ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಟಿಆರ್‌ಎಸ್‌ಗೆ ಗೆಲುವು, ಕಾಂಗ್ರೆಸ್‌ಗೆ ಇವಿಎಂ ಮೇಲೆ ಅನುಮಾನ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 11: ತೆಲಂಗಾಣ ರಾಜ್ಯದಲ್ಲಿ ಕೆ.ಚಂದ್ರಶೇಖರ್‌ ರಾವ್ ಅವರ ಟಿಆರ್‌ಎಸ್‌ ಪಕ್ಷ ಭಾರಿ ಮುನ್ನಡೆಯಲಿದ್ದು, ಅಧಿಕಾರ ಹಿಡಿಯುವುದು ಖಾತ್ರಿಯಾಗಿದೆ.

ಭಾರಿ ಆಶಾಭಾವ ಮೂಡಿಸಿದ್ದ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದ್ದು ಕಳೆದ ಚುನಾವಣೆಗಿಂತಲೂ ಕಡಿಮೆ ಸ್ಥಾನವನ್ನು ಕಾಂಗ್ರೆಸ್‌ ಗಳಿಸಿದೆ. ಆದರೆ ಸೋತ ಬಳಿಕ ಕಾಂಗ್ರೆಸ್ ಪಕ್ಷವು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿವೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ಮತ್ತೆ ಮಾಯಾವತಿ ಕಿಂಗ್ ಮೇಕರ್!?ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ಮತ್ತೆ ಮಾಯಾವತಿ ಕಿಂಗ್ ಮೇಕರ್!?

ತೆಲಂಗಾಣ ಪ್ರದೇಶ ಕಾಂಗ್ರೆಸ್‌ ನ ಅಧ್ಯಕ್ಷ ಉತ್ತಮ ಕುಮಾರ್‌ ರೆಡ್ಡಿ ಮಾತನಾಡಿ, ಇವಿಎಂ ಟ್ಯಾಂಪರಿಂಗ್ ಆಗಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

Congress raise doubt on EVM in Telangana

ಫಲಿತಾಂಶದ ಬಗ್ಗೆ ನನಗೆ ಅನುಮಾನ ಇದೆ, ಬ್ಯಾಲೆಟ್ ಪೇಪರ್‌ನಲ್ಲಿ ನಮ್ಮ ಪಕ್ಷ ಮುನ್ನಡೆಯಲ್ಲಿತ್ತು ಆದರೆ ಇವಿಎಂ ಮತ ಎಣಿಕೆ ವೇಳೆಗೆ ಹಿನ್ನಡೆ ಆಯಿತು ಎಂದು ಅವರು ಹೇಳಿದ್ದಾರೆ.

ಟಿಆರ್‌ಎಸ್‌ನ ಯಾವ ಯಾವ ಅಭ್ಯರ್ಥಿ ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂದು ಮೊದಲೇ ಅದೇ ಪಕ್ಷದ ಮುಖಂಡರು ಹೇಳಿಬಿಟ್ಟಿದ್ದರು ಇದೂ ಸಹ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ ತೆಲಂಗಾಣ: ನಾಳೆಯೇ ಮುಖ್ಯಮಂತ್ರಿಯಾಗಿ ಕೆಸಿಆರ್ ಪ್ರಮಾಣವಚನ

ಸಮೀಕ್ಷೆ ಸಮಯದಲ್ಲಿ ಟಿಆರ್‌ಎಸ್‌ ಗೆಲ್ಲುತ್ತದೆ ಎಂದು ಹೇಳಲಾಗಿತ್ತಾದರೂ ಕಾಂಗ್ರೆಸ್ ಭಾರಿ ಪೈಪೋಟಿ ನೀಡುತ್ತದೆ ಎನ್ನಲಾಗಿತ್ತು. ಆದರೆ ಫಲಿತಾಂಶದ ದಿನ ಎಲ್ಲವೂ ತಲೆ ಕೆಳಕಾಗಿದೆ. ಟಿಎಸ್‌ಆರ್‌ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದೆ.

English summary
Congress raise doubt on EVM after facing defeat in Telangana assembly elections. Telangana Congress president Uttam Kumara said that, 'There is a chance of tampering EVM'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X