• search
 • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿತನ ಶವವನ್ನು ಕಚ್ಚಿತಿಂದ ಬೀದಿನಾಯಿಗಳು

|

ಹೈದರಾಬಾದ್, ಆಗಸ್ಟ್ 13: ಕೊರೊನಾ ಸೋಂಕಿತನ ಮೃತದೇಹವನ್ನು ನಾಯಿಗಳು ಕಚ್ಚಿ ತಿಂದಿರುವ ಘಟನೆ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಬಳಿ ಇರುವ ನಿರಾಶ್ರಿತರ ಕೇಂದ್ರದಲ್ಲಿ ನಡೆದಿದೆ.

   DJ ಹಳ್ಳಿಯಲ್ಲಿ ಇದೀಗ ಶುರುವಾಯ್ತು ಹೊಸ ಆತಂಕ | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಮೃತನನ್ನು ಪ್ರಕಾಶಂ ಜಿಲ್ಲೆಯ ಜರುಗುಮಲ್ಲಿ ಮಂಡಲದ ಬಿಟ್ರಗುಂಟ ಗ್ರಾಮದ ನಿವಾಸಿ ಕಾಂತ ರಾವ್ ಎಂದು ಗುರುತಿಸಲಾಗಿದೆ.ಮೃತ ವ್ಯಕ್ತಿಯ ಮುಖಕ್ಕೆ ನಾಯಿ ಕಚ್ಚಿ ಗಾಯ ಮಾಡಿದೆ ಹಾಗೂ ಶವದ ಕಿವಿ ಭಾಗ ಕಾಣೆಯಾಗಿದೆ. ಬೀದಿ ನಾಯಿಗಳು ಮೃತದೇಹದ ಕಿವಿಯನ್ನು ತಿನ್ನುತ್ತಿರುವುದನ್ನು ಆಸ್ಪತ್ರೆಯ ಭದ್ರತಾ ಸಿಬ್ಬಂದಿ ನೋಡಿದ್ದರು.

   ಭಾರತದಲ್ಲಿ ಒಂದೇ ದಿನ 66,999 ಮಂದಿಗೆ ಕೊರೊನಾವೈರಸ್ ಪಾಸಿಟಿವ್

   ಈತ ಕರೊನಾ ಸೋಂಕಿತನಾಗಿರುವ ಶಂಕೆಯನ್ನು ಅಲ್ಲಿಯ ಜನರು ವ್ಯಕ್ತಪಡಿಸಿದ್ದಾರೆ. ನಿರಾಶ್ರಿತರು ಹಾಗೂ ಬಡವರಿಗಾಗಿ ಇಲ್ಲಿ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಅಲ್ಲಿ ಈ ವ್ಯಕ್ತಿ ವಾಸವಾಗಿದ್ದ. ಕರೊನಾ ಸೋಂಕಿನಿಂದ ಈತ ಮೃತಪಟ್ಟಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ಅದರೆ ಈ ಬಗ್ಗೆ ಇನ್ನಷ್ಟೇ ವರದಿ ಹೊರಬೀಳಬೇಕಿದೆ.

   ಈ ಘಟನೆಗೆ ರಿಮ್ಸ್ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕಾಂತ ರಾವ್ ಅವರ ಸಂಬಂಧಿಕರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ವ್ಯಕ್ತಿ ಇದಕ್ಕೂ ಮುಂಚೆ ಆಸ್ಪತ್ರೆಗೆ ದಾಖಲಾಗಿರಲಿಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.

   ಆತನಿಗೆ ಆಗಸ್ಟ್ 5 ರಂದು ಕೊರೊನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಆತನನ್ನು ಗೃಹಬಂಧನದಲ್ಲಿರಿಸಲು ಮನವಿ ಮಾಡಲಾಗಿತ್ತು. ಆದರೆ ಆತನ ಮಾತಿಗೆ ಯಾರೂ ಲಕ್ಷ್ಯ ಕೊಟ್ಟಿರಲಿಲ್ಲ ಎಂದು ದೂರಲಾಗಿದೆ.

   ಆಸ್ಪತ್ರೆಯ ಒಳರೋಗಿ ಅಥವಾ ಹೊರರೋಗಿ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

   English summary
   Pola Bhaskar on Wednesday ordered an inquiry into the death of a Covid-19 patient on the premises of RIMS, Ongole. According to information reaching here, the body of a man was found with dog bite injuries on the RIMS premises on Monday evening.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X