ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡಿಮೆಯಾಗಿಲ್ಲ ಕೊರೊನಾ: ಭಾರತದಲ್ಲಿ ಓಮಿಕ್ರಾನ್ ಬಿಎ.4, ಬಿಎ.5 ಉಪ-ತಳಿ ಪ್ರಕರಣ ಪತ್ತೆ!

|
Google Oneindia Kannada News

ನವದೆಹಲಿ, ಮೇ 23: ಭಾರತದಲ್ಲಿ ಕೊರೊನಾ ವೈರಸ್ ರೂಪಾಂತರಿ ಆಗಿರುವ ಓಮಿಕ್ರಾನ್ ಸೋಂಕಿನ ಉಪ-ತಳಿ ಬಿಎ.4 ಮತ್ತು ಬಿಎ.5 ಕಂಡು ಬಂದಿರುವುದನ್ನು ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ದೃಢಪಡಿಸಿದೆ.

ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ದೇಶದಲ್ಲಿ ರೂಪಾಂತರ ತಳಿಗಳು ಸದ್ದು ಮಾಡುತ್ತಿವೆ. ತಮಿಳುನಾಡಿನ ವ್ಯಕ್ತಿಯಲ್ಲಿ ಬಿಎ.4 ಮತ್ತು ತೆಲಂಗಾಣದ ಸೋಂಕಿತ ವ್ಯಕ್ತಿಯಲ್ಲಿ ಬಿಎ.5 ಉಪ-ತಳಿ ಪತ್ತೆಯಾಗಿದೆ.

ಅಲ್ಲಿ-ಇಲ್ಲಿ ಸುದ್ದಿ: ಅಲ್ಲಿ 5ನೇ ಅಲೆಗೆ ಕಾರಣವಾದ ಓಮಿಕ್ರಾನ್ ಉಪ ತಳಿ ಬಿಎ.4 ಇಲ್ಲಿ ಪತ್ತೆ!ಅಲ್ಲಿ-ಇಲ್ಲಿ ಸುದ್ದಿ: ಅಲ್ಲಿ 5ನೇ ಅಲೆಗೆ ಕಾರಣವಾದ ಓಮಿಕ್ರಾನ್ ಉಪ ತಳಿ ಬಿಎ.4 ಇಲ್ಲಿ ಪತ್ತೆ!

ಓಮಿಕ್ರಾನ್ ರೂಪಾಂತರ ತಳಿಗಳಲ್ಲೇ ಈ ಬಿಎ.4 ಮತ್ತು ಬಿಎ.5 ಅತಿಹೆಚ್ಚು ವೇಗವಾಗಿ ಹರಡುವ ಉಪ-ತಳಿ ಎಂದು ಗುರುತಿಸಲಾಗಿದೆ. ಈಗಾಗಲೇ ವಿದೇಶಗಳಲ್ಲಿ 5ನೇ ಅಲೆಗೆ ಕಾರಣವಾಗಿರುವ ಈ ಉಪ-ತಳಿಗಳು ಇದೀಗ ಭಾರತಕ್ಕೂ ಲಗ್ಗೆ ಇಟ್ಟಿರುವುದು ವೈದ್ಯಕೀಯ ಪರೀಕ್ಷೆಗಳಲ್ಲಿ ದೃಢಪಟ್ಟಿದೆ. ದೇಶದಲ್ಲಿ ಪತ್ತೆಯಾಗಿರುವ ಈ ಓಮಿಕ್ರಾನ್ ಉಪ-ತಳಿಗಳು ಮತ್ತು ಸೋಂಕಿತರ ಹಿನ್ನಲೆ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ತಮಿಳುನಾಡಿನಲ್ಲೂ ಪಕ್ಕಾ ಆಯ್ತು ಬಿಎ.4 ಉಪ-ತಳಿ

ತಮಿಳುನಾಡಿನಲ್ಲೂ ಪಕ್ಕಾ ಆಯ್ತು ಬಿಎ.4 ಉಪ-ತಳಿ

ತಮಿಳುನಾಡಿನ 19 ವರ್ಷದ ಯುವತಿಯಲ್ಲಿ ಓಮಿಕ್ರಾನ್ ರೂಪಾಂತರಿಯ ಬಿಎ.4 ಉಪ ತಳಿಯು ಪತ್ತೆ ಆಗಿರುವ ಬಗ್ಗೆ ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ಭಾನುವಾರದ ಹೇಳಿಕೆಯಲ್ಲಿ ದೃಢಪಡಿಸಿದೆ. ಸೋಂಕಿತ ಯುವತಿಯಲ್ಲಿ ಸಾಮಾನ್ಯ ಲಕ್ಷಣಗಳು ಗೋಚರಿಸಿದ್ದು, ಯಾವುದೇ ವಿದೇಶ ಪ್ರಯಾಣದ ಹಿನ್ನಲೆಯನ್ನು ಹೊಂದಿಲ್ಲ ಎಂಬುದು ಖಾತ್ರಿಯಾಗಿದೆ.

