ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಕೊಳ್ಳಲು ಹಣವಿಲ್ಲ, ಹಕ್ಕಿ ಗೂಡು ಧರಿಸಿ ಸರ್ಕಾರಿ ಕಚೇರಿಗೆ ಬಂದ ವ್ಯಕ್ತಿ

|
Google Oneindia Kannada News

ಹೈದರಾಬಾದ್, ಏಪ್ರಿಲ್ 23: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಮಾಸ್ಕ್ ಧರಿಸದೆ ಇದ್ದರೆ 1 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ.

ಈ ಬಡ ವೃದ್ಧರಿಗೆ ಮಾಸ್ಕ್ ಕೊಳ್ಳುವಷ್ಟು ಹಣವಿಲ್ಲ, ಪಿಂಚಣಿಯನ್ನು ತರಬೇಕು, ಮಾಸ್ಕ್ ಇಲ್ಲದೆ ಒಳಗೆ ಬಿಡುವುದಿಲ್ಲ, ಹೀಗಾಗಿ ಉಪಾಯ ಮಾಡಿ, ಹಕ್ಕಿಯ ಗೂಡನ್ನೇ ಮಾಸ್ಕ್‌ ಆಗಿ ಬಳಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಕೇಂದ್ರ ಸರ್ಕಾರ ಒಂದು ಡೋಸ್ ಲಸಿಕೆಗೆ ಖರ್ಚು ಮಾಡುತ್ತಿರುವುದೆಷ್ಟು!?ಕೇಂದ್ರ ಸರ್ಕಾರ ಒಂದು ಡೋಸ್ ಲಸಿಕೆಗೆ ಖರ್ಚು ಮಾಡುತ್ತಿರುವುದೆಷ್ಟು!?

ತೆಲಂಗಾಣದ ಮೆಹಬೂಬನಗರದ ನಿವಾಸಿ ಮೆಕಾಳ ಕುರುಮಯ್ಯ ಪಿಂಚಣಿ ಹಣವನ್ನು ತರಲು ಮಂಡಲಕ್ಕೆ ಹೋಗಬೇಕಿತ್ತು. ಆದರೆ ಮಾಸ್ಕ್ ಕೊಳ್ಳುವಷ್ಟು ಹಣ ಅವರ ಬಳಿ ಇರಲಿಲ್ಲ.

 Couldnt Afford Mask, Telangana Shepherd Walks Into Govt Office Wearing Birds Nest On His Face

ಸರ್ಕಾರಿ ಕಚೇರಿಗಳಲ್ಲಿ ಮಾಸ್ಕ್ ಇಲ್ಲದೆ ಒಳಗೆ ಬಿಡುವುದಿಲ್ಲ ಹೀಗಾಗಿ ಅವರೇ ಖುದ್ದಾಗಿ ಮಾಸ್ಕ್ ತಯಾರಿಸಬೇಕು ಎಂದು ಆಲೋಚಿಸಿದರು.

ಬಳಿಕ ಹಕ್ಕಿಯ ಗೂಡನ್ನೇ ಮಾಸ್ಕ್ ರೀತಿ ಬಳಸಿ ಕಚೇರಿಗೆ ತೆರಳಿದರು. ಆರೋಗ್ಯ ತಜ್ಞರು ಕೊರೊನಾ ಹರಡುವುದನ್ನು ತಪ್ಪಿಸಲು ಮಾಸ್ಕ್ ಧರಿಸಿ ಎಂದು ಹೇಳಿದ್ದರು. ಬಳಿಕ ಅಮೆರಿಕದ ಸಿಡಿಸಿಯು ಎರಡು ಮಾಸ್ಕ್‌ಗಳನ್ನು ಧರಿಸಬೇಕು ಎಂದು ಹೇಳಿದೆ.

ಕಳೆದ ಜೂನ್ ತಿಂಗಳಿನಿಂದ ಇಲ್ಲಿಯವರೆಗೆ ಭಾರತದಲ್ಲಿ 1.5 ಬಿಲಿಯನ್ ಅಷ್ಟು ಮಾಸ್ಕ್ ತಯಾರಿಸಲಾಗಿದೆ. ಇದೀಗ ಮೆಕಾಳ ಕುರುಮಯ್ಯ ಅವರ ಆರ್ಗ್ಯಾನಿಕ್ ಮಾಸ್ಕ್ ತುಂಬಾ ವೈರಲ್ ಆಗಿದೆ. ತೆಲಂಗಾಣದಲ್ಲಿ 46,488 ಸಕ್ರಿಯ ಪ್ರಕರಣಗಳಿವೆ. ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಶೇ.86.85ರಷ್ಟಿದೆ.

English summary
Telangana, like several other states, is witnessing a sharp surge in new confirmed cases of Covid-19. The state government, earlier this month, issued an order making the use of face masks in public mandatory. Violators will be fined Rs 1,000, said the order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X