• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಹಲ್ಲು ವಕ್ರ' ಎಂದು ಮಹಿಳೆಗೆ ತಲಾಖ್ ನೀಡಿದ ಪತಿ

|
Google Oneindia Kannada News

ಹೈದರಾಬಾದ್, ನವೆಂಬರ್ 1: ಪತ್ನಿ ಹಲ್ಲು ನೋಡಲು ಚೆನ್ನಾಗಿಲ್ಲ ಎಂದು ಕಾರಣ ಕೊಟ್ಟು ಪತಿ ತಲಾಖ್ ನೀಡಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ತಲಾಖ್ ನೀಡಲು ಒಂದಲ್ಲಾ ಒಂದು ಕಾರಣವನ್ನು ಹುಡುಕುತ್ತಿರುತ್ತಾರೆ, ಹೆಂಡತಿ ಅಡುಗೆ ಚೆನ್ನಾಗಿ ಮಾಡಿಲ್ಲವೆಂದರೂ ತಲಾಖ್, ಹೆಂಡತಿ ಹೆಚ್ಚು ಮಾತನಾಡುವುದಿಲ್ಲ ಎಂದರೂ ತಲಾಖ್ ಒಟ್ಟಿನಲ್ಲಿ ತಲಾಖ್ ನೀಡಲು ಒಂದು ಕಾರಣ ಬೇಕಷ್ಟೆ.

ತ್ರಿವಳಿ ತಲಾಖ್: ಪ್ರಧಾನಿ ಮೋದಿಗೆ ಓವೈಸಿ ಎಸೆದ ಗುರುತರ ಚಾಲೆಂಜ್ ತ್ರಿವಳಿ ತಲಾಖ್: ಪ್ರಧಾನಿ ಮೋದಿಗೆ ಓವೈಸಿ ಎಸೆದ ಗುರುತರ ಚಾಲೆಂಜ್

ಪತ್ನಿಯ ಹಲ್ಲು ವಕ್ರವಾಗಿದೆ ಎಂದು ಸಬೂಬು ನೀಡಿ ತಲಾಖ್ ನೀಡಿದ್ದಾನೆ. ರುಖ್ಸಾನಾ ಬೇಗಂ ಮುಸ್ತಫಾ ಅವರನ್ನು 2019ರ ಜೂನ್ 27ರಂದು ವಿವಾಹವಾಗಿದ್ದರು. ಆದರೆ ಅತ್ತೆಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ರುಖ್ಸಾನಾ ದೂರಿದ್ದಾರೆ.

ಅಕ್ಟೋಬರ್ 31ರಂದು ಐಪಿಸಿ ಸೆಕ್ಸನ್ 498ರ ಅಡಿಯಲ್ಲಿ ಮುಸ್ತಫಾ ವಿರುದ್ಧ ವರದಕ್ಷಿಣೆ ಕಿರುಕುಳ, ತ್ರಿವಳಿ ತಲಾಖ್ ಪ್ರಕರಣ ದಾಖಲಿಸಲಾಗಿದೆ.

ಸರ್ಕಲ್ ಇನ್ಸ್‌ಪೆಕ್ಟರ್ ಕೆ. ಚಂದ್ರಶೇಖರ್ ಅವರು ಹೇಳುವ ಪ್ರಕಾರ ಬೇಗಮ್ ಮುಸ್ತಫಾ ವಿರುದ್ಧ ದೂರು ದಾಖಲಿಸಿದ್ದಾರೆ, ಮುಸ್ತಫಾ ಅವರು ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಅಷ್ಟೇ ಅಲ್ಲ ತನ್ನ ಹಲ್ಲು ವಕ್ರವಾಗಿದೆ ಎನ್ನುವ ಕಾರಣಕ್ಕೆ ತಲಾಖ್ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.

ಮದುವೆ ಸಂದರ್ಭದಲ್ಲಿ ಮುಸ್ತಫಾ ಮನೆ ಕಡೆಯವರು ಎಷ್ಟೋ ಹಲವು ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದಿದ್ದರು. ಮದುವೆ ಬಳಿಕವೂ ಅತ್ತೆ ಮನೆಯಲ್ಲಿ ಹಣ, ಚಿನ್ನವನ್ನು ತರುವಂತೆ ಪೀಡಿಸುತ್ತಿದ್ದರು. ನನಗೆ ವಕ್ರ ಹಲ್ಲು ಇರುವುದು ಮುಸ್ತಫಾ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಮನೆಯಲ್ಲಿ 10-15ದಿನಗಳ ಕಾಲ ಕೂಡಿ ಹಾಕಿದ್ದರು. ಬಳಿಕ ಆಕೆ ಆರೋಗ್ಯ ಸರಿ ಇಲ್ಲದಾದಾಗ ತಾಯಿ ಮನೆಗೆ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

English summary
Crooked Teeth Hyderabad Man Gives Triple Talaq, Hyderabad Police has registered a case against a man for allegedly giving triple talaq to his wife over her misaligned teeth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X