ತೆಲಂಗಾಣದ 80ರ ವೃದ್ಧನಲ್ಲಿ ಬಿಎ.5 ಸೋಂಕು ಪತ್ತೆ

ತೆಲಂಗಾಣದ 80ರ ವೃದ್ಧನಲ್ಲಿ ಬಿಎ.5 ಸೋಂಕು ಪತ್ತೆ

ಓಮಿಕ್ರಾನ್ ರೂಪಾಂತರಿಯ ಬಿಎ.5 ಉಪ-ತಳಿಯು ತೆಲಂಗಾಣದ 80 ವರ್ಷದ ವೃದ್ಧನಲ್ಲಿ ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ವೃದ್ಧನಲ್ಲೂ ಸಾಮಾನ್ಯ ಸೋಂಕಿನ ಲಕ್ಷಣಗಳು ಪತ್ತೆಯಾಗಿದ್ದು, ಯಾವುದೇ ಪ್ರಯಾಣದ ಹಿನ್ನಲೆಯನ್ನು ಹೊಂದಿಲ್ಲ ಎನ್ನುವುದು ಪಕ್ಕಾ ಆಗಿದೆ. "ಬಿಎ.4 ಮತ್ತು ಬಿಎ.5 ರೋಗಿಗಳ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಲಾಗುತ್ತಿದೆ" ಎಂದು INSACOG ಹೇಳಿದೆ.

ದೇಶದ ಮೊದಲ ಬಿಎ.4 ಪ್ರಕರಣ ಪತ್ತೆಯಾಗಿದ್ದು ಎಲ್ಲಿ?

ದೇಶದ ಮೊದಲ ಬಿಎ.4 ಪ್ರಕರಣ ಪತ್ತೆಯಾಗಿದ್ದು ಎಲ್ಲಿ?

ಭಾರತದಲ್ಲಿ ಓಮಿಕ್ರಾನ್ ರೂಪಾಂತರಿಯ ಉಪ ತಳಿ ಬಿಎ.4 ಮೊದಲ ಪ್ರಕರಣವು ಹೈದರಾಬಾದ್‌ನಲ್ಲಿ ಪತ್ತೆಯಾಗಿತ್ತು. ಕಳೆದ ಮೇ 9ರಂದು ದಕ್ಷಿಣ ಆಫ್ರಿಕಾದಿಂದ ಹೈದರಾಬಾದ್‌ಗೆ ಆಗಮಿಸಿದ ವ್ಯಕ್ತಿಯಲ್ಲಿ ಓಮಿಕ್ರಾನ್ ರೂಪಾಂತರಿಯ ಉಪ ತಳಿ ಬಿಎ.4 ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನಲೆ ಅಂದು ಸೋಂಕಿತ ವ್ಯಕ್ತಿಯ ಜೊತೆಗೆ ಪ್ರಯಾಣಿಸಿದ ಇತರ ಪ್ರಯಾಣಿಕರಿಂದ ಮಾದರಿ ಸಂಗ್ರಹಿಸಲಾಗುತ್ತಿದೆ.

ದಕ್ಷಿಣ ಆಫ್ರಿಕಾದಲ್ಲಿ 5ನೇ ಅಲೆ ಸೃಷ್ಟಿಸಿದ ಉಪ ತಳಿಗಳು

ದಕ್ಷಿಣ ಆಫ್ರಿಕಾದಲ್ಲಿ 5ನೇ ಅಲೆ ಸೃಷ್ಟಿಸಿದ ಉಪ ತಳಿಗಳು

ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ ಬಿಎ.4 ಮತ್ತು ಬಿಎ.5 ಉಪ ತಳಿಗಳು ದಕ್ಷಿಣ ಆಫ್ರಿಕಾದಲ್ಲಿ ಐದನೇ ಅಲೆಗೆ ಕಾರಣವಾಗಿತ್ತು. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಇದೇ ಉಪ ತಳಿಗಳಿಂದ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದವು ಎಂದು ವರದಿಯಾಗಿದೆ.

English summary
Coronavirus News: INSACOG confirms cases of BA.4, BA.5 Omicron sub-variants in India. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X