• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜ್ಞಾನ ಸರಸ್ವತಿ ದೇವಿ ವಿಗ್ರಹದಲ್ಲಿನ ಕಿರೀಟದಿಂದ ಪಚ್ಚೆ ನಾಪತ್ತೆ

|

ಹೈದರಾಬಾದ್ (ತೆಲಂಗಾಣ), ಮೇ 6: ಅದಿಲಾಬಾದ್ ಜಿಲ್ಲೆಯಲ್ಲಿ ಇರುವ ಜ್ಞಾನ ಸರಸ್ವತಿ ದೇಗುಲದಲ್ಲಿ ಮುಖ್ಯ ದೇವತೆ ಕಿರೀಟದಲ್ಲಿನ ಪಚ್ಚೆ ನಾಪತ್ತೆಯಾಗಿದ್ದು, ಈ ಬಗ್ಗೆ ತೆಲಂಗಾಣ ರಾಜ್ಯ ಸರಕಾರವು ಸೋಮವಾರ ತನಿಖೆಗೆ ಆದೇಶ ನೀಡಿದೆ. ದೇವಾಲಯದ ಅರ್ಚಕರು ಗರ್ಭಗುಡಿಯನ್ನು ಪ್ರವೇಶಿಸಿದಾಗ ಈ ಸಂಗತಿ ಬೆಳಕಿಗೆ ಬಂದಿದೆ.

ದೇವತೆಗೆ ಹಾಕಿದ್ದ ಕಿರೀಟದಲ್ಲಿನ ಪಚ್ಚೆ ನಾಪತ್ತೆ ಆಗಿದೆ ಎಂಬುದು ಗಮನಕ್ಕೆ ಬಂದಿದೆ. ಆರಂಭದಲ್ಲಿ, ಪಚ್ಚೆ ಕಲ್ಲು ಕಿರೀಟದಿಂದ ಬಿದ್ದಿರಬೇಕು ಎಂದುಕೊಂಡಿದ್ದಾರೆ. ಆ ಮೇಲೆ ಎಷ್ಟೇ ಹುಡುಕಾಡಿದರೂ ಪತ್ತೆ ಆಗಿಲ್ಲ. ಕೆಲ ಭಕ್ತರು ಕಿರೀಟದಲ್ಲಿನ ಪಚ್ಚೆ ನಾಪತ್ತೆ ಆಗಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರ ಗಮನಕ್ಕೆ ತಂದಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ದೇವಾಲಯದ ಗರ್ಭಗುಡಿಯಲ್ಲಿ ಸುರಕ್ಷತೆ ಇಲ್ಲದ ಬಗ್ಗೆ ಆತಂಕ ಕೂಡ ವ್ಯಕ್ತಪಡಿಸಿದ್ದಾರೆ. ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಸಂಧ್ಯಾರಾಣಿ ಮಾತನಾಡಿ, ಈ ಕಿರೀಟವನ್ನು ಹದಿಮೂರು ವರ್ಷಗಳ ಹಿಂದೆ ಹೈದರಾಬಾದ್ ನ ದಾನಿಗಳು ನೀಡಿದ್ದರು. ಅದರಲ್ಲಿ ನವರತ್ನಗಳನ್ನು ಹಾಕಲಾಗಿತ್ತು. ಈಗ ನಾಪತ್ತೆ ಆಗಿರುವ ರತ್ನ ಅಂಥ ದುಬಾರಿಯಲ್ಲ. ಆದರೂ ಒಂದು ರತ್ನ ಕಳೆದಿರುವುದು ಎಚ್ಚರಿಕೆ. ದೇವಾಲಯದ ಸುರಕ್ಷತೆಗೆ ಹಾಗೂ ಭದ್ರತೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ ಎಂದಿದ್ದಾರೆ.

ಈ ಘಟನೆ ಬಗ್ಗೆ ತನಿಖೆ ನಡೆಸುವಂತೆ ಸಚಿವ ಇಂದ್ರಕರಣ್ ರೆಡ್ದಿ ಆದೇಶ ನೀಡಿದ್ದಾರೆ. ಈ ಬಗ್ಗೆ ಸಮಗ್ರ ವರದಿ ನೀಡಬೇಕು ಹಾಗೂ ಈ ಘಟನೆಗೆ ಜವಾಬ್ದಾರಿ ಯಾರೋ ಆ ವ್ಯಕ್ತಿ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಕಳೆದ ವರ್ಷ ಈ ದೇವಾಲಯ ವಿವಾದಕ್ಕೆ ಕಾರಣವಾಗಿತ್ತು. ನಲಗೊಂಡದ ಶಾಲೆಯೊಂದಕ್ಕೆ ಅಕ್ಷರಾಬ್ಯಾಸಕ್ಕಾಗಿ ದೇವಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದ ಆರೋಪ ಇತ್ತು. ವಿಗ್ರಹ ನಾಪತ್ತೆ ಅಗಿದ್ದಕ್ಕೆ ಅದನ್ನು ಹೊರಸಾಗಿಸಲು ಅರ್ಚಕರು ನೆರವಾಗಿದ್ದಾರೆ ಎಂಬ ಆರೋಪ ಬಂದಿತ್ತು. ಈ ಘಟನೆಗೆ ಕಾರಣರಾದ ಅರ್ಚಕರನ್ನು ಅಮಾನತು ಮಾಡಲಾಗಿತ್ತು.

ಶಿರಸಿಯಲ್ಲಿ ದೇವಾಲಯದ ಗೋಡೆ ಧ್ವಂಸಗೊಳಿಸಿ ಕಳಶ ಕದ್ದೊಯ್ದ ಕಿಡಿಗೇಡಿಗಳು

ಬಸಾರ್ ನಲ್ಲಿರುವ ಜ್ಞಾನ ಸರಸ್ವತಿ ದೇಗುಲ ಗೋದಾವರಿ ನದಿ ದಂಡೆಯಲ್ಲಿದ್ದು, ಇಲ್ಲಿ ಅಕ್ಷರಾಭ್ಯಾಸ ಮಾಡಿಸುವುದು ಬಹಳ ಶ್ರೇಷ್ಠ ಎಂಬ ನಂಬಿಕೆ ಇದೆ. ಈ ದೇವಾಲಯಕ್ಕೆ ವಾರ್ಷಿಕ ಮೂರರಿಂದ ಹತ್ತು ಕೋಟಿ ಆದಾಯ ಇದೆ. ಹತ್ತು ಲಕ್ಷಕ್ಕೂ ಅಧಿಕ ಭಕ್ತರು ಪ್ರತಿ ವರ್ಷ ಇಲ್ಲಿಗೆ ಭೇಟಿ ನೀಡುತ್ತಾರೆ. ಇದರಲ್ಲಿ ತೆಲಂಗಾಣ ಸೇರಿದಂತೆ ವಿವಿಧ ರಾಜ್ಯದ ಭಕ್ತರೂ ಬರುತ್ತಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Emerald stone missing from Jnana Saraswati devi idol crown in Adilabad district, Telangana. State government ordered probe on this incident on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more