ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್ ಮೃಗಾಲಯದ ಎಂಟು ಸಿಂಹಗಳಿಗೆ ಕೊರೊನಾ ಸೋಂಕು

|
Google Oneindia Kannada News

ಹೈದರಾಬಾದ್, ಮೇ 4: ಹೈದರಾಬಾದ್‌ನಲ್ಲಿನ ನೆಹರೂ ಮೃಗಾಲಯದಲ್ಲಿನ ಎಂಟು ಸಿಂಹಗಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಭಾರತದಲ್ಲಿ ಇದೇ ಮೊದಲ ಬಾರಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ತಗುಲಿರುವ ವರದಿಯಾಗಿದೆ.

ಏಪ್ರಿಲ್ 29ರಂದು ಸಿಸಿಎಂಬಿ ಸಂಸ್ಥೆ ಮೃಗಾಲಯದಲ್ಲಿನ ಈ ಎಂಟು ಸಿಂಹಗಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿದ್ದು, ಎಲ್ಲಾ ಸಿಂಹಗಳಿಗೂ ಕೊರೊನಾ ಸೋಂಕು ಇರುವುದಾಗಿ ದೃಢಪಡಿಸಿದೆ.

ವಿಶ್ವದಲ್ಲೇ ಮೊದಲು: 'ಮಹಾ ವಾನರ'ಗಳಿಗೂ ಕೋವಿಡ್ ಲಸಿಕೆವಿಶ್ವದಲ್ಲೇ ಮೊದಲು: 'ಮಹಾ ವಾನರ'ಗಳಿಗೂ ಕೋವಿಡ್ ಲಸಿಕೆ

ಈ ಕುರಿತು ಮೃಗಾಲಯದ ನಿರ್ದೇಶಕ ಡಾ. ಸಿದ್ಧಾನಂದ ಕುಕ್ರೇಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಸಿಂಹಗಳಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿದ್ದವು. ಸಿಸಿಎಂಬಿಯಿಂದ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ವರದಿ ಕೈ ಸೇರುವ ಮುನ್ನ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ. ಸದ್ಯಕ್ಕೆ ಸಿಂಹಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಅವರು ತಿಳಿಸಿದ್ದಾರೆ.

Eight Lions In Nehru Zoological Park Tests Coronavirus Positive

ಕಳೆದ ವರ್ಷ ನ್ಯೂಯಾರ್ಕ್‌ನಲ್ಲಿ ಎಂಟು ಹುಲಿಗಳು ಹಾಗೂ ಸಿಂಹಗಳಿಗೆ ಕೊರೊನಾ ಸೋಂಕು ತಗುಲಿದ ವರದಿಯಾಗಿತ್ತು. ಹಾಂಗ್‌ಕಾಂಗ್‌ನಲ್ಲಿ ನಾಯಿ ಹಾಗೂ ಬೆಕ್ಕುಗಳಲ್ಲಿಯೂ ಕೊರೊನಾ ವೈರಸ್ ಪತ್ತೆಯಾಗಿತ್ತು. ಇದೀಗ ಭಾರತದಲ್ಲಿ ಮೊದಲ ಬಾರಿ ಪ್ರಾಣಿಗಳಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಕೊರೊನಾ ವೈರಸ್ ಮನುಷ್ಯರಿಂದ ಪ್ರಾಣಿಗಳಿಗೆ ತಗುಲಿದೆಯೇ ಎಂಬ ಕುರಿತು ಜೆನೋಮ್ ಪರೀಕ್ಷೆಯನ್ನು ಸಿಸಿಎಂಬಿ ನಡೆಸುತ್ತಿದೆ.

Recommended Video

IPL 2021 ಮತ್ತೆ ಆರಂಭ ಆಗೋದು ಯಾವಾಗ ಗೊತ್ತಾ?? | Oneindia Kannada

ಎರಡು ದಿನಗಳ ಹಿಂದೆ ನೆಹರೂ ಜೈವಿಕ ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈಚೆಗಷ್ಟೆ ಉದ್ಯಾನದ 25 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು.

English summary
8 lions in Hyderabad Nehru zoological park tests positive for Covid. It is first case in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X