ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ಎಡವಟ್ಟು: ಕೊರೊನಾ ರೋಗಿಯ ಶವ ಅದಲು-ಬದಲು, ಆಮೇಲೆ ಏನಾಯ್ತು?

|
Google Oneindia Kannada News

ಹೈದರಾಬಾದ್, ಜೂನ್ 12: ಕೊರೊನಾ ವೈರಸ್‌ನಿಂದ ಮೃತ ಪಟ್ಟ ವ್ಯಕ್ತಿಯ ಶವವನ್ನು ಬಹಳ ಜಾಗರೂಕತೆಯಿಂದ ಅಂತ್ಯ ಸಂಸ್ಕಾರ ಮಾಡಲಾಗುತ್ತೆ. ಶವದಿಂದಲೂ ಸೋಂಕು ಹರಡಬಹುದು ಎಂಬ ಆತಂಕ ಇರುವುದರಿಂದ ಸತ್ತ ವ್ಯಕ್ತಿ ಶವವನ್ನು ಸಾಮಾನ್ಯವಾಗಿ ಕುಟುಂಬದವರಿಗೆ ಹಸ್ತಾಂತರಿಸುವುದಿಲ್ಲ.

ಜಿಲ್ಲಾಡಳಿತದ ನೆರವಿನಿಂದ ಅದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡು ಅಂತ್ಯಕ್ರಿಯೆ ಮಾಡಲಾಗುತ್ತೆ. ಈ ವೇಳೆ ಕುಟುಂಬದ ಕೆಲವು ಸದಸ್ಯರಿಗೆ ಬಿಟ್ಟು ಹೆಚ್ಚಿನ ಜನರಿಗೆ ಅವಕಾಶ ನೀಡುವುದಿಲ್ಲ.

ಭಾರತದಲ್ಲಿ ದಿನಕ್ಕೆ 15 ಸಾವಿರ ಸೋಂಕು ಬರುತ್ತೆ: ಚೀನಾ ಸಂಶೋಧನಾ ತಂಡ ಎಚ್ಚರಿಕೆಭಾರತದಲ್ಲಿ ದಿನಕ್ಕೆ 15 ಸಾವಿರ ಸೋಂಕು ಬರುತ್ತೆ: ಚೀನಾ ಸಂಶೋಧನಾ ತಂಡ ಎಚ್ಚರಿಕೆ

ಆದರೆ, ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವದ ಬಗ್ಗೆ ಕಾಳಜಿ ಹೊಂದಿರಬೇಕಾದ ವೈದ್ಯರು, ಸೋಂಕಿತನ ಶವವನ್ನು ಅದಲು ಬದಲು ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಆ ಕುಟುಂಬದವರು ಅಂತ್ಯಕ್ರಿಯೆ ಸಹ ಮಾಡಿ ಮುಗಿಸಿದ್ದಾರೆ. ಮುಂದೆ ಓದಿ....

ಕೊವಿಡ್ ರೋಗಿಯ ಶವ ಹಸ್ತಾಂತರ, ಅಂತ್ಯಕ್ರಿಯೆ ಪೂರ್ಣ

ಕೊವಿಡ್ ರೋಗಿಯ ಶವ ಹಸ್ತಾಂತರ, ಅಂತ್ಯಕ್ರಿಯೆ ಪೂರ್ಣ

ಕೊರೊನಾ ವೈರಸ್‌ನಿಂದ ಮೃತಪಟ್ಟ 37 ವರ್ಷದ ವ್ಯಕ್ತಿಯ ಶವವನ್ನು ಬೇರೊಂದು ಕುಟುಂಬಕ್ಕೆ ನೀಡಿರುವ ಘಟನೆ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ ನಡೆದಿದೆ. ಶವವನ್ನು ಸ್ವೀಕರಿಸಿದ ಕುಟುಂಬ ಅದು ಬೇರೊಂದು ಶವ, ಕೊವಿಡ್ ರೋಗಿಯ ಶವ ಎಂದು ತಿಳಿಯದೇ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಿ ಮುಗಿಸಿದೆ.

ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಆಕ್ರೋಶ

ಆಸ್ಪತ್ರೆಯ ವಿರುದ್ಧ ಕುಟುಂಬಸ್ಥರು ಆಕ್ರೋಶ

37 ವರ್ಷದ ರಷೀದ್ ಅಲಿ ಖಾನ್ ಎಂಬ ವ್ಯಕ್ತಿ ಬುಧವಾರ ಬೆಳಿಗ್ಗೆ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಗುರುವಾರ ಬೆಳಿಗ್ಗೆ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿ ಶವವನ್ನು ಗುರುತಿಸಲು ಶವಗಾರಕ್ಕೆ ತೆರೆಳಿದ್ದಾರೆ. ಈ ವೇಳೆ ಶವ ಇಲ್ಲದಿರುವುದು ತಿಳಿದು ಬಂದಿದೆ. ನಂತರ ಆಸ್ಪತ್ರೆ ಸಿಬ್ಬಂದಿ, ಕುಟುಂಬ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಬಳಿಕವಷ್ಟೇ ಮತ್ತೊಂದು ಕುಟುಂಬಕ್ಕೆ ಶವ ಅದಲು ಬದಲು ಮಾಡಿ ಹಸ್ತಾಂತರಿಸಲಾಗಿದೆ ಎಂದು ತಿಳಿದಿದೆ. ಆದರೆ, ಅಷ್ಟೋತ್ತಿಗಾಗಲೇ ಕೊವಿಡ್ ರೋಗಿಯ ಶವ ಪಡೆದಿದ್ದ ಇನ್ನೊಂದು ಕುಟುಂಬ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.

