ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಸೋಂಕಿತನ ಶವ ಸಾಗಣೆ; ಡಾಕ್ಟರ್ ಕಾರ್ಯಕ್ಕೆ ಸೆಲ್ಯೂಟ್!

|
Google Oneindia Kannada News

ಹೈದರಾಬಾದ್, ಜುಲೈ 13 : ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಕೋವಿಡ್ - 19 ಸೋಂಕಿತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ಇವೆ. ಆದರೆ, ಇಲ್ಲೊಬ್ಬರು ವೈದ್ಯರ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ವೈದ್ಯರೇ ತೆಗೆದುಕೊಂಡು ಹೋಗಿದ್ದಾರೆ.

ಡಾ. ಪೆಂಡಲಾಯ ಶ್ರೀನಿವಾಸ ಶ್ರೀರಾಮ್ ಟ್ರಾಕ್ಟರ್‌ನಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಸ್ಮಶಾನಕ್ಕೆ ಸಾಗಣೆ ಮಾಡಿದ್ದಾರೆ. ಮಹಾನಗರ ಪಾಲಿಕೆಯ ಟ್ರಾಕ್ಟರ್ ಡ್ರೈವರ್ ಶವ ಸಾಗಣೆ ಮಾಡಲು ಒಪ್ಪದ ಹಿನ್ನಲೆಯಲ್ಲಿ ವೈದ್ಯರೇ ಟ್ರಾಕ್ಟರ್ ಚಲಾಯಿಸಿದ್ದಾರೆ.

ಪಿಎಂ ಕೇರ್ಸ್ ಬಗ್ಗೆ ಟ್ವೀಟ್ ಮಾಡಿ ಕೆಲ್ಸ ಕಳೆದುಕೊಂಡ ಡಾಕ್ಟರ್ಪಿಎಂ ಕೇರ್ಸ್ ಬಗ್ಗೆ ಟ್ವೀಟ್ ಮಾಡಿ ಕೆಲ್ಸ ಕಳೆದುಕೊಂಡ ಡಾಕ್ಟರ್

ಪೆದ್ದಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಶ್ರೀನಿವಾಸ ಶ್ರೀರಾಮ್ ಅವರು ಜಿಲ್ಲಾ ಕೋವಿಡ್ ನಿಯಂತ್ರಣ ಅಧಿಕಾರಿಯಾಗಿದ್ದಾರೆ. ಭಾನುವಾರ ಕರ್ತವ್ಯದಲ್ಲಿದ್ದ ಅವರು ಕೋವಿಡ್‌ನಿಂದ ಮೃತಪಟ್ಟ 45 ವರ್ಷದ ವ್ಯಕ್ತಿಯ ಶವವನ್ನು ಟ್ರಾಕ್ಟರ್‌ನಲ್ಲಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ ಜನರ ಮೆಚ್ಚುಗೆ ಪಡೆದಿದ್ದಾರೆ.

ಬಡ ಹುಡುಗಿಗಾಗಿ ಕಾರ್‌ ಡ್ರೈವರ್‌ ಕೆಲಸ ಮಾಡಿದ ಕೊಲ್ಕತ್ತಾ ಡಾಕ್ಟರ್ ಬಡ ಹುಡುಗಿಗಾಗಿ ಕಾರ್‌ ಡ್ರೈವರ್‌ ಕೆಲಸ ಮಾಡಿದ ಕೊಲ್ಕತ್ತಾ ಡಾಕ್ಟರ್

Doctor Take Tractor To Shift COVID Patient Body To Burial Ground

ಕುಟುಂಬದವರು ದುಖಃದಲ್ಲಿದ್ದಾಗ ಪೆದ್ದಪಲ್ಲಿ ಸ್ಥಳೀಯ ಸಂಸ್ಥೆಗೆ ಶವವನ್ನು ತೆಗೆದುಕೊಂಡು ಹೋಗಲು ತಿಳಿಸಲಾಯಿತು. ಅವರು ಟ್ರಾಕ್ಟರ್ ವ್ಯವಸ್ಥೆ ಮಾಡಿದರು. ಆದರೆ, ಚಾಲಕ ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗಲು ನಿರಾಕರಿಸಿದ. ಬೇರೆ ಯಾರಿಗೂ ಟ್ರಾಕ್ಟರ್ ಓಡಿಸಲು ಬರುತ್ತಿರಲಿಲ್ಲ.

 ಮೆದುಳಿನ ರಕ್ತಸ್ರಾವದಿಂದ ಹಾಸನದ ವೈದ್ಯ ಸಾವು; ಪರಿಹಾರಕ್ಕೆ ಒತ್ತಾಯ ಮೆದುಳಿನ ರಕ್ತಸ್ರಾವದಿಂದ ಹಾಸನದ ವೈದ್ಯ ಸಾವು; ಪರಿಹಾರಕ್ಕೆ ಒತ್ತಾಯ

ಆಗ ವೈದ್ಯರು ಟ್ರಾಕ್ಟರ್ ಹತ್ತಿ ಶವವನ್ನು ತೆಗೆದುಕೊಂಡು ಹೊರಟರು. ಕುಟುಂಬ ಸದಸ್ಯರು ಅವರ ಜೊತೆ ಸ್ಮಶಾನಕ್ಕೆ ತೆರಳಿದರು. ಡಾಕ್ಟರ್ ಸಹಾಯದಿಂದಾಗಿ ಕುಟುಂಬದವರು ಸಂಪ್ರದಾಯದಂತೆ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಸಹಾಯವಾಯಿತು.

ಮಾಧ್ಯಮಗಳ ಜೊತೆ ಮಾತನಾಡಿದ ವೈದ್ಯ ಶ್ರೀನಿವಾಸ್ ಶ್ರೀರಾಮ್, "ಕೊರೊನಾ ವೈರಸ್ ಸೋಂಕು ಹರಡುವ ಬಗ್ಗೆ ಹಲವು ತಪ್ಪು ಕಲ್ಪನೆಗಳು ಇವೆ. ಟ್ರಾಕ್ಟರ್ ಡ್ರೈವರ್ ಇದೇ ಆತಂಕದಲ್ಲಿ ಶವ ತೆಗದುಕೊಂಡು ಹೋಗಲು ನಿರಾಕರಿಸಿದ. ಅವರ ಆತಂಕ ಕಡಿಮೆ ಮಾಡಲು ಟ್ರಾಕ್ಟರ್ ಚಲಾಯಿಸಿದೆ" ಎಂದು ಹೇಳಿದ್ದಾರೆ.

English summary
Dr Pendyala Srinivasa Sriram take the COVID - 19 patient body to burial ground after tractor driver refused to take the patient body. Srinivasa Sriram doctor of Peddapalli government hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X