ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಹೆಚ್ಚಳ: ತೆಲಂಗಾಣದಲ್ಲಿ 10 ದಿನಗಳ ರಾತ್ರಿ ಕರ್ಫ್ಯೂ ಜಾರಿ

|
Google Oneindia Kannada News

ಹೈದರಾಬಾದ್, ಏಪ್ರಿಲ್ 20: ತೆಲಂಗಾಣದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 30ರವರೆಗೆ ರಾತ್ರಿ ಕರ್ಫ್ಯೂ ಜಾರಿಮಾಡಲಾಗಿದೆ.

ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಲಾಕ್‌ಡೌನ್ ವಿಧಿಸುವುದೇ ಅಥವಾ ರಾತ್ರಿ ಕರ್ಫ್ಯೂ ಜಾರಿ ಮಾಡುವುದೇ ಎನ್ನುವ ಗೊಂದಲದಲ್ಲಿ ಸರ್ಕಾರ ಇತ್ತು., ಇದೀಗ ಏಪ್ರಿಲ್ 30ರವರೆಗೆ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಅರ್ಧಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳನ್ನು ಮುಚ್ಚಿಟ್ಟ ತೆಲಂಗಾಣ ಸರ್ಕಾರಅರ್ಧಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳನ್ನು ಮುಚ್ಚಿಟ್ಟ ತೆಲಂಗಾಣ ಸರ್ಕಾರ

ಕೊರೊನಾ ಸೋಂಕು ಹೆಚ್ಚಾಗುತ್ತಿರುವ ರಾಜ್ಯಗಳಲ್ಲಿ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

 Covid 19: 10 Day Night Curfew Imposed In Telangana

ಈ 10 ದಿನದ ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ ಎಲ್ಲಾ ಕಚೇರಿಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು ಸಂಜೆ 8 ಗಂಟೆ ಬಳಿಕ ಬಂದ್ ಇರಲಿವೆ. ಆಸ್ಪತ್ರೆ, ಡಯಾಗ್ನೊಸ್ಟಿಕ್ ಲ್ಯಾಬ್‌ಗಳು, ಔಷಧ ಅಂಗಡಿಗಳು ತೆರೆದಿರಲಿವೆ.

ಪೆಟ್ರೋಲ್ ಪಂಪ್, ಎಲ್‌ಪಿಜಿ, ಚಿಎನ್‌ಜಿ, ಗ್ಯಾಸ್ ಔಟ್‌ಲೆಟ್, ನೀರಿನ ಸರಬರಾಜುಉ, ಸ್ಯಾನಿಟೈಸೇಷನ್, ಖಾಸಗಿ ಭದ್ರತಾ ಸೇವೆಗಳು ಸೇರಿದಂತೆ ಇತರೆ ಸೇವೆಗಳಿಗೆ ಅವಕಾಶವಿದೆ.

ಇನ್ನು ತೆಲಂಗಾಣ ಸರ್ಕಾರವು ನೀಡಿರುವ ಕೊರೊನಾ ಸೋಂಕಿತರ ಮಾಹಿತಿಗಿಂತ ನಿಜವಾದ ಸೋಂಕಿತರು ಶೇ.66ರಷ್ಟು ಹೆಚ್ಚಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ಸರ್ಕಾರವು ಜಿಲ್ಲೆಗಳಲ್ಲಿ ಪ್ರತ್ಯೇಕ ಕೋವಿಡ್ 19 ವರದಿಯನ್ನು ನೀಡದಂತೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಕೇಳಿಬಂದಿದೆ.

English summary
A day after High court gave ultimatum to state Government to decide about the Lockdown or night curfew to contain the fastly spreading COVID-19 virus, the Government on Tuesday imposed night curfew till April 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X