ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ತಿರುಗಿಬಿದ್ದ ತೆಲಂಗಾಣ ಕಾಂಗ್ರೆಸ್, ಟಿಆರ್‌ಎಸ್

|
Google Oneindia Kannada News

ಹೈದರಾಬಾದ್ ಫೆಬ್ರವರಿ 9: ತೆಲಂಗಾಣ ರಚನೆ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್, ಟಿಆರ್‌ಎಸ್ ವಾಗ್ದಾಳಿ ನಡೆಸಿವೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಮತ್ತು ಸಂಸದ ಎ ರೇವಂತ್ ರೆಡ್ಡಿ ಅವರು ಸಂಸತ್ತಿನಲ್ಲಿ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಮತ್ತು ಅದರ ಜನರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿಗೆ ತೆಲಂಗಾಣದ ಇತಿಹಾಸವಾಗಲಿ, ಸಂಸತ್ತಿನ ಕಾರ್ಯವಿಧಾನಗಳ ಬಗ್ಗೆಯೂ ಅರಿವಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. ಅವರು ಈ ಕಾರ್ಯವಿಧಾನಗಳ ಬಗ್ಗೆ ಸಂಪೂರ್ಣ ಅಜ್ಞಾನ ಹೊಂದಿದ್ದಾರೆ ಎಂದು ರೆಡ್ಡಿ ಆರೋಪಿಸಿದ್ದಾರೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಸಚಿವ ಕೆಟಿಆರ್ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ತೆಲಂಗಾಣದ ಜನರ ಹೋರಾಟಗಳನ್ನು ಪದೇ ಪದೇ ಅವಮಾನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

2014ರಲ್ಲಿ ಲೋಕಸಭೆಯ ಬಾಗಿಲು ಮುಚ್ಚುವುದರೊಂದಿಗೆ ಸಂಸತ್ತಿನಲ್ಲಿ ಕಾಂಗ್ರೆಸ್ ರಾಜ್ಯ ವಿಭಜನೆ ಮಸೂದೆಯನ್ನು ಅಂಗೀಕರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈ ಹೇಳಿಕೆಗೆ ತೆಲಂಗಾಣ ಮೋದಿ ವಿರುದ್ಧ ತಿರುಗಿ ಬಿದ್ದಿದೆ. ಬಿಜೆಪಿ ತನ್ನ ಭಾಷಣಗಳಲ್ಲಿ ಅತ್ಯಂತ 'ಅಗ್ಗದ' ಮತ್ತು 'ಕೊಳಕು ರಾಜಕಾರಣ' ಮಾಡುವ ಮೂಲಕ ಪ್ರಧಾನಿ ಹುದ್ದೆಗೆ ಅಗೌರವ ತಂದಿದೆ ಎಂದು ಕಾಂಗ್ರೆಸ್ ಸಂಸದರು ಆರೋಪಿಸಿದ್ದಾರೆ.

Congress, TRS Hits Out at PM Modi Over Telangana Formation Remark

ತೆಲಂಗಾಣ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ ಎಂಬ ಪ್ರಧಾನಿ ಮೋದಿ ಅವರ ವಾದವನ್ನು ರೇವಂತ್ ರೆಡ್ಡಿ ನಿರಾಕರಿಸಿದ್ದಾರೆ. "ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿದಾಗ ಅಂದಿನ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಚರ್ಚೆಯ ಅಗತ್ಯವಿಲ್ಲ ಮತ್ತು ಮಸೂದೆಯನ್ನು ತಕ್ಷಣವೇ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು. ಅವರ ಸಲಹೆಯನ್ನು ಅನುಸರಿಸಿ, ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿಯೇ ಮಸೂದೆಯನ್ನು ಅಂಗೀಕರಿಸಲಾಯಿತು,'' ಎಂದು ರೆಡ್ಡಿ ಹೇಳಿದರು.


ರಾಜ್ಯಸಭೆಯಲ್ಲಿ ವಿಧೇಯಕದ ಕುರಿತು ವಿವರವಾದ ಚರ್ಚೆಗಳು ನಡೆದಿವೆ ಮತ್ತು ಪ್ರಸ್ತುತ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಪ್ರಸ್ತಾಪಿಸಿದ ತಿದ್ದುಪಡಿಗಳಿಂದಾಗಿ ಹೈದರಾಬಾದ್ ಅನ್ನು 10 ವರ್ಷಗಳ ಅವಧಿಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಜಂಟಿ ರಾಜಧಾನಿಯನ್ನಾಗಿ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಪ್ರತಿಪಾದಿಸಿದ್ದಾರೆ. ಈ ವೇಳೆ 2014 ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ತಿರುಪತಿಗೆ ಭೇಟಿ ನೀಡಿದ್ದರು ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆ ನೀಡಿದ್ದರು ಅದು ಇನ್ನೂ ಈಡೇರಿಲ್ಲ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ.


ಟಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಅವರು ಪ್ರಧಾನಿ ಮೋದಿಯವರ ಹೇಳಿಕೆಗೆ ಪ್ರತಿಕ್ರಿಯಿಸಿ, "ರಾಜ್ಯದ ಜನರು ನಡೆಸಿದ ಹೋರಾಟದಿಂದಾಗಿ ತೆಲಂಗಾಣವು ಸುರಕ್ಷಿತವಾಗಿದೆ. ಜನರ ಸಂಪೂರ್ಣ ದೃಢತೆಯೇ ಎಲ್ಲಾ ರಾಜಕೀಯ ಪಕ್ಷಗಳು ನಮ್ಮನ್ನು ಮಸೂದೆ ರಚಿಸಲು ಬೆಂಬಲಿಸುವಂತೆ ಮಾಡಿದೆ'' ಎಂದರು. ಪ್ರಧಾನಿ ಮೋದಿಯವರ ಹೇಳಿಕೆಯನ್ನು ವಿರೋಧಿಸಿ ಟಿಆರ್‌ಎಸ್ ಮತ್ತು ಕಾಂಗ್ರೆಸ್ ನಾಯಕರು ಪ್ರತಿಭಟಿಸಿದರು ಮತ್ತು ಟೀಕೆಗಳನ್ನು ತೆಲಂಗಾಣ ವಿರೋಧಿ ಎಂದು ಹರಿಹಾಯ್ದರು.

Recommended Video

ಪಾಕಿಸ್ತಾನದ ಸಚಿವರಿಗೂ ಭಯ ಹುಟ್ಟಿಸಿದ ಕರ್ನಾಟಕದ ಹಿಜಾಬ್ vs ಕೇಸರಿ ಶಾಲು ವಿವಾದ | Oneindia Kannada

English summary
Telangana Pradesh Congress Committee (TPCC) president and MP A Revanth Reddy accused Prime Minister Narendra Modi of insulting the state and its people by making 'baseless' and 'irrelevant' references to the state during his speech in Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X