ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಚ್‌ಎಂಸಿ ಚುನಾವಣೆ ಟಿಆರ್‌ಎಸ್‌ಗೆ ಸ್ಪಷ್ಟ ಸಂದೇಶ!

|
Google Oneindia Kannada News

ಹೈದರಾಬಾದ್, ಡಿಸೆಂಬರ್ 04 : "ಜನರು ಬದಲಾವಣೆ ಬಯಸಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಜಿಎಚ್‌ಎಂಸಿ ಚುನಾವಣೆಯ ಫಲಿತಾಂಶ ಟಿಆರ್‌ಎಸ್‌ ಪಕ್ಷಕ್ಕೆ ರವಾನೆ ಮಾಡಿದೆ" ಎಂದು ತೆಲಂಗಾಣ ಬಿಜೆಪಿ ಸಂಸದ ಡಿ. ಅರವಿಂದ್ ಹೇಳಿದರು.

ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‍ಎಂಸಿ) ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯುತ್ತಿದೆ. ಪ್ರಾಥಮಿಕವಾಗಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. 150 ವಾರ್ಡ್‌ಗಳಿಗೆ ನೆಡೆದ ಚುನಾವಣೆ ಮತ ಎಣಿಕೆಯ ಸ್ಪಷ್ಟ ಫಲಿತಾಂಶ ಸಂಜೆಯ ವೇಳೆಗೆ ಬರುವ ನಿರೀಕ್ಷೆ ಇದೆ.

ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ? ಜಿಎಚ್‌ಎಂಸಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಏಕೆ?

ಎಎನ್‌ಐ ಜೊತೆ ಮಾತನಾಡಿದ ಸಂಸದ ಡಿ. ಅರವಿಂದ್, "ಟಿಆರ್‌ಎಸ್ ಪಕ್ಷಕ್ಕೆ ಇದು ಸ್ಪಷ್ಟವಾದ ಸಂದೇಶ. ಜನರು ಬದಲಾವಣೆಯನ್ನು ಬಯಸಿದ್ದಾರೆ. ತೆಲಂಗಾಣ ರಾಜ್ಯದಲ್ಲಿ ಬದಲಾವಣೆ ಪಕ್ರಿಯೆ ಆರಂಭವಾಗಿದೆ" ಎಂದರು.

ಜಿಎಚ್‌ಎಂಸಿ ಚುನಾವಣೆಯಲ್ಲಿ 100 ಸ್ಥಾನದಲ್ಲಿ ಗೆಲುವು; ಕೆ. ಕವಿತಾ ಜಿಎಚ್‌ಎಂಸಿ ಚುನಾವಣೆಯಲ್ಲಿ 100 ಸ್ಥಾನದಲ್ಲಿ ಗೆಲುವು; ಕೆ. ಕವಿತಾ

Clear Message To TRS That Telangana People Want Change D Arvind

"ಲೋಕಸಭೆ ಚುನಾವಣೆ, ದುಬ್ಬಕ್ಕ ಕ್ಷೇತ್ರದ ಉಪ ಚುನಾವಣೆ, ಈಗ ಜಿಎಚ್‌ಎಂಸಿ ಚುನಾವಣೆಯನ್ನು ನೋಡಿ. ಫಲಿತಾಂಶಕ್ಕಾಗಿ ಸಂಜೆಯ ತನಕ ಕಾಯೋಣ. ಆದರೆ, ಜನರು ಬದಲಾವಣೆ ಬಯಸಿದ್ದಾರೆ ಎಂಬ ಸಂದೇಶ ಸ್ಪಷ್ಟ" ಎಂದು ಸಂಸದರು ತಿಳಿಸಿದರು.

ಜಿಎಚ್‌ಎಂಸಿ ಚುನಾವಣೆ; ಹೈದರಾಬಾದ್‌ನಲ್ಲಿ ಸಂಭ್ರಮಾಚರಣೆ ಇಲ್ಲ! ಜಿಎಚ್‌ಎಂಸಿ ಚುನಾವಣೆ; ಹೈದರಾಬಾದ್‌ನಲ್ಲಿ ಸಂಭ್ರಮಾಚರಣೆ ಇಲ್ಲ!

ಟಿಆರ್‌ಎಸ್ ಪಕ್ಷದ ನಾಯಕಿ ಕೆ. ಕವಿತಾ ಅವರು, "ನಾವು 100 ಸ್ಥಾನಗಳ ನಿರೀಕ್ಷೆಯಲ್ಲಿದ್ದೇವೆ. ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕೆ ಬಂದು ಸುಳ್ಳನ್ನು ಹೇಳಿದ್ದಾರೆ. ಆದರೆ, ಜನರು ಕೆಎಸ್ಆರ್‌ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದಾರೆ" ಎಂದು ಹೇಳಿದ್ದಾರೆ.

150 ವಾರ್ಡ್‌ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಸದ್ಯದ ಮಾಹಿತಿಯಂತೆ ಬಿಜೆಪಿ 51 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಟಿಆರ್‌ಎಸ್ ಪಕ್ಷ 20 ಸ್ಥಾನದಲ್ಲಿ ಮುನ್ನಡೆ ಪಡೆದಿದೆ. ಓವೈಸಿ ಅವರ ಪಕ್ಷ 8 ಮತ್ತು ಕಾಂಗ್ರೆಸ್ 3 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.

English summary
GHMC results are a clear message to TRS that people want change. The transformation has started in the state of Telangana said Telangana BJP MP D.Arvind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X