ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓವೈಸಿ ವಿರುದ್ಧ 'ರೌಡಿ' ನಿರ್ದೇಶಕ ವರ್ಮಾ ಕಣಕ್ಕೆ?

By ಜೇಮ್ಸ್ ಮಾರ್ಟಿನ್
|
Google Oneindia Kannada News

ಹೈದರಾಬಾದ್, ಮಾ.27: ಆಂಧ್ರಪ್ರದೇಶದ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಬೆನ್ನ ಹಿಂದಿರುವ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮತ್ತೊಮ್ಮೆ ವಾಕ್ ಪ್ರವಾಹದ ಮೂಲಕ ಕಿಚ್ಚು ಹಬ್ಬಿಸಿದ್ದಾರೆ. ಪವನ್ ಕಲ್ಯಾಣ್ ಹಾಗೂ ಅವರ ಜನ ಸೇನಾ ಪಕ್ಷದ ಪರ ಹೇಳಿಕೆ ನೀಡುವ ಭರದಲ್ಲಿ ಕೇಂದ್ರ ಸಚಿವ ಚಿರಂಜೀವಿ ಅವರ ವಿರುದ್ಧ ನೇರ ದಾಳಿಗಿಳಿದಿದ್ದಾರೆ.

ಸದ್ಯಕ್ಕೆ ಏ.4 ರಂದು ರೌಡಿ ಚಿತ್ರವನ್ನು ತೆರೆಗೆ ತರುತ್ತಿರುವ ರಾಮ್ ಗೋಪಾಲ್ ವರ್ಮಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಪವನ್ ಕಲ್ಯಾಣ್ ನೀಡಿದ್ದ' ಕಾಂಗ್ರೆ ಹಠಾವೋ ದೇಶ್ ಬಚಾವೋ' ಹೇಳಿಕೆಯ ಮುಂದುವರೆದ ಭಾಗದಂತೆ ' ಚಿರಂಜೀವಿ ಹಠಾವೋ ರಾಷ್ಟ್ರ(ಆಂಧ್ರಪ್ರದೇಶ) ಬಚಾವೋ' ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.

ಮಾ.25ರಂದು ರೌಡಿ ಚಿತ್ರದ ಪ್ರಚಾರಕ್ಕೆ ಬಂದಿದ್ದ ನಾನು ಬಾಲಾಜಿ ತಿರುಪತಿ ವಿಮಾನ ನಿಲ್ದಾಣ ನೋಡಿ ದುಃಖವಾಯಿತು ತೆಲಂಗಾಣದ ಷಂಶಾಬಾದ್ ವಿಮಾನ ನಿಲ್ದಾಣ ನೋಡಿ ಹೊಟ್ಟೆ ಕಿಚ್ಚಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ನಂತರ ಚಿರಂಜೀವಿ ವಿರುದ್ಧ ಹೇಳಿಕೆ ನೀಡಿದ್ದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಈಗ ಗುರುವಾರ ಬೆಳಗ್ಗೆ ಮತ್ತೊಂದು ಗಾಳಿಸುದ್ದಿಗೆ ಪ್ರತಿಕ್ರಿಯಿಸಿ, ನಾನು ರಾಜಕೀಯಕ್ಕೆ ಇಳಿಯುವುದಿಲ್ಲ. ಗಾಳಿಸುದ್ದಿ ಹರಡಿರುವಂತೆ ನಾನು ಅಸಾವುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆರ್ ಜಿವಿ ಅವರು ಈ ರೀತಿ ಹೇಳಿಕೆ ನೀಡಿದ್ದು ಏಕೆ? ಪವನ್ ಕಲ್ಯಾಣ್ ಪುಸ್ತಕ'ISM' ಬಿಡುಗಡೆಗೆ ಇದು ಪ್ರಚಾರ ತಂತ್ರವೇ ಎಂದು ಗುಸುಗುಸು ಸುದ್ದಿ ಹಬ್ಬಿದೆ

