ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್; ವೃದ್ಧ ದಂಪತಿಗಳ ಮಾದರಿ ಕಾರ್ಯ

|
Google Oneindia Kannada News

ಹೈದರಾಬಾದ್, ಜುಲೈ 11; ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ವೃದ್ಧ ದಂಪತಿಗಳು ಮಾದರಿ ಕಾರ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಸ್ತೆ ಗುಂಡಿಯನ್ನು ಸ್ವಂತ ಖರ್ಚಿನಲ್ಲಿ ಮುಚ್ಚುವ ಮೂಲಕ ನೂರಾರು ವಾಹನ ಸವಾರರ ಜೀವ ಉಳಿಸಿದ್ದಾರೆ.

Recommended Video

2 ಸಾವಿರ ರಸ್ತೆ ಗುಂಡಿ ಮುಚ್ಚಿದ ವೃದ್ಧ ದಂಪತಿಗೆ ಸೆಲ್ಯೂಟ್ | Oneindia Kannada

ಗಂಗಾಧರ್ ತಿಲಕ್ ಮತ್ತು ವೆಂಕಟೇಶ್ವರಿ ದಂಪತಿ ಕಳೆದ 11 ವರ್ಷಗಳಿಂದ ಹೈದರಾಬಾದ್‌ನಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡುತ್ತಾರೆ. ಕಾರಿನಲ್ಲಿ ಹೋಗುವ ದಂಪತಿ ರಸ್ತೆ ಹೊಂಡವನ್ನು ಸ್ವಚ್ಛಗೊಳಿಸಿ ಅದನ್ನು ಮುಚ್ಚುತ್ತಾರೆ.

 ಈ ಸಾವು ನ್ಯಾಯವೇ?; ಕನಸು ಕಂಗಳ ಹುಡುಗಿ ಬಲಿ ಪಡೆದ ರಸ್ತೆಗುಂಡಿ ಈ ಸಾವು ನ್ಯಾಯವೇ?; ಕನಸು ಕಂಗಳ ಹುಡುಗಿ ಬಲಿ ಪಡೆದ ರಸ್ತೆಗುಂಡಿ

ಭಾರತೀಯ ರೈಲ್ವೆ ಉದ್ಯೋಗಿಯಾಗಿದ್ದ ಗಂಗಾಧರ್ ನಿವೃತ್ತಿ ಬಳಿಕ ಹೈದರಾಬಾದ್‌ಗೆ ಮರಳಿದರು. "ನಗರದಲ್ಲಿ ರಸ್ತೆಗುಂಡಿಗಳಿಂದ ದಿನನಿತ್ಯ ಆಗುವ ಅಪಘಾತಗಳನ್ನು ನೋಡುತ್ತಿದ್ದೆ. ಸಂಬಂಧಪಟ್ಟವರ ಗಮನಕ್ಕೂ ಇದನ್ನು ತಂದೆ. ಯಾವುದೇ ಪ್ರಯೋಜನವಾಗಲಿಲ್ಲ" ಎಂದು ಗಂಗಾಧರ್ ಹೇಳುತ್ತಾರೆ.

ಒಂದು ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಯಿಂದ 3 ಲಕ್ಷ ವೆಚ್ಚ: ಬಿಜೆಪಿ ಆರೋಪಒಂದು ರಸ್ತೆಗುಂಡಿ ಮುಚ್ಚಲು ಬಿಬಿಎಂಪಿಯಿಂದ 3 ಲಕ್ಷ ವೆಚ್ಚ: ಬಿಜೆಪಿ ಆರೋಪ

Hyderabad

ಸಂಬಂಧಪಟ್ಟವರು ಕೈಕಟ್ಟಿ ಕುಳಿತಾಗ ದಂಪತಿ ತಾವೇ ರಸ್ತೆಗುಂಡಿಯನ್ನು ಮುಚ್ಚಲು ತೀರ್ಮಾನಿಸಿದರು. ನಿವೃತ್ತಿ ಬಳಿಕ ಬರುತ್ತಿರುವ ಪಿಂಚಣಿ ಹಣವನ್ನು ಬಳಸಿಕೊಂಡು ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ. ಈ ಮೂಲಕ ನಗರದ ವಾಹನ ಸವಾರರ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದಾರೆ.

"ನಾನು ಪಿಂಚಣಿ ಹಣವನ್ನು ಇದಕ್ಕಾಗಿ ಉಪಯೋಗಿಸುತ್ತಿದ್ದೇನೆ. ಇದುವರೆಗೂ ಸುಮಾರು ಎರಡು ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿದ್ದೇನೆ" ಎಂದು ಗಂಗಾಧಕರ್ ಹೇಳುತ್ತಾರೆ.

ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸಂಚಾರ ಆರಂಭ ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸಂಚಾರ ಆರಂಭ

ಸರ್ಕಾರಗಳು ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತವೆ. ಆದರೆ ರಸ್ತೆಯಲ್ಲಿ ಗುಂಡಿಯಲ್ಲಿ ಹಾಗೆಯೇ ಉಳಿದು ಅಪಘಾತಳಿಗೆ ಕಾರಣವಾಗುತ್ತದೆ. ವಾಹನ ಸವಾರರು ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಾರೆ.

ಇಂತಹ ಸಂದರ್ಭದಲ್ಲಿ ಯಾವುದೇ ಪ್ರತಿಫಲದ ನಿರೀಕ್ಷೆ ಇಲ್ಲದೇ ವೃದ್ಧ ದಂಪತಿಗಳು ಮಾಡುತ್ತಿರುವ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.

English summary
An elderly couple Gangadhar Tilak Katnam and Venkateshwari Katnam fillng potholes in Hyderabad. Couple filled over 2,000 potholes till now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X