ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ: ಚಂದ್ರಬಾಬು ನಾಯ್ಡು

|
Google Oneindia Kannada News

ಹೈದರಾಬಾದ್, ಮೇ, 28: 2019ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆಂಧ್ರಪ್ರದೇಶ, ತೆಲಂಗಾಣ ಮತ್ತು ಇತರೆ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ, ಅವರು ಕರ್ನಾಟಕದಲ್ಲಿ ಅಧಿಕಾರ ಪಡೆದುಕೊಳ್ಳಲು ವಿಫಲರಾಗಿದ್ದಾರೆ. ಬಿಜೆಪಿ 2019ರಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಅವರು ಹೇಳಿದರು.

ಪ್ರಧಾನಿಯಾಗುವ ಇಚ್ಛೆ ನನಗಿಲ್ಲ: ಚಂದ್ರಬಾಬು ನಾಯ್ಡುಪ್ರಧಾನಿಯಾಗುವ ಇಚ್ಛೆ ನನಗಿಲ್ಲ: ಚಂದ್ರಬಾಬು ನಾಯ್ಡು

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ವಿಫಲವಾದ ಬಿಜೆಪಿ ಇಲ್ಲಿನ ಜನರನ್ನು ನಿರಾಸೆಗೊಳಿಸಿದೆ ಎಂದು ಆರೋಪಿಸಿದರು.

chandrababu naidu said bjp will not come to power in 2019

ಹೊಸ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಮತ್ತು ಪೋಲಾವರಂ ರಾಷ್ಟ್ರೀಯ ನೀರಾವರಿ ಯೋಜನೆಯಂತಹ ಕಾರ್ಯಕ್ರಮಗಳಿಗೆ ಅಗತ್ಯ ಹಣಕಾಸಿನ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸಿಲ್ಲ ಎಂದು ನಾಯ್ಡು ದೂರಿದರು.

ಸತತ 14ನೇ ದಿನವೂ ಏರಿದ ಪೆಟ್ರೋಲ್ ಬೆಲೆ: ಬೆಂಗಳೂರಲ್ಲಿ ಲೀ.ಗೆ 79.4 ರೂ.ಸತತ 14ನೇ ದಿನವೂ ಏರಿದ ಪೆಟ್ರೋಲ್ ಬೆಲೆ: ಬೆಂಗಳೂರಲ್ಲಿ ಲೀ.ಗೆ 79.4 ರೂ.

ಕಪ್ಪು ಹಣ ತರುವ ಕುರಿತು ಅವರು ಮಾತನಾಡುತ್ತಾರೆ. ಆದರೆ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಹಣ ಪಡೆದು ವಂಚಿಸಿದ ವ್ಯಕ್ತಿ ದೇಶವನ್ನೇ ಬಿಟ್ಟು ಹೋಗಿದ್ದಾನೆ. ಜಿಎಸ್‌ಟಿ ಕೂಡ ಸಾಮಾನ್ಯರ ಜನರಿಗೆ ಹೊರೆಯಾಗಿ ಪರಿಣಮಿಸಿದೆ ಎಂದು ಹೇಳಿದರು.

chandrababu naidu said bjp will not come to power in 2019

ನಾಯ್ಡು ಏಕೆ ದೂರವಾದರೋ? ಆಶ್ಚರ್ಯವಾಗುತ್ತಿದೆ
ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದ ಟಿಡಿಪಿ ಪಕ್ಷವು ಈಗ ಏಕೆ ದೂರವಾಗಿದೆ ಎಂಬುದು ಆಶ್ಚರ್ಯ ಮೂಡಿಸುತ್ತಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಅವರು, ಇದು ಒಳ್ಳೆಯ ಸಂಗತಿಯಲ್ಲ. ಅವರು ಮೈತ್ರಿಕೂಟವನ್ನು ತೊರೆದುಹೋಗಬಾರದಿತ್ತು ಎಂದು ಹೇಳಿದರು.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ವಿರೋಧ ಪಕ್ಷಗಳೆಲ್ಲವೂ ಕೈಜೋಡಿಸಲು ಮುಂದಾಗಿವೆಯಲ್ಲ ಎಂಬ ಪ್ರಶ್ನೆಗೆ ಅವರು, ಅವರು ಹೋರಾಟ ನಡೆಸಲಿ. ನಾವು ಆಕ್ಷೇಪ ಹೊಂದಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಪ್ರಬಲವಾದ ವಿರೋಧಪಕ್ಷವಿರಬೇಕು.

ಬಹುಶಃ ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ ಹೀನಾಯ ಸ್ಥಿತಿಗೆ ತಲುಪಿರುವುದು ಅವರೆಲ್ಲರೂ ಒಂದುಗೂಡುವ ಅನಿವಾರ್ಯತೆ ತಂದಿದೆ. ಅದರ ಬಗ್ಗೆ ನಾವು ಚಿಂತಿಸುವ ಅಗತ್ಯವಿಲ್ಲ. ಅವರ ಮೈತ್ರಿಕೂಟ ಪ್ರಭಾವ ಉಂಟುಮಾಡುವುದಿಲ್ಲ ಎಂಬುದನ್ನು ಇತಿಹಾಸ ತೋರಿಸಿದೆ. ಭವಿಷ್ಯದಲ್ಲಿ ಅವರ ಮೈತ್ರಿ ಉಳಿಯುವುದೂ ಸಹ ಖಚಿತವಿಲ್ಲ ಎಂದರು.

English summary
Andhra Pradesh chief minister N Chandrababu naidu said that, The BJP will not be in power in 2019. The centre had failed to give Andhra Pradesh enough funding for its upcoming capital Amaravati and also for other things such as the Polavaram national irrigation project, he alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X