ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್‌ ಬಗ್ಗೆ ಚಿಂತಿಸಿ, ಕೊರಗಿನಲ್ಲೇ ಮೃತಪಟ್ಟ ಅಪ್ಪಟ ಅಭಿಮಾನಿ

|
Google Oneindia Kannada News

ಹೈದರಾಬಾದ್, ಅ .12: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಅವರನ್ನು ಆರಾಧ್ಯದೈವದಂತೆ ಕಾಣುತ್ತಿದ್ದ ಭಾರತದ ಅಭಿಮಾನಿ ಬುಸ್ಸಾ ಕೃಷ್ಣ ಅವರು ಭಾನುವಾರ ರಾತ್ರಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.

ಅಮೆರಿಕ ಚುನಾವಣೆ ನಡುವೆ ಕೊವಿಡ್ 19ಗೆ ಸಿಲುಕಿದ್ದ ತನ್ನ ನೆಚ್ಚಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಗ್ಗೆ ಚಿಂತಿಸಿ ಮಾನಸಿಕವಾಗಿ ನೊಂದಿದ್ದರು ಎಂದು ಆಪ್ತರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸಅಮೆರಿಕ ಅಧ್ಯಕ್ಷರ ಆಯ್ಕೆಗೆ ದಿನಗಣನೆ, 244 ವರ್ಷಗಳ ಮಹಾನ್ ಇತಿಹಾಸ

ತೆಲಂಗಾಣದ ಜಂಗಮ್‌ನ ಕೊನ್ನೆ ಗ್ರಾಮದಲ್ಲಿನ ಬುಸ್ಸಾ ಕೃಷ್ಣ ಎಂಬ ಯುವಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರು ಅಡಿ ಎತ್ತರದ ಪ್ರತಿಮೆ ನಿರ್ಮಿಸಿ, ಕಳೆದ ನಾಲ್ಕು ವರ್ಷಗಳಿಂದ ಪೂಜಿಸುತ್ತಾ ಬಂದಿದ್ದರು. ಪ್ರತಿನಿತ್ಯ ಪೂಜೆ, ಅಭಿಶೇಕ ಮಾಡಲಾಗುತ್ತಿತ್ತು ಟ್ರಂಪ್ ಹುಟ್ಟುಹಬ್ಬದ ದಿನ ವಿಶೇಷ ಪೂಜೆ, ಸಿಹಿ ತಿನಿಸು ಮಾಡಿ ಎಲ್ಲರಿಗೂ ಹಂಚುತ್ತಿದ್ದರು.

ಡೊನಾಲ್ಡ್ ಟ್ರಂಪ್ ಅವರ ನೇರ ಹಾಗೂ ನಿಷ್ಠುರವಂತಿಕೆಯ ನಡೆಯಿಂದ ಪ್ರಭಾವಿತನಾಗಿರುವುದಾಗಿ ಕೃಷ್ಣ ಹೇಳಿದ್ದರು. ಜೀವಮಾನದಲ್ಲಿ ಒಮ್ಮೆಯಾದರೂ ಟ್ರಂಪ್ ಭೇಟಿಯಾಗಬೇಕು ಎಂದು ಬಯಸಿದ್ದರು. ಆದರೆ, ಕೊನೆಗೂ ಆಸೆ ನೆರವೇರಲಿಲ್ಲ.

ಮೂಲತಃ ಕೃಷಿಕನಾದ ಕೃಷ್ಣ ಅಪ್ಪಟ ಟ್ರಂಪ್ ಭಕ್ತ

ಮೂಲತಃ ಕೃಷಿಕನಾದ ಕೃಷ್ಣ ಅಪ್ಪಟ ಟ್ರಂಪ್ ಭಕ್ತ

ಮೂಲತಃ ಕೃಷಿಕನಾದ ಕೃಷ್ಣ, ಡೊನಾಲ್ಡ್ ಟ್ರಂಪ್ ಅವರ ಅತಿ ದೊಡ್ಡ ಭಾರತೀಯ ಅಭಿಮಾನಿಯಂತೆ. ಡೊನಾಲ್ಡ್ ಟ್ರಂಪ್ ಅವರ ಫೋಟೊಕ್ಕೆ ಪೂಜೆ ಸಲ್ಲಿಸುವ ಕೃಷ್ಣನ ಫೋಟೊಗಳು ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರಿಂದ ಆತ ಪ್ರಸಿದ್ಧಿ ಪಡೆದಿದ್ದ.

ಟ್ರಂಪ್ ಭಕ್ತ ಎಂದೇ ಗುರುತಿಸಿಕೊಂಡಿರುವ ಕೃಷ್ಣನ ಮನೆಯ ದೇವರ ಕೋಣೆಯಲ್ಲಿ ಟ್ರಂಪ್ ಅವರ ಅನೇಕ ಭಾವಚಿತ್ರಗಳಿವೆ. ಅದರ ಜತೆಗೆ ಅನೇಕ ಹಿಂದೂ ದೇವ-ದೇವತೆಗಳ ವಿಗ್ರಹ ಹಾಗೂ ಚಿತ್ರಗಳು ಕೂಡ ಇವೆ. ಅಭಿಷೇಕದ ಜತೆಗೆ ಟ್ರಂಪ್ ಅವರ ಚಿತ್ರಕ್ಕೆ ಪ್ರಸಾದ ಇರಿಸಿ, ಕುಂಕುಮ, ಹೂವುಗಳಿಂದ ಅಲಂಕರಿಸಿ ಫೋಟೊಕ್ಕೆ ಆರತಿಯನ್ನೂ ಬೆಳಗುತ್ತಾನೆ.

