• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಗಾಡ್, ಸೆಕ್ಸ್, ಟ್ರೂಥ್' ಎಂದ ವರ್ಮಾಗೆ ಪೊಲೀಸರಿಂದ ಡ್ರಿಲ್

By Mahesh
|

ಹೈದರಾಬಾದ್, ಫೆಬ್ರವರಿ 20: ಭಾರತೀಯ ಚಿತ್ರರಂಗದ ವಿವಾದಿತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಗಾಡ್ ಸೆಕ್ಸ್ ಅಂಡ್ ಟ್ರೂಥ್' (ಜಿಎಸ್ಟಿ) ಮತ್ತೆ ಸುದ್ದಿಯಲ್ಲಿದೆ. ಆದರೆ, ಈಗ ಇದ್ದಕ್ಕಿದ್ದಂತೆ ಪವರ್ ಸ್ಟಾರ್ ಪವನ್ ಕಲ್ಯಾಣ್ ವಿರುದ್ಧ ತಿರುಗಿ ಬಿದ್ದಿದ್ದು, ಅವರನ್ನು ಪೋರ್ನ್ ಸ್ಟಾರ್ ಎಂದು ಕರೆದಿದ್ದಾರೆ.

ವರ್ಮಾ ಅವರ ಗಾಡ್ ಸೆಕ್ಸ್ ಟ್ರೂಥ್ ವೆಬ್ ಸರಣಿ ವಿರುದ್ಧ ಮಹಿಳಾ ಸಂಘಟನೆಗಳು ದೂರು ನೀಡಿದ್ದರು. ಈ ವಿಷಯವಾಗಿ ಸೆಂಟ್ರಲ್ ಕೈಂ ವಿಭಾಗ ಪೊಲೀಸರ ಮುಂದೆ ಹಾಜರಾಗಿದ್ದ ವರ್ಮಾ ಅವರು ಪೊಲೀಸರ ಪ್ರಶ್ನೆಗಳ ಸುರಿಮಳೆಯನ್ನು ಎದುರಿಸಿದ್ದಾರೆ. ಚಿತ್ರದ ಬಗ್ಗೆ ಆಕ್ಷೇಪವಲ್ಲದೆ, ಚಿತ್ರದ ಆರ್ಥಿಕ ವ್ಯವಹಾರ, ಸೈಬರ್ ಕ್ರೈಂ, ಕಾಪಿರೈಟ್ ಬಗ್ಗೆ ಕೂಡಾ ಪ್ರಶ್ನೆಗಳು ಬಂದಿವೆ.

ಅಮೆರಿಕದ ನೀಲಿಚಿತ್ರ ತಾರೆ ಮಲ್ಕೋವಾ ಅವರು ಯಾವ ದೇಶದಲ್ಲಿದ್ದಾರೆ? ಚಿತ್ರದ ನಿರ್ದೇಶಕರು ಯಾರು? ಚಿತ್ರೀಕರಣ ನಡೆದಿದ್ದು ಎಲ್ಲಿ? ನೀವು ಭಾರತದಿಂದ ಅಲ್ಲಿನ ತಂತ್ರಜ್ಞರು ಮತ್ತು ನಟರು ಹೇಗೆ ಹಣ ಪಾವತಿಸುತ್ತಾರೆ ಎಂಬುದರ ಕುರಿತು ಹೈದರಾಬಾದಿನ ಸೆಂಟ್ರಲ್ ಕೈಂ ವಿಭಾಗ ಪೊಲೀಸರು ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಇನ್ನಷ್ಟು ವಿವರ ಮುಂದಿದೆ.

ನಟಿ ಮಿಯಾ ಮಲ್ಕೋವಾರಿಂದ ಅಭಿನಯ

ನಟಿ ಮಿಯಾ ಮಲ್ಕೋವಾರಿಂದ ಅಭಿನಯ

ಅಮೇರಿಕನ್ ಪೋರ್ನ್ ನಟಿ ಮಿಯಾ ಮಲ್ಕೋವಾ ಅವರ ಜೊತೆ ಕ್ರಾಂತಿಕಾರಿ ಲೈಂಗಿಕತೆ ಕುರಿತು ಆರ್.ಜಿ.ವಿ ಸಿನಿಮಾ ನಿರ್ದೇಶಕ ವರ್ಮಾ ಅಶ್ಲೀಲ ಫೋಟೋಗಳನ್ನ ಮತ್ತು ಸಿನಿಮಾವನ್ನ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲು ಸಿದ್ದವಾಗುತ್ತಿದ್ದಂತೆ ಈ ಬಗ್ಗೆ ಮಹಿಳಾ ಸಂಘಟನೆಗಳಿಂದ ಆಕ್ಷೇಪ, ಪ್ರತಿಭಟನೆ ವ್ಯಕ್ತವಾಗಿತ್ತು. ಚಿತ್ರರಂಗದಲ್ಲಿ ಈ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬಂದಿತ್ತು.

