ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ಶ್ವೇತಾ ಬಸುಗೆ ಕೋರ್ಟಿನಿಂದ ಕ್ಲೀನ್ ಚಿಟ್

By Mahesh
|
Google Oneindia Kannada News

ಹೈದರಾಬಾದ್, ಡಿ.7: ವೇಶ್ಯಾವಾಟಿಕೆ ಆರೋಪ ಹೊತ್ತಿದ್ದ ಟಾಲಿವುಡ್, ಬಾಲಿವುಡ್ ನಟಿ ಶ್ವೇತಾ ಬಸು ಪ್ರಸಾದ್ ಗೆ ಸ್ಥಳೀಯ ಕೋರ್ಟಿನಿಂದ ಕ್ಲೀನ್ ಚಿಟ್ ಸಿಕ್ಕಿದೆ. ಕೋರ್ಟ್ ಆದೇಶದ ನಂತರ ಶ್ವೇತಾ ಈಗ ವೃತ್ತಿ ಬದುಕಿನ ಹೊಸ ಆಧ್ಯಾಯ ಆರಂಭವಾಗುವ ಸೂಚನೆ ಸಿಕ್ಕಿದ್ದು, ಆಫರ್ ಗಳು ಹುಡುಕಿಕೊಂಡು ಬರತೊಡಗಿವೆ.

ಸೆಪ್ಟೆಂಬರ್ 3ರಂದು ಹೈದರಾಬಾದಿನ ಬಂಜಾರ ಹಿಲ್ಸ್ ನ ಹೋಟೆಲ್ ವೊಂದರಲ್ಲಿ ಬಂಧನಕ್ಕೀಡಾಗಿದ್ದ ನಟಿ ಶ್ವೇತಾ ಬಸು ಪ್ರಸಾದ್ ಅವದು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿರುವ ಬಗ್ಗೆ ಯಾವುದೇ ಸೂಕ್ತ ಸಾಕ್ಷಿ ಆಧಾರ ಸಿಕ್ಕಿಲ್ಲ ಎಂದು ಸೆಷನ್ಸ್ ಕೋರ್ಟ್ ಅಭಿಪ್ರಾಯಪಟ್ಟಿದೆ.

ಪೊಲೀಸ್ ದಾಳಿ ನಡೆದ ಸಂದರ್ಭದಲ್ಲಿ ನಟಿ ಕೂಡಾ ಹೋಟೆಲ್ ನಲ್ಲೇ ಇದ್ದರು. ಖಾಸಗಿ ಸಮಾರಂಭಕ್ಕೆ ತೆರಳಿದ್ದ ನಟಿಯನ್ನು ಪೊಲೀಸರು ಕರೆದೊಯ್ದು ಎಫ್ ಐಆರ್ ದಾಖಲಿಸಿ ಚಾರ್ಚ್ ಶೀಟ್ ಹಾಕಿದ್ದಾರೆ ಎಂಬ ವಾದಕ್ಕೆ ಈಗ ಪುಷ್ಟಿ ಸಿಕ್ಕಿದೆ. [ಶ್ವೇತಾ ಬಸುರನ್ನು ವೇಶ್ಯೆ ಎಂದವರಿಗೆ ಆಪತ್ತು?]

Shwetha Basu
ಈ ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದ ಬಗ್ಗೆ ಶ್ವೇತಾ ಬಸು ಹರ್ಷ ವ್ಯಕ್ತಪಡಿಸಿದ್ದಾರೆ. 23 ವರ್ಷ ವಯಸ್ಸಿನ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಶ್ವೇತಾ ಅವರು ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪ ಹೊತ್ತಿದ್ದರು. ಕೆಳ ಹಂತದ ನ್ಯಾಯಾಲಯ ಅವರನ್ನು ಪುನರ್ವಸತಿ ಕೇಂದ್ರದಲ್ಲಿ ಇರಿಸುವಂತೆ ಸೆ.30,2014ರಂದು ಆದೇಶಿಸಿತ್ತು. ಅದರೆ, ನಂತರ ಶ್ವೇತಾ ಅವರ ತಾಯಿ ಸಲ್ಲಿಸಿದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಅವರನ್ನು ಪುನರ್ವಸತಿ ಕೇಂದ್ರದಿಂದ ಮನೆಗೆ ಕಳಿಸಲಾಗಿತ್ತು. [ಶ್ವೇತಾ ಬಸು ಪ್ರಸಾದ್ ಗೆ ಕಡೆಗೂ ಕರೆಬಂತು]

ಬಂಧ ಮುಕ್ತರಾದ ಮೇಲೆ ಮಾತನಾಡಿದ್ದ ಶ್ವೇತಾ ಬಸು, ವೇಶ್ಯಾವಾಟಿಕೆ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳೆಲ್ಲವೂ ಸತ್ಯಕ್ಕೆ ದೂರವಾಗಿದೆ. ನಾನು ಯಾವ ಪತ್ರಿಕೆಗೂ ಹೇಳಿಕೆ ನೀಡಿಲ್ಲ. ಇಂಡಸ್ಟ್ರೀ ವಿರುದ್ಧ ಮಾತನಾಡಿಲ್ಲ. ನನ್ನನ್ನು ಯಾರೂ ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಿಲ್ಲ ಎಂದು ಶ್ವೇತಾ ಹೇಳಿದ್ದರು.

ಹಿಂದಿಯಲ್ಲಿ ಮಕ್ ಡಿ ಚಿತ್ರದ ನಟನೆಗಾಗಿ ಬಾಲನಟಿಯಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿರುವ 23 ವರ್ಷ ವಯಸ್ಸಿನ ಶ್ವೇತಾ ಬಸು ಪ್ರಸಾದ್ ಅವರು ಬೆಂಗಾಳಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.ಟಾಲಿವುಡ್ ಹಾಗೂ ಬಾಲಿವುಡ್ ನ ಅನೇಕ ನಟ, ನಟಿಯರು, ಗಣ್ಯರು ಶ್ವೇತಾಗೆ ಬೆಂಬಲ ವ್ಯಕ್ತಪಡಿಸಿದ್ದರು. ಶ್ವೇತಾ ಬಸು ಅವರ ಪ್ರಕರಣದ ಬಗ್ಗೆ ಮಾಧ್ಯಮಗಳು ಅತಿಯಾಗಿ ಸ್ಪಂದಿಸಿವೆ ಎಂದು ಕಿಡಿಕಾರಿದ್ದರು.

English summary
Hyderabad: A local court has given clean chit to Tollywood actress Swetha Basu Prasad who was arrested for alleged prostitution in a star hotel in the city. The actress filed a petition in a local court challenging Errum Manzil court orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X