ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗನ್ ದ್ವೇಷ ರಾಜಕಾರಣಕ್ಕೆ ಬಲಿಯಾಗಲಿದೆ ನಾಯ್ಡು ಮನೆ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 24: ಜಗನ್ ಮೋಹನ್ ರೆಡ್ಡಿ ದ್ವೇಷ ರಾಜಕಾರಣಕ್ಕೆ ಚಂದ್ರಬಾಬು ನಾಯ್ಡು ಮನೆ ಬಲಿಯಾಗಲಿದೆ.

ನಿಯಮಬಾಹಿರವಾಗಿ ಕೃಷ್ಣಾ ನದಿ ತೀರದಲ್ಲಿ ನಿರ್ಮಿಸಲಾಗಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನಿವಾಸ ಧ್ವಂಸಕ್ಕೆ ನಿರ್ಧರಿಸಲಾಗಿದ್ದು, 7 ದಿನಗಳ ಒಳಗಾಗಿ ಮನೆ ಖಾಲಿ ಮಾಡುವಂತೆ ಸೂಚಿಸಿ ಜಗನ್‌ ಸರ್ಕಾರ ಮತ್ತೊಮ್ಮೆ ನೋಟಿಸ್‌ ನೀಡಿತ್ತು.

ಜಗನ್ ಮಹತ್ವದ ನಿರ್ಣಯ, ಟಿಟಿಡಿ ಮಂಡಳಿಗೆ ಸುಧಾಮೂರ್ತಿ ನೇಮಕಜಗನ್ ಮಹತ್ವದ ನಿರ್ಣಯ, ಟಿಟಿಡಿ ಮಂಡಳಿಗೆ ಸುಧಾಮೂರ್ತಿ ನೇಮಕ

ಈಗಾಗಲೇ ಚಂದ್ರಬಾಬು ನಾಯ್ಡು ಮನೆವರೆಗೂ ತೆರವು ಕಾಮಗಾರಿ ಬಂದಿದ್ದು ಶೀಘ್ರವೇ ಮನೆಯನ್ನು ತೆರವುಗೊಳಿಸಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೃಷ್ಣಾ ನದಿ ತೀರದಲ್ಲಿ ಇಂಥದ್ದೇ ಇನ್ನೂ 24 ಅಕ್ರಮ ಕಟ್ಟಡಗಳಿವೆ. ಎಪಿಸಿಆರ್‌ಡಿಎ ಈ ಕುರಿತು ಅಧಿಕೃತ ಮಾಹಿತಿ ನೀಡುತ್ತಿದ್ದಂತೆಯೇ ತೆರವು ಕಾರ್ಯ ಆರಂಭವಾಗುತ್ತದೆ. ನೋಟಿಸ್ ನೀಡಿದರೂ ಮನೆ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಐದು ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.

 ನಾಯ್ಡು ನಿವಾಸದ ಗೋಡೆ ಮೇಲೆ ಶೋಕಾಸ್ ನೋಟಿಸ್

ನಾಯ್ಡು ನಿವಾಸದ ಗೋಡೆ ಮೇಲೆ ಶೋಕಾಸ್ ನೋಟಿಸ್

ಈ ಬಗ್ಗೆ ಆಂಧ್ರಪ್ರದೇಶ ರಾಜಧಾನಿ ಪ್ರಾಂತ್ಯದ ಅಭಿವೃದ್ಧಿ ಪ್ರಾಧಿಕಾರ ನಾಯ್ಡು ನಿವಾಸದ ಮಾಲೀಕ ಲಿಂಗಮನೇನಿ ರಮೇಶ್‌ಗೆ ನೋಟಿಸ್‌ ನೀಡಿದೆ. ನಾಯ್ಡು ನಿವಾಸದಲ್ಲಿ ಯಾರೂ ಇಲ್ಲದ ಕಾರಣ ಈ ಕುರಿತಾದ ಆಯುಕ್ತರ ನೋಟಿಸ್‌ ಅನ್ನು ಉಂಡವಳ್ಳಿ ಗ್ರಾಮದಲ್ಲಿರುವ ನಾಯ್ಡು ನಿವಾಸದ ಗೋಡೆ ಮೇಲೆ ಅಂಟಿಸಲಾಗಿದೆ. ಜೂ.27ರಂದು ಈ ಕುರಿತು ಎಪಿಸಿಆರ್‌ಡಿ ಶೋಕಾಸ್‌ ನೋಟಿಸ್‌ ರವಾನಿಸಿತ್ತು.