ರಾಜಕೀಯದಿಂದ ನಾನು ದೂರ : ಆರ್ ಜಿವಿ

ರಾಜಕೀಯದಿಂದ ನಾನು ದೂರ : ಆರ್ ಜಿವಿ

ರಾಜಕೀಯದಿಂದ ನಾನು ದೂರ, ಆದರೆ, ಪವನ್ ಕಲ್ಯಾಣ್ ನಿರ್ಣಯಕ್ಕೆ ನನ್ನ ಬೆಂಬಲವಿದೆ ಎಂದ ಆರ್ ಜಿವಿ. ಸತ್ಯ 2 ಚಿತ್ರ ಬಿಡುಗಡೆ ಸಂದರ್ಭದಲ್ಲೂ ಅನಾವಶ್ಯವಾಗಿ ಚಿರಂಜೀವಿ ಹೆಸರನ್ನು ಟ್ವಿಟ್ಟರ್ ಗೆ ಎಳೆ ತಂದಿದ್ದ ಆರ್ ಜಿವಿ ಅವರು ಪವನ್ ಕಲ್ಯಾಣ್ ಅವರು ಚಿರಂಜೀವಿಗಿಂತ ಜನಪ್ರಿಯ ಹಾಗೂ ಸಮರ್ಥ ವ್ಯಕ್ತಿ ಎಂದಿದ್ದರು.

ಓವೈಸಿ ವಿರುದ್ಧ ಸ್ಪರ್ಧೆ ಇಲ್ಲ : ಆರ್ ಜಿವಿ

ಹೈದರಾಬಾದಿನಲ್ಲಿ ಅಸಾವುದ್ದೀನ್ ಓವೈಸಿ ವಿರುದ್ಧ ಸ್ಪರ್ಧೆ ಇಲ್ಲ : ಆರ್ ಜಿವಿ ಟ್ವೀಟ್

ಚಿರಂಜೀವಿ ವಿರುದ್ಧ ಆರ್ ಜಿವಿ ಟ್ವೀಟ್

ಚಿರಂಜೀವಿ ವಿರುದ್ಧ ಆರ್ ಜಿವಿ ಟ್ವೀಟ್

ಪವನ್- ಮೋದಿ ಭೇಟಿ, ಬಿಜೆಪಿಗೆ ಬೆಂಬಲ

ಪವನ್- ಮೋದಿ ಭೇಟಿ, ಬಿಜೆಪಿಗೆ ಬೆಂಬಲ

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಆಂಧ್ರಪ್ರದೇಶದ ಹೊಸ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಕಳೆದ ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭೇಟಿ ನಂತರ ಮಾತನಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಪವನ್ ಕಲ್ಯಾಣ್ ಅವರು ಮೋದಿ ಅವರಿಗೆ ತಮ್ಮ ಪೂರ್ಣ ಬೆಂಬಲವನ್ನು ಘೋಷಿಸಿದರು. ಅದರೆ, ತಾನು ಸದ್ಯಕ್ಕೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದರು.

ಪವನ್ ಕಲ್ಯಾಣ್ ISM ಪುಸ್ತಕ ಲೋಕಾರ್ಪಣೆ

ಮಾ.27 ರಂದು ಸಂಜೆ ಪವನ್ ಕಲ್ಯಾಣ್ ಹಾಗೂ ರಾಜು ರವಿತೇಜ್ ಅವರು ಬರೆದಿರುವ ಪವನ್ ಕಲ್ಯಾಣ್ ರಚಿಸಿರುವ ISM-Ideologies, Statements and Manifesto ಕೃತಿ ಬಿಡುಗಡೆಯಾಗಲಿದೆ. ಸಂಜೆ 6 ಗಂಟೆ ನಂತರ ಪವನ್ ವೇದಿಕೆ ಏರಿ ಮತ್ತೊಮ್ಮೆ ಭಾಷಣ ಮಾಡುವ ಸಾಧ್ಯತೆಯಿದೆ. ವಿಡಿಯೋ ಇಲ್ಲಿ ನೋಡಿ

English summary
After tweeting Chiranjeevi Hataav Raashtr Bachaav' Ram Gopal Varma took to his Twitter page this morning to refute the rumours that he would contest against controversial Congress leader Asaduddin Owaisi. The Rowdy director tweeted, "Reports suggesting that I am contesting against Asaduddin Owaisi are false."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X