ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರ ವೈರಸ್ ವಿರುದ್ಧ ಕೋವ್ಯಾಕ್ಸಿನ್ ಪರಿಣಾಮಕಾರಿ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 29: ಕೋವಿಡ್ ರೂಪಾಂತರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದು ಅಗತ್ಯವಿಲ್ಲ. ಕೊರೊನಾ ವೈರಸ್ ವಿರುದ್ಧ ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಕೊರೊನಾ ವೈರಸ್ ರೂಪಾಂತರದ ವಿರುದ್ಧ ಕೂಡ ಪರಿಣಾಮಕಾರಿಯಾಗಿ ರಕ್ಷಣೆ ನೀಡಬಲ್ಲದು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಮಂಗಳವಾರ ತಿಳಿಸಿದ್ದಾರೆ.

ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ಈಗಾಗಲೇ ಭಾರತ್ ಬಯೋಟೆಕ್ ಕಂಪೆನಿಯು ಔಷಧ ಪ್ರಾಧಿಕಾರಕ್ಕೆ ಮನವಿ ಮಾಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐಸಿಎಂಆರ್) ಹಾಗೂ ರಾಷ್ಟ್ರೀಯ ವೈರಾಣು ಸಂಸ್ಥೆಯ (ಎನ್‌ಐವಿ) ಸಹಯೋಗದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಮೂರನೇ ಹಂತದ ಪ್ರಯೋಗದಲ್ಲಿದೆ.

ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್ ರೂಪಾಂತರ ಪರೀಕ್ಷೆಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್ ರೂಪಾಂತರ ಪರೀಕ್ಷೆ

'ಎರಡು ಕಲ್ಪನೆಗಳ ಕಾರಣದಿಂದ ಕೊರೊನಾ ವೈರಸ್ ಅನೇಕ ರೂಪಾಂತರಗಳನ್ನು ಹೊಂದುವ ನಿರೀಕ್ಷೆಯಿದೆ ಮತ್ತು ಈ ಲಸಿಕೆಯು ರೂಪಾಂತರ ವೈರಸ್ ವಿರುದ್ಧ ಕೂಡ ರಕ್ಷಣೆಯನ್ನು ನೀಡಬಲ್ಲದು ಎಂಬ ಭರವಸೆ ಹೊಂದಬಹುದು. ಹೀಗಾಗಿ ಈ ಎರಡು ಅಂಶಗಳನ್ನು ನೀವು ನಿಷ್ಕ್ರಿಯ ಲಸಿಕೆಯೊಳಗೆ ಹೊಂದಿರುವುದರಿಂದ ಅವುಗಳು ಆ ರೂಪಾಂತರಗಳ ಸಂಗತಿಯನ್ನು ನೋಡಿಕೊಳ್ಳುತ್ತವೆ' ಎಂದು ಅವರು ಕೊರೊನಾ ವೈರಸ್‌ ಹೊಸ ರೂಪಾಂತರಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

Covaxin Can Work Against Mutate Coronavirus: Bharat Biotech

'ರೂಪಾಂತರವು ಅನಿರೀಕ್ಷಿತವೇನಲ್ಲ. ವೈರಸ್‌ಗಳು ಹೆಚ್ಚಿನ ಜನರನ್ನು ತಲುಪಲು ತಮ್ಮನ್ನು ತಾವು ರೂಪಾಂತರ ಮಾಡಿಕೊಳ್ಳುತ್ತವೆ. ಕೋವ್ಯಾಕ್ಸಿನ್ ಲಸಿಕೆಯು ಈ ರೂಪಾಂತರದ ವಿರುದ್ಧ ಕೂಡ ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು' ಎಂದು ಅವರು ಹೇಳಿದ್ದಾರೆ.

English summary
Bharat Biotech company chairman Krishna Ella said Covaxin candidate will be effective against mutation of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X