ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡ್ರಗ್ಸ್ ಕೇಸ್ : ನಿರ್ದೇಶಕ ಪೂರಿ ಜಗನ್ನಾಥ್ ವಿಚಾರಣೆಗೆ ಹಾಜರು

By ಅನುಷಾ ರವಿ
|
Google Oneindia Kannada News

ಹೈದರಾಬಾದ್, ಜುಲೈ 19: ಅಬಕಾರಿ ಇಲಾಖೆಯಿಂದ ಡ್ರಗ್ಸ್ ಕೇಸ್‌ ವಿಚಾರಣೆ ಆರಂಭಗೊಂಡಿದ್ದು, ಟಾಲಿವುಡ್ ನ 12ಕ್ಕೂ ಅಧಿಕ ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡದ ಎದುರು ಜನಪ್ರಿಯ ನಿರ್ದೇಶಕ ಪೂರಿ ಜಗನ್ನಾತ್ ಅವರು ಬುಧವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದರು.

ಪೂರಿ ಜೊತೆಗೆ ಅವರ ಸಹೋದರ ಆಕಾಶ್, ಸಹೋದರ ಹಾಗೂ ನಟ ಸಾಯಿರಾಮ್ ಶಂಕರ್ ಹಾಗೂ ಪೂರಿ ಪರ ವಕೀಲರು ಸಿಟ್ ಕಚೇರಿಗೆ ಆಗಮಿಸಿದ್ದರು.

ಟಾಲಿವುಡ್ ನ ಹಲವಾರು ಮಂದಿಯ ನೆರವಿನಿಂದ ಶಾಲೆ, ಕಾಲೇಜುಗಳಿಗೆ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದೆ ಎಂದು ಆರೋಪಿಯೊಬ್ಬ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು ಈಗ ತೆಲುಗು ಚಿತ್ರರಂಗವನ್ನು ನಡುಗಿಸಿದೆ.

ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ. ಈತನ ಬಳಿ ಹಲವಾರು ಸಿಮ್ ಕಾರ್ಡ್ ಗಳಿದ್ದು, 1,500ಕ್ಕೂ ಅಧಿಕ ನಂಬರ್ ಗಳಿವೆ. ಇವುಗಳಲ್ಲಿ ಹಲವಾರು ಸೆಲೆಬ್ರಿಟಿಗಳ ಸಂಪರ್ಕ ಸಂಖ್ಯೆಗಳಿವೆ.

ಸದ್ಯ ನೋಟಿಸ್ ನೀಡಿದ ಸೆಲೆಬ್ರಿಟಿಗಳ ಪೈಕಿ ಇಬ್ಬರು ಮಹಿಳೆಯರಿದ್ದು, ಜುಲೈ 19 ರಿಂದ 27ರ ತನಕ ವಿಚಾರಣೆ ಜಾರಿಯಲ್ಲಿರಲಿದೆ. ವಿಚಾರಣೆಗೆ ಹಾಜರಾದಾಗ ಮಾತ್ರ ಯಾರಿಗೆ ನೋಟಿಸ್ ನೀಡಲಾಗಿದೆ ಎಂಬ ಸತ್ಯ ತಿಳಿಯಲಿದೆ ಮತ್ತು ವಿಚಾರಣೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗುತ್ತಿದೆ.

English summary
Prominent Telugu filmmaker Puri Jagannath appeared before the officials of the Excise department in Hyderabad on Wednesday. The Tollywood film director was one of the twelve celebrities who were issued notices in connection with the recent drug racket busted by agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X