ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಎಸಿಯಲ್ಲಿ ಚೀನಾ ಚಟುವಟಿಕೆ, ಕೇಂದ್ರಕ್ಕೆ ನಾಚಿಕೆಯಾಗಬೇಕು: ಓವೈಸಿ

|
Google Oneindia Kannada News

ಹೈದರಬಾದ್‌ ಜೂನ್ 9: ವಾಸ್ತವಿಕ ಗಡಿ ರೇಖೆ (ಎಲ್ಎಸಿ) ಉದ್ದಕ್ಕೂ ಚೀನಾ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಸಂಸತ್‌ನಲ್ಲಿ ಚರ್ಚಿಸದಿರುವ ಕುರಿತು ಕೇಂದ್ರ ಸರಕಾರದ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾಸುದ್ದೀನ್ ಓವೈಸಿ ತೀವ್ರ ವಾಗ್ದಾಳಿ ನಡೆಸಿದರು.

"ಭಾರತದ ಲಡಾಖ್ ಸಮೀಪ ಚೀನಾ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯ ನಡೆಸುತ್ತಿದೆ. ಇದು ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಲಡಾಖ್ ಸಮೀಪದ ಚೀನಾ ಚಟುವಟಿಕೆಗಳು ಕಣ್ಣು ತೆರೆಸುವಂತಿವೆ. ಇದು ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ವರ್ತನೆ,'' ಎಂದು ಅಮೆರಿಕ ಸೇನೆಯ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್ ಹೇಳಿದ್ದರು.

ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್! ಲಡಾಖ್ ಗಡಿಯಲ್ಲಿ ಚೀನಾ ಬಂತು ಹುಷಾರ್ ಎಂದ ಯುಎಸ್!

ಈ ಕುರಿತು ಪ್ರತಿಕ್ರಿಯಿಸಿರುವ ಅಸಾಸುದ್ದೀನ್ ಓವೈಸಿ, "ಲಡಾಖ್ ಸಮೀಪ ಚೀನಾ ಲಿಬರೇಷನ್ ಆರ್ಮಿ(ಪಿಎಲ್ಎ) ನಡೆಸುತ್ತಿರುವ ಮೂಲ ಸೌಕರ್ಯ ಅಭಿವೃದ್ಧಿ ಬಗ್ಗೆ ಒಬ್ಬ ವಿದೇಶಿ ನಮಗೆ ಮಾಹಿತಿ ನೀಡಬೇಕಿದೆ. ಈ ಬಗ್ಗೆ ಕೇಂದ್ರ ಸರಕಾರಕ್ಕೆ ನಾಚಿಕೆ ಆಗಬೇಕು,'' ಎಂದು ಗುಡುಗಿದರು.

ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಾಣ; ಸರ್ಕಾರದ ಉತ್ತರ! ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ಸೇತುವೆ ನಿರ್ಮಾಣ; ಸರ್ಕಾರದ ಉತ್ತರ!

"ಲಡಾಖ್‌ ಚೀನಾದ ಸಿದ್ಧತೆಗಳು ಮತ್ತು ಚಟುವಟಿಕೆಗಳ ಬಗ್ಗೆ ಅಮೆರಿಕ ಸೇನೆಯ ಕಮಾಂಡಿಂಗ್ ಜನರಲ್ ಒಬ್ಬರು ನಮಗೆ ಹೇಳಬೇಕಿದೆ. ಇದು ಎಚ್ಚರಿಕೆಯ ಗಂಟೆ ಎಂದು ಹಾಗೂ ಕಣ್ಣು ತೆರೆಸುವಂತ್ತದ್ದು ಎಂದು ಅವರು ನಮಗೆ ತಿಳಿಸಬೇಕಿದೆ. ಏಕೆಂದರೆ ನಮ್ಮ ವಾಗ್ಮಿ ಪ್ರಧಾನಿಗಳು ಚೀನಾ ಎಂದು ಹೆಸರು ಉಚ್ಚರಿಸಲು ಮರೆತಿರುವಂತಿದೆ,'' ಎಂದು ವ್ಯಂಗ್ಯವಾಡಿದರು.