ಟ್ರಂಪ್ ಪೂಜಿಸುವುದೇಕೆ?

ಟ್ರಂಪ್ ಪೂಜಿಸುವುದೇಕೆ?

2017ರಲ್ಲಿ ಅಮೆರಿಕದ ಕನ್ಸಾಸ್ ಬಾರ್‌ನಲ್ಲಿ ಅಲ್ಲಿನ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬ ದ್ವೇಷದ ಕಾರಣದಿಂದ ತೆಲಂಗಾಣ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಶ್ರೀನಿವಾಸ್ ಕುಚ್ಚಿಬೊಟ್ಲ ಅವರನ್ನು ಹತ್ಯೆ ಮಾಡಿದ ಘಟನೆ ನಂತರ ಟ್ರಂಪ್ ಅವರನ್ನು ಆರಾಧಿಸಲು ಆರಂಭಿಸಿದ್ದಾಗಿ ಆತ ತಿಳಿಸಿದ್ದಾನೆ.

ಆ ಘಟನೆ ನನಗೆ ತೀವ್ರ ನೋವುಂಟು ಮಾಡಿತು. ನಾವು ಅವರೆಡೆಗೆ ಪ್ರೀತಿ ಮತ್ತು ಅನುಭೂತಿ ತೋರಿಸಿದಾಗ ಮಾತ್ರ ಅಮೆರಿಕದ ಅಧ್ಯಕ್ಷ ಮತ್ತು ಅವರ ಜನರು ಭಾರತೀಯರ ಶ್ರೇಷ್ಠತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎನಿಸಿತು. ಈ ಕಾರಣದಿಂದ ಟ್ರಂಪ್ ಅವರಿಗೆ ಒಂದು ದಿನ ಈ ಪ್ರಾರ್ಥನೆ ತಲುಪುತ್ತದೆ ಎಂಬ ಭರವಸೆಯೊಂದಿಗೆ ನಾನು ಅವರನ್ನು ಪೂಜಿಸಲು ಆರಂಭಿಸಿದೆ' ಎಂದು ವಿವರಿಸಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಬುಸ್ಸಾ ಕೃಷ್ಣನ ಈ ನಡೆಯನ್ನು ನೋಡಿದ ಹಲವರು ಈತ ಹುಚ್ಚ ಎಂದು ಹೀಯಾಳಿಸಿದರು ಎನ್ನಲಾಗಿದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೃಷ್ಣ ತನ್ನ ಅಭಿಮಾನವನ್ನು ಮುಂದುವರಿಸಿದ್ದಾರೆ. ಸದ್ಯ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೇವಸ್ಥಾನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Recommended Video

Narendra Modi ಇಂದು ಹೊಸ 100 ರುಪಾಯಿಯ ನಾಣ್ಯವನ್ನು ಪರಿಚಯಿಸಿದರು| Oneindia Kannada
ನನಗೆ ಶಿವ ಬೇರೆಯಲ್ಲ ಟ್ರಂಪ್ ಬೇರೆಯಲ್ಲ,

ನನಗೆ ಶಿವ ಬೇರೆಯಲ್ಲ ಟ್ರಂಪ್ ಬೇರೆಯಲ್ಲ,

"ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಸದೃಢಗೊಳ್ಳಬೇಕು, ಪ್ರತಿ ಶುಕ್ರವಾರದಂದು ನಾನು ಟ್ರಂಪ್ ಏಳಿಗೆಗಾಗಿ ಉಪವಾಸ ವ್ರತ ಕೈಗೊಂಡಿದ್ದೇನೆ. ಪ್ರತಿ ಒಳ್ಳೆ ಕೆಲಸಕ್ಕೂ ಮುನ್ನ ಟ್ರಂಪ್ ಅವರ ಫೋಟೋಗೆ ನಮಿಸಿ, ಎಲ್ಲವೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ. ನಾನು ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕಿದೆ. ನನ್ನ ಕನಸನ್ನು ಸರ್ಕಾರ ನೆರವೇರಿಸಲಿ ಎಂದು ಮನವಿ ಮಾಡಿಕೊಳ್ಳುತ್ತೇನೆ" ಎಂದು ಎಎನ್ಐ ಜೊತೆ ಮಾತನಾಡಿದ ಕೃಷ್ಣ ಹೇಳಿಕೊಂಡಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2020ರ ಫೆಬ್ರವರಿ 24 ಮತ್ತು 25ರಂದು ಭಾರತ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಅವರನ್ನು ಭೇಟಿ ಮಾಡುವ ಆಸೆ ಇರಿಸಿಕೊಂಡಿದ್ದರು.

English summary
A passionate fan of Donald Trump, Bussa Krishna, who had been depressed ever since he learnt that the US President had contracted the coronavirus infection, died after suffering from a cardiac arrest on October 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X