್ತಮ ಅವಕಾಶ ಕಲ್ಪಿಸಿ ಕೊಟ್ಟಿದೆ.

ಮೊದಲಿಂದಲೂ ಸರ್ಕಾರಿ ಶಾಲೆಗಳು ಅಂದರೆ ಜನರು ಮಾರುದ್ದಾ ಓಡುತ್ತಾರೆ. ಇಂಗ್ಲೀಷ್ ಮೀಡಿಯಂನಲ್ಲೇ ತಮ್ಮ ಮಕ್ಕಳನ್ನು ಓದಿಸಬೇಕು ಎಂದು ಹೆತ್ತವರು ಕನಸು ಕಂಡಿರುತ್ತಾರೆ. ಉಳ್ಳವರು ಹೇಗೋ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಾರೆ. ಇನ್ನು ಮುಂದೆ ಬಡವರು ಕೂಡಾ ತಮ್ಮ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲೇ ಶಿಕ್ಷಣ ಕೊಡಿಸಲು ಸರ್ಕಾರವೇ ಅವಕಾಶ ನೀಡಿದೆ.

ಸಿದ್ದರಾಮಯ್ಯನವರ ಊರಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಡಿಮ್ಯಾಂಡ್ಸಿದ್ದರಾಮಯ್ಯನವರ ಊರಲ್ಲೇ ಇಂಗ್ಲೀಷ್ ಮಾಧ್ಯಮಕ್ಕೆ ಡಿಮ್ಯಾಂಡ್

ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನೇ ಇಂಗ್ಲೀಷ್ ಮಾಧ್ಯಮದಲ್ಲಿ ನೀಡಲಾಗುತ್ತದೆ. 1ನೇ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲೀಷ್ ನಲ್ಲಿ ಶಿಕ್ಷಣ ಕೊಡಲು ಸರ್ಕಾರ ತೀರ್ಮಾನಿಸಿದೆ. ಆದರೆ, ಇದು ಕರ್ನಾಟಕ ಸರ್ಕಾರವಲ್ಲ ಸ್ವಾಮಿ, ನೆರೆಯ ಆಂಧ್ರಪ್ರದೇಶದ ಸರ್ಕಾರ.

ಜಗ ಮೆಚ್ಚಿದ ಜಗನ್ ಮೋಹನ್ ನಡೆ

ಜಗ ಮೆಚ್ಚಿದ ಜಗನ್ ಮೋಹನ್ ನಡೆ

ಪ್ರಾಥಮಿಕ ಮಟ್ಟದಲ್ಲಿಯೇ ಇಂಗ್ಲೀಷ್ ಮಾಧ್ಯಮವನ್ನು ಆರಂಭಿಸಲು ಆಂಧ್ರಪ್ರದೇಶ ಸರ್ಕಾರ ತೀರ್ಮಾನಿಸಿದೆ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಮಕ್ಕಳಿಗೆ ಮೊದಲು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ. ಇಂದು ಈ ಬಗ್ಗೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಘೋಷಣೆ ಮಾಡಿದೆ.

2020-2021 ಸಾಲಿನಿಂದ ಹೊಸ ನೀತಿ

2020-2021 ಸಾಲಿನಿಂದ ಹೊಸ ನೀತಿ

ಆಂಧ್ರ ಪ್ರದೇಶದಲ್ಲಿ 2020-2021ನೇ ಶೈಕ್ಷಣಿಕ ಸಾಲಿನಿಂದಲೇ ಸರ್ಕಾರದ ಹೊಸ ನೀತಿ ಜಾರಿಗೆ ಬರಲಿದೆ. ಆರಂಭದಲ್ಲಿ 1 ರಿಂದ 6 ತರಗತಿ ವರೆಗೂ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ. ನಂತರದಲ್ಲಿ ಅದನ್ನು ಮುಂದಿನ ತರಗತಿಗಳಿಗೆ ವಿಸ್ತರಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಪ್ರಥಮ ಭಾಷೆಯೇ ತೆಲುಗು ಅಥವಾ ಉರ್ದು

ಪ್ರಥಮ ಭಾಷೆಯೇ ತೆಲುಗು ಅಥವಾ ಉರ್ದು

ಪ್ರಾಥಮಿಕ ಶಿಕ್ಷಣದಲ್ಲೇ ಎಲ್ಲ ವಿಷಯಗಳನ್ನು ಇಂಗ್ಲೀಷ್ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತದೆ. ಆದರೆ, ತೆಲುಗು ಅಥವಾ ಉರ್ದು ಭಾಷೆ ಕಡ್ಡಾಯವಾಗಿರುತ್ತದೆ. ಉಳಿದಂತೆ ಎಲ್ಲ ವಿಷಯಗಳನ್ನು ಇಂಗ್ಲೀಷ್ ಮಾಧ್ಯಮಗಳಲ್ಲಿ ಹೇಳಲಾಗುತ್ತದೆ. ಈ ಸಂಬಂಧ ಎಲ್ಲ ಶಿಕ್ಷಕರಿಗೂ ತರಬೇತಿ ನೀಡುವಂತೆ ಸರ್ಕಾರವೇ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.

ಕರ್ನಾಟಕದಲ್ಲೂ ಈ ಬಗ್ಗೆ ಪ್ರಸ್ತಾಪ ಆಗಿತ್ತು

ಕರ್ನಾಟಕದಲ್ಲೂ ಈ ಬಗ್ಗೆ ಪ್ರಸ್ತಾಪ ಆಗಿತ್ತು

ಈ ಹಿಂದೆ ಕರ್ನಾಟಕದಲ್ಲೂ ಇಂಥದೊಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪ್ರಾಥಮಿಕ ಶಿಕ್ಷಣವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ನೀಡಲು ಚಿಂತನೆ ನಡೆಸಿತ್ತು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲು ಕೆಲವು ಬೆಂಬಲ ವ್ಯಕ್ತಪಡಿಸಿದ್ದರೆ, ಇನ್ನು ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದರು.

English summary
Andra Pradesh Government: English Medium in Government Schools From Next Academic Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X