ಮೋದಿ ಸರಕಾರವು ದುರ್ಬಲವಾಗಿದೆ

ಮೋದಿ ಸರಕಾರವು ದುರ್ಬಲವಾಗಿದೆ

"ಸಂಸತ್‌ನಲ್ಲಿ ಈ ವಿಷಯದ ಕುರಿತು ನನ್ನ ಪ್ರಶ್ನೆಗಳನ್ನು ಉತ್ತರಿಸಲು ನಿರಾಕರಿಸಲಾಯಿತು. ಚೀನಾದ ಗಡಿ ಚಟುವಟಿಕೆಗಳ ಬಗ್ಗೆ ಸಂಸತ್‌ನಲ್ಲಿ ಯಾವುದೇ ಚರ್ಚೆ ನಡೆಯದಿರುವುದು ದುಃಖಕರವಾಗಿದೆ. ವಿದೇಶಿಯೊಬ್ಬರು ಈ ಬಗ್ಗೆ ನಮಗೆ ಹೇಳಬೇಕಿರುವುದು ಕೇಂದ್ರ ಸರಕಾರಕ್ಕೆ ನಾಚಿಕೆ ತರಬೇಕು,'' ಎಂದು ದೂರಿದರು.

"ಮೋದಿ ಸರಕಾರವು ದುರ್ಬಲವಾಗಿದೆ ಮತ್ತು ಅಂಜುಬುರಕವಾಗಿದೆ ಮತ್ತು ಅಪ್ರಮಾಣಿಕವಾಗಿದೆ. ಚೀನಾ ಕುರಿತು ಭಾರತೀಯರನ್ನು ಕತ್ತಲ್ಲಲ್ಲಿ ಇಡಲಾಗುತ್ತಿದೆ. ರಾಷ್ಟ್ರೀಯ ಭದ್ರತೆಯು ಒಂದು ಪಕ್ಷದ ಸಮಸ್ಯೆಯಲ್ಲ. ಇದು ಪ್ರತಿಯೊಬ್ಬ ಭಾರತೀಯನಿಗೆ ಸಂಬಂಧಿಸಿದ್ದಾಗಿದೆ,'' ಎಂದು ಅಸಾಸುದ್ದೀನ್ ಓವೈಸಿ ಟ್ವೀಟ್ ಮಾಡಿದ್ದಾರೆ.

ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ

ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ

ಹಿಮಾಲಯದಲ್ಲಿ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಚೀನಾ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಅಮೆರಿಕ ಸೇನೆಯ ಕಮಾಂಡಿಂಗ್ ಜನರಲ್ ಚಾರ್ಲ್ಸ್ ಎ ಫ್ಲಿನ್, "ಭಾರತದ ಲಡಾಖ್ ಸಮೀಪ ಚೀನಾ ಮೂಲ ಸೌಕರ್ಯಗಳ ನಿರ್ಮಾಣ ಕಾರ್ಯ ನಡೆಸುತ್ತಿದೆ. ಇದು ಭಾರತದ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿದೆ. ಲಡಾಖ್ ಸಮೀಪದ ಚೀನಾ ಚಟುವಟಿಕೆಗಳು ಕಣ್ಣು ತೆರೆಸುವಂತಿವೆ. ಇದು ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ವರ್ತನೆ,'' ಎಂದು ವ್ಯಾಖ್ಯಾನಿಸಿದ್ದಾರೆ.

