ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಕಥೆ ಮುಗಿಯಿತು; ಪರ್ಯಾಯ ಹುಡುಕಿ: ಓವೈಸಿ ಹೇಳಿಕೆ

|
Google Oneindia Kannada News

ಹೈದರಾಬಾದ್, ಜೂನ್ 9: ಮುಸ್ಲಿಮರು ಇನ್ನು ಎಂದಿಗೂ ಕಾಂಗ್ರೆಸ್ ಅನ್ನು ನಂಬುವಂತಿಲ್ಲ. ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ಹೇಳಿದರು.

ಕಾಂಗ್ರೆಸ್‌ನಲ್ಲಿ 50 ವರ್ಷ ಕಳೆದ ವ್ಯಕ್ತಿ ಮತ್ತು ಭಾರತದ ರಾಷ್ಟ್ರಪತಿಯಾಗಿದ್ದವರು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಈ ಪಕ್ಷದ ಮೇಲೆ ನಿಮಗೆ ಇನ್ನೂ ನಂಬಿಕೆ ಉಳಿದಿದೆಯೇ? ಎಂದು ಓವೈಸಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಉಲ್ಲೇಖಿಸಿ ಪ್ರಶ್ನಿಸಿದರು.

ಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ನಮ್ಮ ಬೆಂಬಲ: ಅಸಾದುದ್ದಿನ್ ಓವೈಸಿಕರ್ನಾಟಕದಲ್ಲಿ ಜೆಡಿಎಸ್ ಪಕ್ಷಕ್ಕೆ ನಮ್ಮ ಬೆಂಬಲ: ಅಸಾದುದ್ದಿನ್ ಓವೈಸಿ

ಬಿಜೆಪಿಗೆ ಪರ್ಯಾಯವಾಗಿ, ಕಾಂಗ್ರೆಸ್ ಅನ್ನು ಹೊರತುಪಡಿಸಿ ನಾವು ಬೇರೆ ಪಕ್ಷವನ್ನು ಕಂಡುಕೊಳ್ಳಬೇಕಿದೆ. ಪರ್ಯಾಯವೆಂದರೆ ಅದು ರಾಜಕೀಯ ಪಕ್ಷಗಳು. ಅವುಗಳನ್ನು ನಾವು ಬಲಪಡಿಸಬೇಕಿದೆ.

congress is finished says assaduddin owaisi

ಮುಸ್ಲಿಮರು ದೇಶದಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ರಾಜಕೀಯ ಶಕ್ತಿಯಾಗಿ ಬೆಳೆಯುವ ಅಗತ್ಯವಿದೆ ಎಂದು ಅವರು ಹೇಳಿದರು.

ಮುಸ್ಲಿಮರು ರಾಜಕೀಯದಲ್ಲಿ ಬೆಳೆಯುವುದು ದೇಶವನ್ನು, ಜಾತ್ಯತೀತತೆಯ ಬೇರನ್ನು ಬಲಪಡಿಸುತ್ತದೆ ಮತ್ತು ಮುಸ್ಲಿಮರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಎಂಐಎಂ ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸದೆಯೇ ಜೆಡಿಎಸ್‌ಗೆ ಬೆಂಬಲ ನೀಡಿದ್ದು ಒಂದು ಕಾರ್ಯತಂತ್ರ. ಈ ಕಾರ್ಯತಂತ್ರ ಸರಿಯಾಗಿತ್ತು ಎಂಬುದನ್ನು ಈಗ ಬಂದಿರುವ ಫಲಿತಾಂಶ ಸಾಬೀತುಪಡಿಸುತ್ತದೆ.

ಎಂಐಎಂಗೆ ಒಂದು ಕ್ಷೇತ್ರ ಬಿಟ್ಟುಕೊಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮುಂದಾಗಿದ್ದರು. ಆದರೆ ಅದನ್ನು ನಿರಾಕರಿಸಿದ್ದೆ ಎಂದು ಓವೈಸಿ ತಿಳಿಸಿದರು.

ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಣವ್ ಮುಖರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ. ಹಡಗೆವಾರ್ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸದಂತೆ ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಕರೆ ನೀಡಿದ್ದರು.

ಅಲ್ಲದೆ, ಭಾರತವು ಹಿಂದೂಗಳ ರಾಷ್ಟ್ರ ಎಂದು ಹೇಳಿದ್ದರು. ಆದರೆ, ಇವುಗಳನ್ನು ತಿಳಿದಿರಬೇಕಾಗಿದ್ದ ಮುಖರ್ಜಿ ಅವರು, ಹೆಗಡೆವಾರ್ ಅವರನ್ನು ಭಾರತದ ಹೆಮ್ಮೆಯ ಪುತ್ರ ಎಂಬುದಾಗಿ ಹೊಗಳಿದ್ದಾರೆ ಎಂದು ಕಿಡಿಕಾರಿದರು.

English summary
AIMIM chief Asaduddin Owaisi on friday said that muslims are need to think of an alternate to the BJP, than Congress. Muslims could no longer trust the congress. The Congress is finished, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X