ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್: ಎನ್ಕೌಂಟರ್ ನಕಲಿ ಎಂದಾದಲ್ಲಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ಕಟ್ಟಿಟ್ಟಬುತ್ತಿ

|
Google Oneindia Kannada News

Recommended Video

ಎನ್ಕೌಂಟರ್ ವಿರುದ್ದ ತೆಲಂಗಾಣ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆ | Oneindia Kannada

ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸರ ಕ್ರಮ ವ್ಯಾಪಕ ಪ್ರಶಂಸೆಗೊಳಗಾಗಿದೆ. ಜೊತೆಗೆ, ಅಲ್ಲಲ್ಲಿ ಅಪಸ್ವರವೂ ಕೇಳಿಬರುತ್ತಿದೆ.

ಕರ್ನಾಟಕ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಪೊಲೀಸರ ಗನ್ ಕಸಿದು ಶೂಟ್ ಮಾಡಲು ಆರೋಪಿಗಳು ಮುಂದಾದಾಗ, ಪೊಲೀಸರು, ಎಲ್ಲಾ ನಾಲ್ವರನ್ನು ಅಲ್ಲೇ ಹೊಡೆದುರುಳಿಸಿದ್ದಾರೆ.

ಸೈಬರಾಬಾದ್ ಪೊಲೀಸರ ಕ್ರಮ, ಜನಾಕ್ರೋಶಕ್ಕೆ ಮಣಿದು ಪೊಲೀಸರು ಈ ಎನ್ಕೌಂಟರ್ ನಡೆಸಿದ್ದಾರೆ ಎನ್ನುವ ಆರೋಪವೂ ಕೇಳಿಬರುತ್ತಿದೆ. ಎನ್ಕೌಂಟರ್ ವಿರುದ್ದ ರಿಟ್ ಅರ್ಜಿ ಸಲ್ಲಿಕೆಯಾಗಿದೆ.

ಹೈದರಾಬಾದ್ ನಲ್ಲಿ ರೇಪಿಸ್ಟ್ ಗಳ ಎನ್ಕೌಂಟರ್: ಕಾಡುವ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ? ಹೈದರಾಬಾದ್ ನಲ್ಲಿ ರೇಪಿಸ್ಟ್ ಗಳ ಎನ್ಕೌಂಟರ್: ಕಾಡುವ ಈ ನಾಲ್ಕು ಪ್ರಶ್ನೆಗಳಿಗೆ ಉತ್ತರ ಎಲ್ಲಿಂದ?

ಡಿಸೆಂಬರ್ ಒಂಬತ್ತರವರೆಗೆ ಆರೋಪಿಗಳ ಶವಗಳನ್ನು ಸಂರಕ್ಷಿಸಡಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ, ಯಾವ ಕಾರಣಕ್ಕಾಗಿ ಎನ್ಕೌಂಟರ್ ಅನಿವಾರ್ಯವಾಯಿತು ಎನ್ನುವುದು ಸಜ್ಜನರ್ ತಂಡ, ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕಿದೆ.

ಕಾನೂನಿನ ಪ್ರಕಾರ ನಾವು ನಡೆದುಕೊಂಡಿದ್ದೇವೆ

ಕಾನೂನಿನ ಪ್ರಕಾರ ನಾವು ನಡೆದುಕೊಂಡಿದ್ದೇವೆ

''ಕಾನೂನಿನ ಪ್ರಕಾರ ನಾವು ಕ್ರಮ ನಡೆದುಕೊಂಡಿದ್ದೇವೆ. ಘಟನಾ ಸ್ಥಳ ಮಹಜರು ನಡೆಸಲು ಬಂದಾಗ ನಾಲ್ವರು ಆರೋಪಿಗಳು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮಿಂದ ಎರಡು ಗನ್ ಕಸಿದುಕೊಳ್ಳಲು ಯತ್ನಿಸಿದರು, ನಾವು ಶರಣಾಗುವಂತೆ ಎಚ್ಚರಿಕೆ ಕೊಟ್ಟರೂ ನಮ್ಮ ಮಾತಿಗೆ ಬೆಲೆ ಕೊಡಲಿಲ್ಲ'' ಎಂದು ಎನ್ಕೌಂಟರ್ ನಡೆದ ಸ್ಥಳದಲ್ಲೇ ಸುದ್ದಿಗೋಷ್ಠಿ ನಡೆಸಿದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.

ಮಾನವ ಹಕ್ಕುಗಳ ಹೋರಾಟಗಾರರ ಆರೋಪ

ಮಾನವ ಹಕ್ಕುಗಳ ಹೋರಾಟಗಾರರ ಆರೋಪ

"ಆರೋಪಿಗಳನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಇನ್ನು ಆದೇಶಿಸಿಲ್ಲ. ಆರೋಪ ಸಾಬೀತಾಗುವ ಮುನ್ನವೇ ಪೊಲೀಸ್ ಎನ್ಕೌಂಟರ್ ​ನಲ್ಲಿ ಕೊಲ್ಲಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರ ಹೇಳದೆ ತೆಲಂಗಾಣ ಸರ್ಕಾರವು, ನ್ಯಾಯ ಸಿಕ್ಕಿದೆ ಎಂಬಂತೆ ವರ್ತಿಸುತ್ತಿದೆ" ಎಂದು ಮಾನವ ಹಕ್ಕುಗಳ ಹೋರಾಟಗಾರರು ಆರೋಪಿಸುತ್ತಿದ್ದಾರೆ.