ತಡವಾಗಿ ರಿಲೀಸ್ ಆದ ಜಿಎಸ್ಟಿ

ತಡವಾಗಿ ರಿಲೀಸ್ ಆದ ಜಿಎಸ್ಟಿ

ಜನವರಿ 26ರಂದು ಯೂಟ್ಯೂಬ್ ಸೇರಿದಂತೆ ಎಲ್ಲಾ ವಿಡಿಯೋ ಪ್ರಸಾರ ವೆಬ್ ಗಳಲ್ಲಿ ಗಾಡ್ ಸೆಕ್ಸ್ ಟ್ರೂಥ್ ರಿಲೀಸ್ ಮಾಡಲು ಮುಂದಾಗಿದ್ದ ಆರ್ ಜಿವಿ ನಂತರ ಹಿಂದೇಟು ಹಾಕಿದ್ದರು. ಆದರೆ, ಕೊನೆಗೂ ವೆಬ್ ಸರಣಿ ರಿಲೀಸ್ ಆಗಿ ಉತ್ತಮ ವೀಕ್ಷಣೆ ಪಡೆದುಕೊಂಡಿತು. ಆದರೆ, vimeo ವೆಬ್ ನಲ್ಲಿ ವಿಡಿಯೋ ಡಿಲೀಟ್ ಮಾಡಲಾಗಿದೆ.

ಅಪ್ಲೋಡ್ ಮಾಡಿದ್ದು ಯಾರು?

ಅಪ್ಲೋಡ್ ಮಾಡಿದ್ದು ಯಾರು?

ಈ ವೀಡಿಯೊವನ್ನು ವಿದೇಶದಿಂದ ಅಪ್ಲೋಡ್ ಮಾಡಲಾಗಿದೆ ಎಂದು ನೀವು ಹೇಳುತ್ತೀರಿ. ಯಾರಾದರೂ ಅಪ್ಲೋಡ್ ಮಾಡಿದ್ದರೆ, ಈ ಬಗ್ಗೆ. ವಿಮಿಯೋನಲ್ಲಿನೊಂದಿಗೆ ಒಪ್ಪಂದವಿಲ್ಲ. vimeo ವೆಬ್ ಸೈಟ್ಗೆ ಲಿಂಕ್ ಏಕೆ? ಕಂಪನಿಯು ನಿಮಗೆ ಏನನ್ನಾದರೂ ಪಾವತಿಸಿದಿಯೇ? ಅಥವಾ ನೀವು ಆ ವೆಬ್ ಸೈಟಿ ಮೊತ್ತ ಪಾವತಿಸಿದ್ದೀರಾ? ಎಂದು ವರ್ಮಾರನ್ನು ಪೊಲೀಸರು ಪ್ರಶ್ನಿಸಿದ್ದಾರೆ.

ವಿದೇಶದಲ್ಲಿ ಚಲನಚಿತ್ರ ನಿರ್ಮಿಸಿದ್ದೇವೆ

ವಿದೇಶದಲ್ಲಿ ಚಲನಚಿತ್ರ ನಿರ್ಮಿಸಿದ್ದೇವೆ

ರಾಮ್ ಗೋಪಾಲ್ ವರ್ಮಾ ಅವರು ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಚುಟುಕಾಗಿ ಮಾತ್ರ ಉತ್ತರಿಸಿದ್ದು, ನಾನು ವಿದೇಶದಲ್ಲಿ ಚಲನಚಿತ್ರ ನಿರ್ಮಿಸಿದ್ದೇವೆ ಮತ್ತು ಭಾರತೀಯ ಕಾನೂನುಗಳು ನನಗೆ ಅನ್ವಯಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ವಿದೇಶಿ ದೇಶಗಳಲ್ಲಿ ಚಲನಚಿತ್ರ ಅಥವಾ ವೆಬ್ ಸರಣಿ ನಿರ್ಮಿಸಿದ್ದರ ಬಗ್ಗೆ ಸಾಕ್ಷಿ ಒದಗಿಸಿ ಎಂದು ವರ್ಮಾ ಅವರಿಗೆ ಕೇಳಲಾಯಿತು.

ಸುಮಾರು 24 ಪ್ರಶ್ನೆಗಳನ್ನು ಕೇಳಿದ್ದಾರೆ

ಸುಮಾರು 24 ಪ್ರಶ್ನೆಗಳನ್ನು ಕೇಳಿದ್ದಾರೆ

ವರ್ಮಾ ಅವರಿಗೆ ವಿಡಿಯೋದಿಂದ ಉಂಟಾಗಿರುವ ಸೈಬರ್ ಕಾನೂನು ಉಲ್ಲಂಘನೆ, ವಿದೇಶಿ ಕಲಾವಿದರಿಗೆ ಹಣ ಸಂದಾಯ, ವಿದೇಶದಲ್ಲಿ ಚಿತ್ರೀಕರಣಕ್ಕೆ ಅನುಮತಿ, ಈ ರೀತಿ ವೆಬ್ ಸರಣಿಗಳಿಗೆ ಸೆನ್ಸಾರ್ ಇಲ್ಲವೇ? ಸೇರಿದಂತೆ ಅನೇಕ ವಿಷಯಗಳ ಬಗ್ಗೆ 24ಕ್ಕೂ ಅಧಿಕ ಪ್ರಶ್ನೆಗಳನ್ನು ಕೇಳಲಾಯಿತು. ವಿಚಾರಣೆ ಬಳಿಕ ಅವರ ಮೊಬೈಲ್ ಫೋನ್, ಲ್ಯಾಪ್ ಟಾಪ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಜಾರಿಯಲ್ಲಿದೆ.

English summary
Ram Gopal Verma, the controversial director of God, Sex and Truth. Web series recently appeared before Cyber Crime Branch police of Hyderabad. Here are the details of the interrogation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X