ಚೀನಾದಿಂದ ಮೂಲ ಸೌಕರ್ಯಗಳ ನಿರ್ಮಾಣ

ಚೀನಾದಿಂದ ಮೂಲ ಸೌಕರ್ಯಗಳ ನಿರ್ಮಾಣ

"ವೆಸ್ಟರ್ನ್ ಥಿಯೇಟರ್ ಕಮಾಂಡ್‌ನಲ್ಲಿ ಚೀನಾ ನಿರ್ಮಿಸುತ್ತಿರುವ ಮೂಲಸೌಕರ್ಯಗಳು ಎಚ್ಚರಿಕೆ ಗಂಟೆಯಾಗಿದೆ ಎಂದು ನನಗೆ ಅನಿಸುತ್ತದೆ. ಅದು ಎಲ್ಲಾ ಕಡೆ ಮಿಲಿಟರಿ ಶಸ್ತ್ರಾಗಾರಗಳನ್ನು ನಿರ್ಮಿಸಿದಂತೆಯೇ , ಇಲ್ಲಿ ಕೂಡ ನಿರ್ಮಿಸುತ್ತಿದೆ. ಇದನ್ನು ನಾವು ಪ್ರಶ್ನಿಸಬೇಕಿದೆ," ಎಂದು ಏಷ್ಯಾ ಪೆಸಿಫಿಕ್ ಪ್ರದೇಶದ ಸೇನಾ ಚಟುವಟಿಕೆಗಳ ಬಗ್ಗೆ ನಿಗಾವಹಿಸಿರುವ ಜನರಲ್ ಚಾರ್ಲ್ಸ್ ಎ ಫ್ಲಿನ್ ತಿಳಿಸಿದ್ದಾರೆ.

ಭಾರತ-ಅಮೆರಿಕ ಒಟ್ಟಿಗೆ ಕೆಲಸ ಮಾಡಬೇಕಿದೆ

ಭಾರತ-ಅಮೆರಿಕ ಒಟ್ಟಿಗೆ ಕೆಲಸ ಮಾಡಬೇಕಿದೆ

"ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾದ ದ್ರೋಹದ ನಡೆಯು ಹಾಗೂ ಅಸ್ಥಿರಗೊಳಿಸುವ ಮತ್ತು ವಿನಾಶಕಾರಿ ವರ್ತನೆಯು ಸರಿಯಲ್ಲ. ಚೀನಾ ಪ್ರದರ್ಶಿಸುತ್ತಿರುವ ಆ ವಿನಾಶಕಾರಿ ಮತ್ತು ಭ್ರಷ್ಟ ನಡೆಗೆ ಪ್ರತಿಯಾಗಿ ಭಾರತ ಮತ್ತು ಅಮೆರಿಕವು ಒಟ್ಟಿಗೆ ಕೆಲಸ ಮಾಡುವುದು ಸೂಕ್ತ,'' ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಪಗ್ರಹ ಚಿತ್ರಗಳಿಂದ ಪತ್ತೆ

ಉಪಗ್ರಹ ಚಿತ್ರಗಳಿಂದ ಪತ್ತೆ

ಇನ್ನೊಂದೆಡೆ ಪೂರ್ವ ಲಡಾಖ್‌ನ ಪ್ಯಾಂಗಾಂಗ್ ತ್ಸೊ ಸರೋವರದ ಉದ್ದಕ್ಕೂ ಚೀನಾ ಲಿಬರೇಷನ್ ಆರ್ಮಿ ಯೋಧರು ಬೃಹತ್ ಸೇತುವೆ ನಿರ್ಮಾಣ ಮಾಡುತ್ತಿರುವುದು ಉಪಗ್ರಹ ಚಿತ್ರಗಳಿಂದ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಭಾರತೀಯ ಸೇನಾ ಪಡೆಗಳ ಜತೆ ಚೀನಾ ನಿರಂತರ ಸಂಘರ್ಷದಲ್ಲಿ ತೊಡಗಿದೆ. ಈ ಭಾಗದಲ್ಲಿ ಮೂಲ ಸೌಕರ್ಯಗಳ ನಿರ್ಮಾಣದ ಮೂಲಕ ಸೇನಾ ಜಮಾವಣೆ, ಸೇನಾ ಉಪಕರಣಗಳ ಸಂಗ್ರಹ ಮತ್ತು ಸಾಗಾಟಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಜತೆಗೆ ತನ್ನ ಭಾಗದ ಯುದ್ಧ ಭೂಮಿಯನ್ನು ಹಾಗೂ ರಸ್ತೆ ಮೂಲ ಸೌಕರ್ಯವನ್ನು ಅತ್ಯತ್ತಮವಾಗಿ ಚೀನಾ ಅಭಿವೃದ್ಧಿಪಡಿಸುತ್ತಿದೆ. ಇದು ಭಾರತದ ಪಾಲಿಗೆ ಚಿಂತಿಸಬೇಕಾದ ವಿಷಯವಾಗಿದೆ.

English summary
Asaduddin Owaisi lashed out at the central government for denying discussion in Parliament on Chinese activity across the Line of Actual Control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X