ಆಸ್ಪತ್ರೆಯಿಂದ ಕೊರೊನಾ ರೋಗಿ ಕಾಣೆ, 6 ದಿನ ಬಳಿಕ ಟಾಯ್ಲೆಟ್‌ನಲ್ಲಿ ಶವಆಸ್ಪತ್ರೆಯಿಂದ ಕೊರೊನಾ ರೋಗಿ ಕಾಣೆ, 6 ದಿನ ಬಳಿಕ ಟಾಯ್ಲೆಟ್‌ನಲ್ಲಿ ಶವ

ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ

ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ

ಕೊವಿಡ್ ರೋಗಿಯ ಶವವನ್ನು ಹೊರಗೆ ಕಳುಹಿಸುವ ಭರಾಟೆಯಲ್ಲಿ, ಕುಟುಂಬದವರಿಗೆ ಶವವನ್ನು ಸೂಕ್ಷ್ಮವಾಗಿ ಗಮನಿಸಿ ಗುರುತಿಸಲು ಅವಕಾಶ ಕೊಡುತ್ತಿಲ್ಲ. ಶವವನ್ನು ಸಂಪೂರ್ಣವಾಗಿ ಕವರ್ ಮಾಡಲಾಗಿರುತ್ತದೆ, ಮುಖವನ್ನು ಸ್ಪಷ್ಟವಾಗಿ ನೋಡಲು ಅವಕಾಶ ಕೊಡುವುದಿಲ್ಲ. ಶವಗಾರದಲ್ಲಿ ಸಿಬ್ಬಂದಿಗಳು ಗೊಂದಲ ಸೃಷ್ಟಿಸಿ ಇಂತಹ ಎಡವಟ್ಟಿಗೆ ಕಾರಣವಾಗುತ್ತಿದ್ದಾರೆ ಎಂದು ಕೊವಿಡ್ ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

ಗಾಂಧಿ ಆಸ್ಪತ್ರೆಯಲ್ಲಿ ಇದು ಎರಡನೇ ಘಟನೆ

ಗಾಂಧಿ ಆಸ್ಪತ್ರೆಯಲ್ಲಿ ಇದು ಎರಡನೇ ಘಟನೆ

ಗಾಂಧಿ ಆಸ್ಪತ್ರೆಯಲ್ಲಿ ಕೊವಿಡ್ ರೋಗಿಯ ಶವವನ್ನು ಮೂಲ ಕುಟುಂಬದವರಿಗೆ ಹಸ್ತಾಂತರಿಸದೇ ಬೇರೊಂದು ಕುಟುಂಬಕ್ಕೆ ನೀಡಿರುವ ಎರಡನೇ ಪ್ರಕರಣ ಇದು. ಬೇಗುಮ್‌ಪೇಟೆಯ ಕೊರೊನಾ ರೋಗಿಯೊಬ್ಬರು ಗಾಂಧಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಮೃತಪಟ್ಟರು. ಅವರ ಶವವನ್ನು ಬೇರೆ ಕುಟುಂಬಕ್ಕೆ ನೀಡಲಾಗಿತ್ತು. ಅಂತ್ಯಕ್ರಿಯೆ ವೇಳೆ ಇದು ತನ್ನ ಪತಿ ಅಲ್ಲ ಎಂದು ಮಹಿಳೆ ಗುರುತಿಸಿದರು. ಬಳಿಕ, ಮರುದಿನ ತಮ್ಮ ಪತಿಯ ಶವ ಪಡೆದುಕೊಂಡಿದ್ದರು.

ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ

ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ

ಕೊವಿಡ್ ರೋಗಿಯ ಶವ ಪಡೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿದ್ದ ಕುಟುಂಬಕ್ಕೆ ನಂತರ ಈ ವಿಚಾರ ತಿಳಿದಿದೆ. ಬಳಿಕ, ಶವ ಕಳೆದುಕೊಂಡು ಕುಟುಂಬದ ಅನುಮತಿ ಪಡೆದು ತನ್ನ ಪತಿಯ ಶವ ತೆಗೆದುಕೊಂಡು ಹೋದರು. ಇನ್ನು ಶವ ಅದಲು ಬದಲು ಮಾಡಿರುವ ಆಸ್ಪತ್ರೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರ ದೂರು ನೀಡಲು ಕೊವಿಡ್ ರೋಗಿಯ ಸಂಬಂಧಿಕರು ಮುಂದಾಗಿದ್ದಾರೆ.

English summary
Coronavirus patient dead body handover to another family at hyderabad gandhi hospital. they completed last rites also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X