 2016ರಲ್ಲಿ ನಾಯ್ಡು ಮನೆ ಖಾಲಿ ಮಾಡಿದ್ದರು

2016ರಲ್ಲಿ ನಾಯ್ಡು ಮನೆ ಖಾಲಿ ಮಾಡಿದ್ದರು

ಚಂದ್ರಬಾಬು ನಾಯ್ಡು 2016ರಲ್ಲಿಯೇ ಆ ಮನೆಯನ್ನು ಖಾಲಿ ಮಾಡಿ ಹೈದರಾಬಾದ್‌ಗೆ ಹೋಗಿದ್ದರು. ಜಗನ್ ಮೋಹನ್ ರೆಡ್ಡಿ ಸರ್ಕಾರ ಈ ಮೊದಲೇ ನೀಡಿರುವ ನೋಟಿಸ್‌ನಂತೆ ತೆರವು ಕಾರ್ಯ ಆರಂಭಿಸಿದ್ದಾರೆ.

ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು?ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು?

 ಚಂದ್ರಬಾಬು ನಾಯ್ಡು ನಿವಾಸದಲ್ಲಿ ಯಾರಿಗೆ ಸೇರಿದ್ದು?

ಚಂದ್ರಬಾಬು ನಾಯ್ಡು ನಿವಾಸದಲ್ಲಿ ಯಾರಿಗೆ ಸೇರಿದ್ದು?

ಲಿಂಗಮನೇನಿ ರಮೇಶ್ ಗೆ ನಿವಾಸ ಸೇರಿದ್ದಾಗಿದೆ. ಸೆ.19ರಂದು ಏಳು ದಿನಗಳೊಳಗಾಗಿ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಇಷ್ಟೇ ಅಲ್ಲದೇ ಚಂದ್ರಬಾಬು ನಾಯ್ಡು ಜನರನ್ನು ಭೇಟಿಯಾಗಲು ಹಾಗೂ ಪಕ್ಷದ ಚಟುವಟಿಕೆಗಳಿಗಾಗಿ ನಿರ್ಮಿಸಿರುವ 'ಪ್ರಜಾ ವೇದಿಕೆ'ಯ ಕಟ್ಟಡವೂ ಈ ನದಿ ಪ್ರದೇಶದಲ್ಲೇ ಇದೆ. ಹೀಗಾಗಿ ಮನೆಯೊಂದಿಗೆ ಅವರು ತಮ್ಮ ಕಚೇರಿಯನ್ನೂ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇನ್ನು ಚಂದ್ರಬಾಭು ನಾಯ್ಡು ಪಕ್ಷದ ಚಟುವಟಿಕೆಗಳಿಗಾಗಿ ಈ ಜಾಗ ಬಿಟ್ಟುಕೊಡಬೇಕೆಂದು ಮಾಜಿ ಸಿಎಂ ನಾಯ್ಡು ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎನ್ನಲಾಗಿದೆ.

 ಲಿಂಗಮನೇನಿ ರಮೇಶ್‌ಗೆ ಜೂನ್ 27ಕ್ಕೆ ಮೊದಲ ನೋಟಿಸ್

ಲಿಂಗಮನೇನಿ ರಮೇಶ್‌ಗೆ ಜೂನ್ 27ಕ್ಕೆ ಮೊದಲ ನೋಟಿಸ್

ಜೂನ್ 27ಕ್ಕೆ ಜಗನ್ ಸರ್ಕಾರದಿಂದ ಮೊದಲ ನೋಟಿಸ್ ಬಂದಿತ್ತು. ಒಟ್ಟು ಆರು ಎಕರೆ ಪ್ರದೇಶದಲ್ಲಿ ಸ್ವಿಮಿಂಗ್ ಪೂಲ್, 10 ತಾತ್ಕಾಲಿಕ ಶೆಡ್‌ಗಳು, ನದಿಯ 100 ಮೀಟರ್ ವ್ಯಾಪ್ತಿಯಲ್ಲಿ ಇವೆಲ್ಲವನ್ನು ಒಪ್ಪಿಗೆ ಇಲ್ಲದೆ ನಿರ್ಮಿಸಲಾಗಿದೆ. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿ ವಾಸವಾಗಿದ್ದರು. ಅಮರಾವಾತಿಯಿಂದ 32 ಕಿ.ಮೀ ದೂರದಲ್ಲಿದೆ.

English summary
Demolition crews have began taking aside one after the other illegal homes constructed alongside the ecologically fragile Krishna river in Andhra Pradesh’s Amaravati.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X