ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ತೂರು ಎನ್ ಕೌಂಟರ್: ಎಸ್ ಟಿಎಫ್ ಮೇಲೆ ಎಫ್ ಐಆರ್

By Mahesh
|
Google Oneindia Kannada News

ಹೈದರಾಬಾದ್, ಏ.16: ತಮಿಳುನಾಡು ಮೂಲದ ಕೂಲಿ ಕಾರ್ಮಿಕ ಹತ್ಯೆ ಆರೋಪದ ಮೇಲೆ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರ ಮೇಲೆ ಕೊಲೆ ಆರೋಪ ಹೊರೆಸಿ ಪ್ರಕರಣ ದಾಖಲಿಸಲಾಗಿದೆ. ಎಫ್ ಐಆರ್ ಹಾಕಿ ತನಿಖೆ ಕೈಗೊಳ್ಳಲಾಗಿದೆ ಎಂದು ಚಿತ್ತೂರು ಪೊಲೀಸರು ಆಂಧ್ರಪ್ರದೇಶ ಹೈಕೋರ್ಟಿಗೆ ಹೇಳಿದ್ದಾರೆ.

ಚಿತ್ತೂರು ಎನ್‌ಕೌಂಟರ್‌ನಲ್ಲಿ ಮೃತ ಕೂಲಿಕಾರ್ಮಿಕ, ತಮಿಳುನಾಡು ನಿವಾಸಿ ಶಶಿಕುಮಾರ್‌ ಅವರ ಪತ್ನಿ ಮುನಿಯಮ್ಮಾಳ್ಎಂಬುವರು ಎಸ್ ಟಿಎಫ್ ವಿರುದ್ಧ ದೂರು ಸಲ್ಲಿಸಿದ್ದರು. ದೂರಿನ ಮೇರೆಗೆ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಅಡ್ವೋಕೇಟ್ ಜನರಲ್(ಎಎಜಿ) ಡಿ.ಶ್ರೀನಿವಾಸ್ ಅವರು ಬುಧವಾರ ಮುಖ್ಯ ನ್ಯಾಯಾಧೀಶ ಕಲ್ಯಾಣ ಜ್ಯೋತಿ ಸೇನ್‌ಗುಪ್ತಾ ಮತ್ತು ನ್ಯಾ.ಪಿ.ವಿ.ಸಂಜಯಕುಮಾರ ಅವರನ್ನೊಳಗೊಂಡ ವಿಭಾಗೀಯ ಪೀಠಕ್ಕೆ ತಿಳಿಸಿದರು. [ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]

Chittoor encounter: FIR filed against STF personnel for murder

ಎಸ್‌ಟಿಎಫ್ ಸಿಬ್ಬಂದಿಗಳ ವಿರುದ್ಧ ಐಪಿಸಿಯ ಕಲಂ 302,364 ಮತ್ತು 34ರಡಿ ಎಫ್‌ಐಆರ್ ದಾಖಲಾಗಿದೆ. ತನಿಖೆಯನ್ನು ವಿಶೇಷ ತಂಡ ಕೈಗೊಳ್ಳಲಿದೆ ಎಂದು ಎಎಜಿ ಶ್ರೀನಿವಾಸ್ ಹೇಳಿದ್ದಾರೆ.

ಚಿತ್ತೂರು ಜಿಲ್ಲೆಯ ತಿರುಪತಿ ಸಮೀಪದ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಕಳ್ಳಸಾಗಾಣಿಕೆ ಮಾಡುವವರ ತಂಡದ ಮೇಲೆ ದಾಳಿ ನಡೆಸಿದ್ದ ಅರಣ್ಯ ಅಧಿಕಾರಿಗಳು ಹಾಗೂ ಎಸ್ ಟಿಎಫ್ ಸುಮಾರು 20ಜನರನ್ನು ಹತ್ಯೆ ಮಾಡಿತ್ತು.


ಎನ್ ಕೌಂಟರ್ ಹೆಸರಿನಲ್ಲಿ ಅಮಾಯಕ ಕೂಲಿ ಕಾರ್ಮಿಕರನ್ನು ಹತ್ಯೆ ಮಾಡಲಾಗಿದೆ ಎಂದು ತಮಿಳುನಾಡಿನಲ್ಲಿ ಕೂಗೆದ್ದಿತ್ತು. ಭಾರಿ ಪ್ರತಿಭಟನೆ ನಂತರ ಆಂಧ್ರಪ್ರದೇಶ ಎಸ್ ಟಿಎಫ್ ವಿರುದ್ಧ ಕ್ರಮಕ್ಕೆ ಚಂದ್ರಬಾಬು ನಾಯ್ಡು ಸರ್ಕಾರ ಮುಂದಾಯಿತು.

ತಿರುನಲ್ವೇಲಿ, ತಿರುವಣ್ಣಾಮಲೈ, ಸೇಲಂ ಮೂಲದ ಮೃತ ಕೂಲಿ ಕಾರ್ಮಿಕರಿಗೆ ತಮಿಳುನಾಡಿನ ಪನ್ನೀರ್ ಸೆಲ್ವಂ ಸರ್ಕಾರ ತಲಾ 3 ಲಕ್ಷ ರು ಪರಿಹಾರ ಧನ ಘೋಷಿಸಿತ್ತು.

English summary
An FIR has been filed against Special Task Force policemen for killing 20 alleged red sander smugglers on April 7 in Chhittor district, police told Andhra Pradesh High Court on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X