ಎನ್‌ಕೌಂಟರ್‌ನ ಪಿನ್ ಟು ಪಿನ್ ಮಾಹಿತಿ; ಪೊಲೀಸ್ ವರ್ಶನ್ ಹೀಗಿದೆ...ಎನ್‌ಕೌಂಟರ್‌ನ ಪಿನ್ ಟು ಪಿನ್ ಮಾಹಿತಿ; ಪೊಲೀಸ್ ವರ್ಶನ್ ಹೀಗಿದೆ...

ಎನ್ಕೌಂಟರ್ ವಿರುದ್ದ ತೆಲಂಗಾಣ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆ

ಎನ್ಕೌಂಟರ್ ವಿರುದ್ದ ತೆಲಂಗಾಣ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆ

ಎನ್ಕೌಂಟರ್ ವಿರುದ್ದ ತೆಲಂಗಾಣ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಈಗ, ಎನ್ಕೌಂಟರ್ ಅನ್ನು ಯಾವ ಕಾರಣಕ್ಕಾಗಿ ಮಾಡಲಾಯಿತು ಎಂದು ಸೈಬರಾಬಾದ್ ಪೊಲೀಸರು, ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕಿದೆ. ಆತ್ಮರಕ್ಷಣೆಗೆಂದಾದರೆ, ಅದನ್ನು ಪೊಲೀಸರು ಸಾಬೀತು ಪಡಿಸಬೇಕಾಗಿದೆ.

ಪೊಲೀಸರು ಮತ್ತು ಇತರ ಅಧಿಕಾರಿಗಳ ತಂಡಕ್ಕೆ ಜೀವಾವಧಿ ಶಿಕ್ಷೆ

ಪೊಲೀಸರು ಮತ್ತು ಇತರ ಅಧಿಕಾರಿಗಳ ತಂಡಕ್ಕೆ ಜೀವಾವಧಿ ಶಿಕ್ಷೆ

ಸೈಬರಾಬಾದ್ ಪೊಲೀಸರು ಮಹಜರು ನಡೆಸಲು, ಪಶುವೈದ್ಯೆಯನ್ನು ಸುಟ್ಟುಹಾಕಿದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಇದನ್ನೆಲ್ಲಾ, ಕೋರ್ಟಿಗೆ ಸವಿಸ್ತಾರವಾಗಿ, ಸಜ್ಜನರ್ ತಂಡ, ಕೋರ್ಟಿಗೆ ವಿವರಿಸಬೇಕಾಗಿದೆ. ಒಂದು ವೇಳೆ, ಪೊಲೀಸರ ಹೇಳಿಕೆಗಳು ಮತ್ತು ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು, ಕೋರ್ಟಿಗೆ ತೃಪ್ತಿ ನೀಡದೇ ಇದ್ದಲ್ಲಿ, ಪೊಲೀಸರು ಮತ್ತು ಇತರ ಅಧಿಕಾರಿಗಳ ತಂಡ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗಿಬರಬಹುದು.

ಎನ್ಕೌಂಟರ್ ಬಗ್ಗೆ ಹಲವು ಅನುಮಾನಗಳು ಮೂಡುತ್ತವೆ

ಎನ್ಕೌಂಟರ್ ಬಗ್ಗೆ ಹಲವು ಅನುಮಾನಗಳು ಮೂಡುತ್ತವೆ

"ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗುವಾಗ, ಮುನ್ನೆಚ್ಚರ ಕ್ರಮ ತೆಗೆದುಕೊಂಡಿಲ್ಲ. ಅಜಾಗರೂಕತೆಯಿಂದ ವರ್ತಿಸಿದ್ದಾರೆ, ಎನ್ಕೌಂಟರ್ ಬಗ್ಗೆ ಹಲವು ಅನುಮಾನಗಳು ಮೂಡುತ್ತವೆ" ಎಂದು ಸಾಮಾಜಿಕ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಡೆಹ್ರಾಡೂನ್ ಮತ್ತು ಉತ್ತರಪ್ರದೇಶದಲ್ಲಿ ಈ ಹಿಂದೆ ಎನ್ಕೌಂಟರ್ ನಕಲಿ ಎಂದು ರುಜುವಾತಾಗಿ, ಸಂಬಂಧಪಟ್ಟ ಪೊಲೀಸರು, ಜೀವಾವಧಿ ಶಿಕ್ಷೆ ಅನುಭವಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

English summary
Cyberabad Police Has To Prove Encounter Is Not Fake, Else Life Term Jail Punishment Has To Face.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X