ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

''ಲಯನ್ ರೇವಂತ್ ರೆಡ್ಡಿ ಅಧ್ಯಕ್ಷ, ಹುಲಿಗಳೆಲ್ಲ ಸೈಲಂಟಿರಿ''

|
Google Oneindia Kannada News

ಹೈದರಾಬಾದ್, ಜೂಣ್ 27: ತೆಲಂಗಾಣ ರಾಜ್ಯದಲ್ಲಿ ತನ್ನ ಪ್ರಭುತ್ವ ಸಾಧಿಸಲು ಕಾಂಗ್ರೆಸ್ ಸಮಿತಿ ಬದಲಾಯಿಸಲಾಗಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಅಧ್ಯಕ್ಷರಾಗಿ ರೇವಂತ್ ರೆಡ್ಡಿರನ್ನು ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ. ಮಲಕ್ ಗಾಜ್ ಗಿರಿ ಸಂಸದ ಎ ರೇವಂತ್ ರೆಡ್ಡಿರನ್ನು ಟಿಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದಕ್ಕೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸಕತ್ ಥ್ರಿಲ್ ಆಗಿ ಟ್ವೀಟ್ ಮಾಡಿದ್ದಾರೆ.

''ಕೊನೆಗೂ ಕಾಂಗ್ರೆಸ್ ಪಕ್ಷ ಸೂಪರ್ ಆದೇಶ ತೆಗೆದುಕೊಂಡಿದೆ. ಲಯನ್ ರೇವಂತ್ ರೆಡ್ಡಿ ಅಧ್ಯಕ್ಷರಾಗಿದ್ದಾರೆ.. ಎಲ್ಲಾ ಹುಲಿಗಳು ಈಗ ಲಯನ್ ನೋಡಿ ಭಯಪಡುವ ಕಾಲ ಬಂದಿದೆ,'' ಎಂದು ಟ್ವೀಟ್ ಮಾಡಿದ್ದು, ರೇವಂತ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

Director RGV reaction to Revanth Reddy as TPCC president

ಇನ್ನೊಂದು ಟ್ವೀಟ್ ಮಾಡಿ ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿ ಧನ್ಯವಾದ ಅರ್ಪಿಸಿದ್ದಾರೆ. '' ರಾಹುಲ್ ಗಾಂಧಿ ನೀವು ಹಾಗೂ ನಿಮ್ಮ ತಾಯಿ ಉತ್ತಮ ನಿರ್ಧಾರ ಕೈಗೊಂಡಿದ್ದೀರಿ, ನನಗೆ ಕಾಂಗ್ರೆಸ್ ಪಕ್ಷದ ಮೇಲೆ ಮತ್ತೊಮ್ಮೆ ಆಸಕ್ತಿ ಮೂಡುತ್ತಿದೆ ಎಂದಿದ್ದಾರೆ.

Director RGV reaction to Revanth Reddy as TPCC president

ರೇವಂತ್ ರೆಡ್ಡಿ ಅಧ್ಯಕ್ಷರಾಗಿ ನೇಮಕವಾಗಿದ್ದರೆ, ಮಾಜಿ ಸಚಿವ ಜೆ ಗೀತಾ ರೆಡ್ಡಿ, ಮಾಜಿ ಸಂಸದ ಅಂಜನ್ ಕುಮಾರ್ ಯಾದವ್, ಶಾಸಕ ಟಿ ಜಗ್ಗಾರೆಡ್ಡಿ, ಮಾಜಿ ಕ್ರಿಕೆಟರ್ ಕಮ್ ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಹಾಗೂ ಮಹೇಶ್ ಕುಮಾರ್ ಗೌಡ್ ರನ್ನು ಹೊಸದಾಗಿ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

Recommended Video

ರೋಹಿಣಿ ಹೇಳೋ ತೋಳ ಬಂತು ತೋಳ ಕಥೆ ಕೇಳೋಕೆ ನಾನು ಸಿದ್ಧವಾಗಿಲ್ಲ !! | Oneindia Kannada

ನಾಗಾರ್ಜುನಸಾಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿದ್ದರಿಂದ ನೈತಿಕ ಹೊಣೆ ಹೊತ್ತುಕೊಂಡು ಎನ್ ಉತ್ತಮ್ ಕುಮಾರ್ ರೆಡ್ಡಿ ಟಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

English summary
The AICC on Saturday appointed Malkajgiri MP A. Revanth Reddy as the new president of Telangana Pradesh Congress Committee. Here is Director Ram Gopal varma reaction on Revanth Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X